ಸರ್ಕಾರಿ ಬಸ್ನಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ಜೀವನ ಪರ್ಯಂತ ಉಚಿತ ಬಸ್ ಪಾಸ್!
ಕೆಲವು ತಿಂಗಳುಗಳ ಹಿಂದೆ ತೆಲಂಗಾಣ ಸರ್ಕಾರಿ ಬಸ್ನಲ್ಲಿ ಇಬ್ಬರು ಮಹಿಳೆಯರು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಸ್ಸಿನಲ್ಲಿ ಜನಿಸಿದ ಈ ಇಬ್ಬರೂ ಹೆಣ್ಣು ಮಕ್ಕಳಿಗೆ ಅವರ ಜೀವನ ಪರ್ಯಂತ ಉಚಿತ ಬಸ್ ಪಾಸ್ ನೀಡುವುದಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘೋಷಿಸಿದೆ.
ಕೆಲವು ದಿನಗಳ ಹಿಂದೆ ಸರ್ಕಾರಿ ಬಸ್ನಲ್ಲಿ ತೆರಳುವ ವೇಳೆ ಇಬ್ಬರು ಪ್ರತ್ಯೇಕ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಸ್ನಲ್ಲಿದ್ದ ಸಹಪ್ರಯಾಣಿಕ ಮಹಿಳೆಯರು ನೆರವು ನೀಡಿ, ಅವರಿಗೆ ಹೆರಿಗೆ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ತೆಲಂಗಾಣದ ನಾಗರಕರ್ನೂಲು ಡೀಪೋಗೆ ಸೇರಿದ ಬಸ್ವೊಂದರಲ್ಲಿ ನವೆಂಬರ್ 30ರಂದು ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಲ್ಲದೆ, ಆಸಿಫಾಬಾದ್ ಡಿಪೋಗೆ ಸೇರಿದ ಬಸ್ನಲ್ಲಿ ಡಿಸೆಂಬರ್ 7ರಂದು ಸಿದ್ದಿಪೇಟೆ ಬಳಿ ಇನ್ನೋರ್ವ ಮಹಿಳೆ ಬಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇದೀಗ ಆ ಇಬ್ಬರೂ ಹೆಣ್ಣು ಮಕ್ಕಳಿಗೆ ಜನ್ಮದಿನದ ಉಡುಗೊರೆಯಾಗಿ ಸರ್ಕಾರಿ ತೆಲಂಗಾಣ ಸಾರಿಗೆ ಸಂಸ್ಥೆಯು ಜೀವನ ಪರ್ಯಂತ ಉಚಿತ ಪಾಸ್ ನೀಡುವುದಾಗಿ ಘೋಷಿಸಿದೆ.
ಬ್ಬರೂ ಹೆಣ್ಣು ಮಕ್ಕಳಿಗೆ ಜೀವಮಾನದ ಉಚಿತ ಪಾಸ್ ನೀಡಲು ಸಂತಸವಾಗುತ್ತಿದೆ ಎಂದು ಟಿಎಸ್ಆರ್ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿಗೆ ಡಿಕ್ಕಿ ಹೊಡೆದ ಶಾಲಾ ಬಸ್; 20 ಮಕ್ಕಳಿಗೆ ಗಾಯ

