Fact Check: ಜಾಗೃತಿ ಮೂಡಿಸುವ ವಿಡಿಯೋವನ್ನು ಮಕ್ಕಳ ಅಪಹರಣದ ನೈಜ ಘಟನೆ ಎಂದು ಹಂಚಿಕೊಳ್ಳಲಾಗಿದೆ!

ಮಹಿಳೆಯೊಬ್ಬರು ಪಾರ್ಕ್‌ನಲ್ಲಿ ಬಾಲಕನನ್ನು ಅಪಹರಿಸುತ್ತಿರುವ ವೀಡಿಯೊವನ್ನು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ತನ್ನ ಸಹೋದರಿಯನ್ನೂ ಮಹಿಳೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸುತ್ತಿರುವ ಬಾಲಕನನ್ನೂ ಸಹ ಎಳೆದುಕೊಂಡು ಹೋಗುತ್ತಿರುವ ಮಹಿಳೆಯನ್ನು ದಾರಿಹೋಕರು ತಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ. ವೀಡಿಯೊದ ಒಂದು ವಿಭಜಿತ ಸೆಕೆಂಡ್‌ನ ದೃಶ್ಯವು ಫೋಸ್ಟ್‌ನ ಪ್ರತಿಪಾದನೆಯನ್ನು ನಿರಾಕರಿಸುತ್ತದೆ ಮತ್ತು ಮಕ್ಕಳ ಅಪಹರಣಕಾರರ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತದೆ.

ಉದ್ಯಾನವನಗಳಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಟ್ವಿಟರ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://twitter.com/P39467125Pandey/status/1471335771860725760?s=20

ಇದೇ ವಿಡಿಯೋವನ್ನು ಮುಸ್ಲಿಂ ವಿರೋಧಿ ಹೇಳಿಕೆಯೊಂದಿಗೂ ಕೂಡ ಹಂಚಿಕೊಳ್ಳಲಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು (1, 2) ಮಹಿಳೆಯನ್ನು “ಜಿಹಾದಿ” ಎಂದು ಕರೆದಿದ್ದಾರೆ. ಜಿಹಾದಿ ಎಂಬ ಪದವು ಮುಸ್ಲಿಮರಿಗೆ ಬಳಸುವ ಅವಹೇಳನಕಾರಿ ಪದವಾಗಿದೆ.

ಸತ್ಯ – ಜಾಗೃತಿ ಮೂಡಿಸುವ ವೀಡಿಯೊವನ್ನು ನೈಜ ಘಟನೆಯೆಂದು ಬಿಂಬಿಸಲಾಗಿದೆ. 

ವಿಡಿಯೋಗೆ ಸಂಬಂಧಿಸಿದಂತೆ ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದಾಗ, ಫೇಸ್‌ಬುಕ್‌ನಲ್ಲಿ ವೀಡಿಯೊದ 5 ನಿಮಿಷಗಳ ದೀರ್ಘ ಆವೃತ್ತಿಯ ವಿಡಿಯೋ ದೊರೆತಿದೆ.

7-ಸೆಕೆಂಡ್ ಮಾರ್ಕ್‌ನಲ್ಲಿ, ವೀಡಿಯೊ “ಮನರಂಜನಾ ಉದ್ದೇಶಗಳಿಗಾಗಿ” ಎಂದು ಹೇಳುವ ಹೇಳಿಕೆಯನ್ನು ಗಮನಿಸಬಹುದು.

ಆದ್ದರಿಂದ, ಪಾರ್ಕ್‌ಗಳಿಂದ ಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಿರುಚಿತ್ರದ ತುಂಡರಿಸಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಕೆಲವರು ಇದೇ ವಿಡಿಯೋವನ್ನು ಮುಸ್ಲಿಮರ ವಿರುದ್ದ ದ್ವೇಷ ಹರಡಲು ಬಳಸಿಕೊಂಡಿದ್ದಾರೆ.

ಕೃಪೆ: ಆಲ್ಟ್‌ ನ್ಯೂಸ್‌

ಇದನ್ನೂ ಓದಿ: Fact Check: ಕಸಬ್‌ನ ಮರಣದಂಡನೆಯನ್ನು ರದ್ದುಗೊಳಿಸಲು ಕೋರಿ ಅಖಿಲೇಶ್ ಯಾದವ್ ಅರ್ಜಿಗೆ ಸಹಿ ಹಾಕಿರಲಿಲ್ಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights