ರೋಹಿಣಿ ಕೋರ್ಟ್ ಸ್ಫೋಟ: ನೆರೆಹೊರೆಯವರನ್ನು ಕೊಲ್ಲಲು ಬಾಂಬ್‌ ಇಟ್ಟಿದ್ದ ಡಿಆರ್‌ಡಿಒ ವಿಜ್ಞಾನಿ ಬಂಧನ!

ನವೆಂಬರ್ ತಿಂಗಳ ಆರಂಭದಲ್ಲಿ ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಪೊಲೀಸರು ಆರೋಪಿಯೊಬ್ಬರನ್ನು ಶನಿವಾರ ಬಂಧಿಸಿದ್ದಾರೆ. ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಆತ 49 ವರ್ಷದ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ವಿಜ್ಞಾನಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಭರತ್ ಭೂಷಣ್ ಕಟಾರಿಯಾ ಎಂದು ಗುರುತಿಸಲಾಗಿದ್ದು. ಇವರು,  ನ್ಯಾಯಾಲಯದ ವ್ಯಾಜ್ಯವೊಂದರಲ್ಲಿ ಈ ವಿಜ್ಞಾನಿ ಸಿಲುಕಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ತಮ್ಮ ನೆರೆಯ ವಕೀಲರೊಬ್ಬರೊಂದಿಗೆ ಜಗಳವಾಡಿದ್ದರು. ಹೀಗಾಗಿ, ಡಿಸೆಂಬರ್ 9 ರಂದು ಅವರೇ ಬಾಂಬ್ ತಯಾರಿಸಿ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಇಟ್ಟಿದ್ದರು. ಬಾಂಬ್‌ ಸ್ಪೋಟದಲ್ಲಿ ನಾಲ್ವರು ಗಾಯಗೊಂಡಿದ್ದರು.

ಆರೋಪಿಯು ಘಟನೆ ನಡೆದ ದಿನ ಬೆಳಗ್ಗೆ 9.33ಕ್ಕೆ ಎರಡು ಬ್ಯಾಗ್‌ಗಳೊಂದಿಗೆ ನ್ಯಾಯಾಲಯವನ್ನು ಪ್ರವೇಶಿಸಿದ್ದು, ಅದರಲ್ಲಿ ಒಂದನ್ನು ನ್ಯಾಯಾಲಯದ ಕೊಠಡಿಯೊಳಗೆ ಬಿಟ್ಟು ಹೋಗಿದ್ದಾರೆ ಎಂದು  ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ಮಾಹಿತಿ ನೀಡಿದ್ದಾರೆ.

“ಈ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರು ನೆರೆಹೊರೆಯವರು ಮತ್ತು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮೇಲ್ನೋಟಕ್ಕೆ, ಕಟಾರಿಯಾ ವಕೀಲರ ವಿರುದ್ಧ ದ್ವೇಷ ಹೊಂದಿದ್ದರು ಎಂದು ತೋರುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಪ್ರಕರಣ; ದಂಡ ವಿಧಿಸಿದ್ದಕ್ಕೆ ಹುಸಿ ಕರೆ ಮಾಡಿದ್ದ ಕಿಡಿಗೇಡಿ ಪ್ರಯಾಣಿಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights