ಪೊಲೀಸರು ಹಣ ಪಡೆದು ಡ್ರಗ್ಸ್‌ ದಂದೆ ಬೆಳೆಯಲು ಬಿಟ್ಟಿದ್ದರು: ಮಾಜಿ ಎಸಿಪಿ ಅಶೋಕ್ ಕುಮಾರ್

ಸ್ಯಾಂಡಲ್‌ವುಡ್‌ನಿಂದ ಶುರುವಾದ ಡ್ರಗ್ಸ್‌ ಮಾಫಿಯಾದ ಜಾಲ ರಾಜಕೀಯ ಪಡಸಾಲೆಯನ್ನೂ ದಾಟಿದ್ದು, ಈಗ ಪೊಲೀಸರ ಬುಡಕ್ಕೂ ಬಂದು ನಿಂತಿದೆ. ಪೊಲೀಸರು ದುಡ್ಡು ಪಡೆದು ಡ್ರಗ್ಸ್ ದಂಧೆ ನಡೆಯಲು ಅವಕಾಶ ಕೊಟ್ಟಿದ್ದರು ಎಂದು ನಿವೃತ್ತ ಎಸಿಪಿ ಅಧಿಕಾರಿ ಅಶೋಕ್ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಮಾಧ್ಯಮಗಳಲ್ಲಿ ಡ್ರಗ್ಸ್‌ ಮಾಫಿಯಾದ್ದೇ ಸ್ಟೋರಿಗಳು ಪ್ರಸಾರವಾಗುತ್ತಿರುವ ಸಂದರ್ಭದಲ್ಲಿ ಅದೇ ವಿಚಾರ ದೊಡ್ಡದೆಂದು ಭಾವಿಸಲಾಗಿದ್ದು, ಇದೇ ಸಂದರ್ಭದಲ್ಲಿ ಡ್ರಗ್ಸ್‌ ಮಾಫಿಯಾದಲ್ಲಿ ಪೊಲೀಸರ ಪಾತ್ರವೂ ಇದೆ ಎಂದು ಅಶೋಕ್ ಕುಮಾರ್‌ ಹೇಳಿಕೆ ನೀಡಲಾಗಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸ್ತವಾಗಿದೆ.

ಇಲ್ಲಿಯವರೆಗೆ ಪೊಲೀಸರು ದುಡ್ಡು ಪಡೆದು ಡ್ರಗ್ಸ್ ದಂಧೆ ನಡೆಸಲು ಬಿಟ್ಟಿದ್ದರು ಈಗ ಕೇಂದ್ರ ತನಿಖಾ ತಂಡ ಪ್ರಕರಣ ಭೇದಿಸಿದ ನಂತರ ಪೈಪೋಟಿಗೆ ಬಿದ್ದವರಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊದಲೇ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಭಯೋತ್ಪಾದನೆಗಿಂತ ಡ್ರಗ್ಸ್ ವ್ಯಸನ ಅಪಾಯಕಾರಿ. ಇದನ್ನು ಮಟ್ಟಹಾಕದೆ ಇದ್ದರೆ ಲಕ್ಷಾಂತರ ಮಕ್ಕಳು ಭವಿಷ್ಯ ಕಳೆದುಕೊಳ್ಳುತ್ತಾರೆ ಎಂದು ಅಶೋಕ್‌ ಕುಮಾರ್ ಆರೋಪಿಸಿದ್ದಾರೆ.

ಅಶೋಕ್ ಕುಮಾರ್
ಅಶೋಕ್ ಕುಮಾರ್

ಡ್ರಗ್ಸ್‌ ಮಾಫಿಯಾ ವಿಚಾರವಾಗಿ ನಟಿ ರಾಗಿಣಿ, ಸಂಜನಾ ಮತ್ತು ಅವರ ಆಪ್ತರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ನಡುವೆ ಕಲಬುರ್ಗಿಯಲ್ಲಿ ಒಂದು ಟನ್‌ನಷ್ಟು ಗಾಂಜಾ ಪತ್ತೆಯಾಗಿದ್ದು, ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಬ್ಲೂಫಿಲ್ಮ್ ಕೂಡ ಡ್ರಗ್ಸ್‌ನಂತೆಯೆ ವ್ಯಸನ; ಬ್ಯೂಫಿಲ್ಮ್ ನೋಡುವವರು ಡಿಸಿಎಂ ಆಗಿದ್ದಾರೆ: ಸಾರಾ ಮಹೇಶ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights