ನವಿಲುಗಳೊಂದಿಗೆ ಬ್ಯುಸಿಯಿರುವ ಅಹಂಕಾರಿ ವ್ಯಕ್ತಿ ಹೇರಿದ ಲಾಕ್‌ಡೌನ್‌ ಕೊರೊನಾ ಹರಡಲು ಕಾರಣ: ರಾಹುಲ್‌ಗಾಂಧಿ

ನವಿಲುಗಳ ಜೊತೆ ಬ್ಯುಸಿಯಾಗಿರುವ ಅಹಂಕಾರಿ ಮನುಷ್ಯನು ದೇಶಾದ್ಯಂತ ಹೇರಿದ ‘ಯೋಜಿತವಲ್ಲದ ಲಾಕ್‌ಡೌನ್’‌ ಪರಿಣಾಮ ಕೊರೊನಾ ಹರಡುವುದಷ್ಟೇ ಅಲ್ಲದೆ, ಆರ್ಥಿಕತೆಯೂ ಮುಳುಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಪ್ರಧಾನಿಯವರು ತಮ್ಮ ನವಿಲುಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಅವರಿಗೆ ದೇಶದ ನಾಗರಿಕರ ಬಗ್ಗೆ ಚಿಂತೆಯಿಲ್ಲ. ಹೀಗಾಗಿ ದೇಶದ ಜನರು ನಿಮ್ಮ ಜೀವ, ಜೀವನವನ್ನು ನೀವೇ ಕಾಪಾಡಿಕೊಳ್ಳಬೇಕು. ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಮೋದಿ ವಿರುದ್ಧ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

‘ದೇಶದಾದ್ಯಂತ ಕೊರೊನಾವೈರಸ್‌ ಪ್ರಕರಣಗಳು ಈ ವಾರದಲ್ಲಿ 50 ಲಕ್ಷದ ಗಡಿ ದಾಟಲಿದೆ. 10 ಲಕ್ಷ ಸಕ್ರಿಯ ಪ್ರಕರಣಗಳು ಕಂಡುಬರಲಿವೆ. ಯಾವುದೇ ಯೋಜನೆಯಿಲ್ಲದೆ ಲಾಕ್‌ಡೌನ್‌ ಜಾರಿಗೊಳಿಸಿದ್ದು ಅಹಂ ತುಂಬಿದ ವ್ಯಕ್ತಿಯ ಕೊಡುಗೆಯಾಗಿದ್ದು, ದೇಶದಾದ್ಯಂತ ಕೊರೊನಾವೈರಸ್‌ ಹರಡಲು ಕಾರಣವಾಯಿತು’ ಎಂದು ಟ್ವೀಟ್‌ ಮಾಡಿದ್ದಾರೆ.

‘ಆತ್ಮನಿರ್ಭರ’ ಯೋಜನೆಗೆ ಸಂಬಂಧಿಸಿದಂತೆಯೂ ಪ್ರಧಾನಿ ವಿರುದ್ಧ ಕಿಡಿಕಾರಿರುವ ರಾಹುಲ್‌, ‘ಮೋದಿ ಸರ್ಕಾರವು ಜನರಿಗೆ ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದೆ. ನೀವು ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ಕಾಪಾಡಿಕೊಳ್ಳಿ. ಏಕೆಂದರೆ ಪ್ರಧಾನಿ ನವಿಲುಗಳೊಂದಿಗೆ ಬ್ಯುಸಿಯಾಗಿದ್ದಾರೆ’ ಎಂದೂ ಟೀಕಿಸಿದ್ದಾರೆ.


ಇದನ್ನೂ ಓದಿ: ಮಂತ್ರಮಂಡಲ ವಿಸ್ತರಣೆ : ಬಿಎಸ್ವೈಗೆ ತಲೆ ನೋವಾದ ಬಿಜೆಪಿ ರೆಬೆಲ್ ಸ್ಟಾರ್‌ಗಳು ಎಚ್ಚರಿಕೆ!

Spread the love

Leave a Reply

Your email address will not be published. Required fields are marked *