fact check: ಮುಸ್ಲಿಂ ಯುವಕನಿಂದ ಕಳ್ಳತನ ಎಂದು ನಟಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಯುವತಿಯೊಬ್ಬಳ ಸ್ಕೂಟರ್ ಸ್ಟಾರ್ಟ್ ಆಗದೆ ನಿಂತಿದ್ದಾಗ ಮುಸ್ಲಿಂ ಯುವಕನೊಬ್ಬ ಸ್ಕೂಟರ್ ಅನ್ನು ರಿಪೇರಿ ಮಾಡುವ ನೆಪದಲ್ಲಿ ಅದನ್ನು ಕದಿಯುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ವೈರಲ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

“ಮುಸ್ಲಿಮನ ಮಗ ಹುಡುಗಿಯ ಆಕ್ಟಿವಾವನ್ನು ಹೇಗೆ ತೆಗೆದುಕೊಂಡು ಹೋಗುತ್ತಾನೆ ಎಂಬುದನ್ನು ನೋಡಿ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

ನಾವು ಈ ವಿಡಿಯೋದ ನೈಜತೆಯನ್ನು ಪರೀಕ್ಷಿಸಿದಾಗ ಈ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯಾವಳಿಯು ಸಿಸಿ ಟಿವಿ ಯಿಂದ ಸೆರೆಯಾಗಿರುವ ವಿಡಿಯೋದಲ್ಲಾ ಬದಲಿಗೆ ಇದೊಂದು ಪೂರ್ವ ನಿಯೋಜಿತ ಸ್ಕ್ರಿಪ್ಟೆಡ್ ಎಂದರೆ ನಟಿಸಿದ ವಿಡಿಯೋ ಎಂದು ತಿಳಿದು ಬಂದಿದೆ.

‘ಶಿಕ್ಷಣ ಮತ್ತು ಜಾಗೃತಿ ಉದ್ದೇಶಗಳಿಗಾಗಿ’ ನಟಿಸಿದ ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುವ ಸಂಜನಾ ಗಲ್ರಾನಿ ಅವರ ವೆರಿಫೈಯ್ಡ್ ಫೇಸ್‌ಬುಕ್ ಅಕೌಂಟ್ ನಿಂದ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಆದರೂ ಗಲ್ರಾನಿ ಅವರ ವೀಡಿಯೊಗಳು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗಿವೆ.

 

https://twitter.com/UmaShankar2054/status/1478737825759514626?ref_src=twsrc%5Etfw%7Ctwcamp%5Etweetembed%7Ctwterm%5E1478737825759514626%7Ctwgr%5E%7Ctwcon%5Es1_&ref_url=https%3A%2F%2Fwww.boomlive.in%2Ffact-check%2Fscripted-video-man-stealing-scooter-muslim-communal-fact-check-16404

 

(Original text in Hindi: देखिए मुल्ले का एक लड़का कैसे एक लड़की की एक्टिवा को उड़ा कर ले गया। CCTV कैमरे में हुआ कैद।)

ವೀಡಿಯೊ ವೀಕ್ಷಿಸಲು ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ.

ಸ್ವತಃ ವೈರಲ್ ವೀಡಿಯೋದ ಕೊನೆಯಲ್ಲಿ ತಿಳಿಸುವ ಹಾಗೆ ಈ ವೀಡಿಯೋವನ್ನು  ಸಾರ್ವಜನಿಕ ಜಾಗೃತಿಗಾಗಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 2:13 ಸೆಕೆಂಡ್‌ಗಳ ವಿಡಿಯೋದ ಕೊನೆಗೆ, “ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ (ನಟಿಸಿದ) ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಹೇಳುತ್ತದೆ. ಅಲ್ಲದೆ ಈ ಚಿತ್ರದಲ್ಲಿ ನಟಿಸಿದ ನಟರ ಧರ್ಮಗಳನ್ನು ಉಲ್ಲೇಖಿಸಿಲ್ಲ. ಹಾಗಾಗಿ ಮುಸ್ಲಿಂ ಯುವಕ ಕದಿಯುತ್ತಿದ್ದಾನೆ ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ.

“ಸಂಜನಾ ಗಲ್ರಾನಿ”  ಆವರ ಫೇಸ್ ಬುಕ್  ಖಾತೆಯಿಂದ ಈ ಹಿಂದೆ ಇಂತಹ ಹಲವು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಒಳ್ಳೆಯ ಉದ್ದೇಶಗಳಿಗೆ ಹಂಚಿಕೊಳ್ಳಲಾಗಿದೆ, ಆದರೆ ಆ ವಿಡಿಯೋಗಳನ್ನು ಸುಳ್ಳು ಮತ್ತು ತಪ್ಪು ಹೇಳಿಕೆಗಳೊಂದಿಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಲಾಗಿದೆ.

ಗಲ್ರಾನಿ ಅವರ ಫೇಸ್‌ಬುಕ್ ಪುಟದಿಂದ ಪೋಸ್ಟ್ ಮಾಡಿದ ವೀಡಿಯೊಗಳನ್ನು ನೋಡಿದಾಗ, ಡಿಸೆಂಬರ್ 23, 2021 ರಂದು ಪೋಸ್ಟ್ ಮಾಡಿದ ವೈರಲ್ ವೀಡಿಯೊಗಳು ನಮಗೆ ಲಭ್ಯವಾಗಿವೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಈ ವೀಡಿಯೋಗಳನ್ನು ಸಂಜನಾ ಗಲ್ರಾನಿ ಅವರ ಸೋಶಿಯಲ್ ಮೀಡಿಯಾ ಪೇಜ್ ನಿಂದ ಪೋಸ್ಟ್ ಮಾಡಲಾಗಿದ್ದು ಇದನ್ನು ಜನ ಜಾಗೃತಿ ಮತ್ತು ಶೈಕ್ಷಣಿಕ ಉದ್ದೇಶದ ಕಾರಣಕ್ಕಾಗಿ ಮಾಡಲಾಗಿದೆ ಎಂದಿದ್ದರೂ ಈ ವೀಡಿಯೋಗಳನ್ನು ತಪ್ಪಾಗಿ ಬಳಸಿಕೊಂಡು ಕೆಲವರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಿಲು ಬಳಸಿಕೊಂಡಿರುವುದು ಮಾತ್ರ ವಿಪರ್ಯಾಸ.


ಇದನ್ನು ಓದಿರಿ: Fact check: ಕಾಂಗ್ರೆಸ್‌ ಅಭ್ಯರ್ಥಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಾಯಿ ಎದುರು ಎಸ್‌ಪಿ ಅಭ್ಯರ್ಥಿ ನಿಲ್ಲುಸುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights