Fact check: ಇಂಡೋನೇಷ್ಯಾದಲ್ಲಿ ನಡೆದ ವಿಮಾನ ಅಪಘಾತ ಎಂದು ಗ್ರಾಫಿಕ್ಸ್ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ

ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇಂಡೋನೇಷ್ಯಾ ವಿಮಾನವು ಭೀಕರ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ಕಾರಣ ಭಯದಿಂದ ವಿಮಾನದಿಂದ ಹೊರಬರುತ್ತಿದ್ದೇವೆ ಎಂದು ಪ್ರಯಾಣಿಕರು ಈ ಪೋಸ್ಟ್‌ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ಪ್ರತ್ಯೇಕ ವಿಡಿಯೋಗಳನ್ನು ಒಟ್ಟಿಗೆ ಜೋಡಿಸಿರುವುದು ಸ್ಪಷ್ಟವಾಗುತ್ತದೆ. ಇದು ಎಷ್ಟು ಸತ್ಯ ಎಂಬುದನ್ನು ಈ ಫ್ಯಾಕ್ಟ್ ಚೆಕ್ ಮೂಲಕ ನೋಡೋಣ.

 

ಈ ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಎರಡು ವೀಡಿಯೊ ಕ್ಲಿಪ್‌ಗಳ ವಿವರಗಳನ್ನು ಒಂದೊಂದಾಗಿ ತಿಳಿಯುವ.

ವೀಡಿಯೊ ಕ್ಲಿಪ್-1:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಮೊದಲ ವೀಡಿಯೊ ಕ್ಲಿಪ್‌ನ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್‌ನಲ್ಲಿಹುಡುಕಾಡಿದಾಗ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು 02 ಮೇ 2020 ರಂದು ‘Bopbibun’ ಯೂಟ್ಯೂಬ್ ಚಾನೆಲ್ ಪ್ರಸಾರಮಾಡಿದೆಎಂದು ತಿಳಿದುಬಂದಿದೆ. “ಕುಡಿತದಅಮಲಿನಲ್ಲಿದ್ದ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶಮಾಡಿದವಿಡಿಯೊಎಂದುಶೀರ್ಷಿಕೆನೀಡಲಾಗಿದೆ. ಆದರೂ, ‘ಎಕ್ಸ್-ಪ್ಲೇನ್ 11’ಎಂಬ ಫ್ಲೈಟ್ ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಿ ವೀಡಿಯೊವನ್ನು ರಚಿಸಲಾಗಿದೆ. ಜೊತೆಗೆ ಈ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳು ನಿಜವಾದ ಘಟನೆಗೆ ಸಂಬಂಧಿಸಿಲ್ಲ ಎಂದು ವಿಡಿಯೋದವಿವರಣೆಯು ಸ್ಪಷ್ಟಪಡಿಸಿದೆ.

ಬೊಪ್‌ಬಿಬನ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿವಿಧ ದೇಶಗಳ ವಿಮಾನಗಳ ಕ್ರ್ಯಾಶ್ ಸಿಮ್ಯುಲೇಶನ್ ವೀಡಿಯೊಗಳನ್ನು ನೋಡಬಹುದು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಿ ರಚಿಸಲಾಗಿದೆ ಎಂದು ಹೇಳಬಹುದು.

ವೀಡಿಯೊ ಕ್ಲಿಪ್-2:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿನ ವೀಡಿಯೊ ಕ್ಲಿಪ್ ಸ್ಕ್ರೀನ್ ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟದಿಂದ‘ಯೇನಿ ಸಫಕ್’ಸುದ್ದಿ ವಾಹಿನಿಯು 07 ಜನವರಿ 2022 ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಮುಖ್ಯ ಗೇರ್ ಅಪಘಾತದಿಂದಾಗಿ ಕ್ಯಾಸ್ಪಿಯನ್ ಏರ್ಲೈನ್ಸ್ ಬೋಯಿಂಗ್ 730-400 ಇರಾನ್‌ನ ಇಸ್ಫಹಾನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ವಿಮಾನದಲ್ಲಿದ್ದ 110 ಪ್ರಯಾಣಿಕರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು, ಅವರಲ್ಲಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೋಸ್ಟ್ ತಿಳಿಸಿದೆ.

 

ಈ ಅಪಘಾತವು 05 ಜನವರಿ 2022 ರಂದು ಸಂಭವಿಸಿದೆ ಎಂದು ವರದಿಯಾಗಿದೆ. ಕ್ಯಾಸ್ಪಿಯನ್ ಏರ್‌ಲೈನ್ಸ್ ಬೋಯಿಂಗ್ 730-400 ಇಸ್ಫಹಾನ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದಘಟನೆಯನ್ನುಪ್ರಕಟಿಸಿದ ಸುದ್ದಿ ಲೇಖನಗಳು ಮತ್ತು ವೀಡಿಯೊಗಳನ್ನು ಇಲ್ಲಿ ಕಾಣಬಹುದು. ಈ ವಿವರಗಳ ಆಧಾರದ ಮೇಲೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕ್ಲಿಪ್ ಇರಾನ್‌ನಲ್ಲಿ ಇತ್ತೀಚಿಗ ನಡೆದ ವಿಮಾನ ಅಪಘಾತದ ದೃಶ್ಯಗಳುಎಂದುಸ್ಪಷ್ಟವಾಗಿಹೇಳಬಹುದು.

ಅಂತಿಮವಾಗಿ, ಸಿಮ್ಯುಲೇಶನ್ಗ್ರಾಫಿಕ್ಸ್ವಿಮಾನದೃಶ್ಯಗಳುಮತ್ತುಇರಾನ್‌ನಲ್ಲಿ ಇತ್ತೀಚಿಗೆನಡೆದ ವಿಮಾನ ಅಪಘಾತದ ದೃಶ್ಯಗಳನ್ನು ಸಂಯೋಜಿಸಿ ಇಂಡೋನೇಷ್ಯಾದಲ್ಲಿ ನಡೆದಭೀಕರವಿಮಾನ ಅಪಘಾತದ ದೃಶ್ಯಗಳುಎಂದು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿರಿ: Fact Check: ಪಂಜಾಬ್ ಸಿಎಂ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದು ನಿಜವೇ..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.