Fact check : ಬೆಟ್ಟದ ಅಂಚಿನಲ್ಲಿ ಕಾರನ್ನು ಯೂ ಟರ್ನ್ ಮಾಡಿರುವುದು ನಿಜವೇ?

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ಕಾರೊಂದು ಬೆಟ್ಟದ ತುದಿಯಲ್ಲಿದ್ದು ಮುಂದೆ ಹೋಗಲು ರಸ್ತೆ ಇಲ್ಲದ ಕಾರಣ ಮತ್ತು ಮುಂದುವರೆದರೆ ಚಾಲಕನು ಪ್ರಾಣ ಕಳೆದುಕೊಳ್ಳಬಹುದು ಎಂಬ ಕಾರಣಕ್ಕಾಗಿ ಕಿರಿದಾದ ರಸ್ತೆಯಲ್ಲಿ ಚಾಲಕನು ಕಾರನ್ನು ಯು-ಟರ್ನ್ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ವೀಡಿಯೊ ದೃಶ್ಯಗಳನ್ನು ನೋಡುತ್ತಿದ್ದರೆ ಮೈ ಜುಂ ಎನ್ನಿಸುವಂತ ಅನುಭವವಾಗುತ್ತದೆ. ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಲಾಗಿರುವ ವಿಡಿಯೋದ ವಾಸ್ತವವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ವೈರಲ್ ವಿಡಿಯೊದಲ್ಲಿ ಕಾರೊಂದು ಬೆಟ್ಟದ ಅಂಚಿನಲ್ಲಿ ಮುಂದೆ ಹೊಗಲಾಗದೆ ಕಿರಿದಾದ ರಸ್ತೆಯಲ್ಲಿ ಕಾರು ಚಾಲಕ ಕಾರನ್ನು ಯು-ಟರ್ನ್ ಮಾಡುವ ದೃಶ್ಯವಾಗಿದ್ದು ಕಾರಿನ ಹಿಂಬದಿಯಲ್ಲಿ ದೊಡ್ಡ ಪ್ರಪಾತ ಇರುವಂತೆ ಕಾಣುತ್ತಿದೆ. ಆದರೆ ಅದೇ ದೃಶ್ಯವನ್ನು ಮತ್ತೊಂದು ಬದಿಯಿಂದ ವಿಡಿಯೋ ಮಾಡಿದ್ದು ಆ ದೃಶ್ಯದಲ್ಲಿ ಕಾರನ್ನು ಯೂ ಟರ್ನ್ ಮಾಡುತ್ತಿರುವ ರಸ್ತೆಯ ಅಂಚಿನ ಕೆಳಗೆ ಮತ್ತೊಂದು ರಸ್ತೆ ಇರುವುದು ಕಾಣುತ್ತದೆ ಹಾಗಾಗಿ ವೀಡಿಯೋದಲ್ಲಿ ಪ್ರತಿಪಾದಿಸಿದಂತೆ ಬೆಟ್ಟದ ಅಂಚು ಅಲ್ಲ ಎಂಬುದು ದೃಢವಾಗುತ್ತದೆ.

ವಿಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ,  ಅದೇ ವೀಡಿಯೊದೊಂದಿಗೆ ಅನೇಕ ಪೋಸ್ಟ್‌ಗಳು ಕಂಡುಬಂದಿವೆ. ‘ಡ್ರೈವಿಂಗ್ ಸ್ಕಿಲ್’ ಯೂಟ್ಯೂಬ್ ಚಾನೆಲ್‌ನ , 25 ಡಿಸೆಂಬರ್ 2021 ರಂದು ಅಪ್‌ಲೋಡ್ ಮಾಡಿರುವ ವೀಡಿಯೊ ಎಂದು ಮಾಹಿತಿ ಲಭ್ಯವಾಗಿದೆ.  ಚಾನೆಲ್‌ನಲ್ಲಿ ಹಿಂದಿನ ದಿನ ಅದೇ ಕಾರಿನ ಯು-ಟರ್ನ್‌ನ ಮತ್ತೊಂದು ಕೋನದ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದನ್ನು ನೋಡಬಹುದು. ಆ ವೀಡಿಯೋವನ್ನು ನೋಡಿದಾಗ, ಬೆಟ್ಟದ ಅಂಚಿನಲ್ಲಿ ಯು-ಟರ್ನ್ ಮಾಡಲಾಗಿಲ್ಲ ಎಂಬುದು ದೃಢಪಟ್ಟಿದೆ. ಸರ್ಚ್ ಮಾಡಿದಾಗ ಲಭ್ಯವಾದ  ವೀಡಿಯೊದಲ್ಲಿ ಯೂಟರ್ನ್ ಮಾಡುತ್ತಿರುವ ರಸ್ತೆಯ ಬದಿಯಲ್ಲಿ ಸ್ವಲ್ಪ ಕೆಳಗೆ ಮತ್ತೊಂದು ರಸ್ತೆ ಇದೆ. ಅಲ್ಲಿ ಮತ್ತೊಂದು ಕಾರು ಸಹ ಸಂಚರಿಸುವುದನ್ನು ನೋಡಬಹುದು.

ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ಕಾರಿನ ಇತರ ಹಲವು ವೀಡಿಯೊಗಳಿವೆ. ಅವುಗಳನ್ನು ಇಲ್ಲಿ ವೀಕ್ಷಿಸಬಹುದು. ವೈರಲ್ ಆಗಿರುವ ಯು-ಟರ್ನ್ ವಿಡಿಯೋ ಕುರಿತು ‘ಡೈಲಿ ಮೇಲ್’ ಲೇಖನವನ್ನೂ ಪ್ರಕಟಿಸಿದ್ದು ಅದನ್ನು ಇಲ್ಲಿ ಓದಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ವೀಡಿಯೊದಲ್ಲಿ ಕಾರ್ ಯು-ಟರ್ನ್ ಬೆಟ್ಟದ ಅಂಚಿನಲ್ಲಿರಲಿಲ್ಲ. ಸ್ವಲ್ಪ ಕೆಳಗೆ ರಸ್ತೆ ಇರುವುದು ಖಾತ್ರಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೆಟ್ಟದ ತುದಿಯಲ್ಲಿ ಯೂಟರ್ನ್ ಮಾಡಲಾಗಿದೆ ಎಂದು ಹೇಳುತ್ತಿರುವುದು ಸುಳ್ಳಾಗಿದ್ದು ಹಿಂಬದಿಯ ಸ್ವಲ್ಪ ಕೆಳಗೆ ರಸ್ತೆ ಇರುವುದು ಸತ್ಯ ಮತ್ತು ಇದೊಂದು  ‘ಡ್ರೈವಿಂಗ್ ಸ್ಕಿಲ್’ ಯೂ ಟ್ಯೂಬ್ ಚಾನೆಲ್‌ವೊಂದು ಚಾಲನಾ ಕೌಶಲ್ಯದ ಬಗ್ಗೆ ತರಬೇತಿ ನೀಡುವ ಕಾರಣಕ್ಕೆ ಈ ರೀತಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಿಲ್ಲಾಧಿಕಾರಿ ಏಕೆ ಮೇಕಪ್ ಮಾಡಿಲ್ಲ? – ಇದು ಕಲ್ಪಿತ ಕಥೆ ಹೊರತು ನೈಜ ಘಟನೆಯಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights