Fact check: ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸುಳ್ಳು
ಇತ್ತೀಚೆಗೆ ದೆಹಲಿಯ ಕಸ್ತೂರ ಬಾ ನಗರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ವರದಿಯಾಗಿತ್ತು. ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ದುರ್ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾದ 21 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೋಮವಾರ ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ಗಳು ವೈರಲ್ ಆಗಿವೆ. ಆದರೆ ದೆಹಲಿ ಪೊಲೀಸರು ಯುವತಿಯ ಆತ್ಮಹತ್ಯೆ ಸುದ್ದಿಯನ್ನು ನಿರಾಕರಿಸಿದ್ದರೆ ಮತ್ತು ಮಹಿಳೆ ತನ್ನ ಪತಿಯೊಂದಿಗೆ ಸುರಕ್ಷಿತ ಮನೆಯಲ್ಲಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಎಂದು ಹೇಳಿದ್ದಾರೆ.
ಜನವರಿ 26 ರಂದು ದೆಹಲಿಯ ಕಸ್ತೂರ ಬಾ ನಗರದಲ್ಲಿರುವ ಆಕೆಯ ಮನೆಯಿಂದ 21 ವರ್ಷದ ಮಹಿಳೆಯನ್ನು ಅಪಹರಿಸಿ ಆಕೆಯ ನೆರೆಹೊರೆಯವರೆಂದು ಪೊಲೀಸರು ಹೇಳುವ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ನರಕ ಯಾತನೆ ಅಲ್ಲಿಗೆ ನಿಲ್ಲಲಿಲ್ಲ, ಸಂತ್ರಸ್ತೆಯನ್ನು ಆಕೆಯ ನೆರೆ ಮನೆಯವರು ಕೂಡ ಮನಬಂದಂತೆ ಥಳಿಸಿ, ಅಸಹ್ಯಕರವಾಗಿ ನಿಂದಿಸಿ, ಮೆರವಣಿಗೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಅತಾಚಾರಕ್ಕೊಳಗಾದ ಮಹಿಳೆಯ ಮೇಲೆ ಮತ್ತೊಮ್ಮೆ ದೌರ್ಜನ್ಯ ಎಸಗಲಾಯಿತು. ದೌರ್ಜನ್ಯ ಮಾಡಿರುವವರು ಮಹಿಳೆಯರು ಎಂಬುದು ಬೇಸರದ ಸಂಗತಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಮಹಿಳೆಯರು ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ ಅದರಲ್ಲಿ ಮೂವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ, ಅಪಹರಣ ಕೇಸ್ಗಳನ್ನು ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ಆದ ಪೋಸ್ಟ್ಗಳಲ್ಲಿ ಮಹಿಳೆಯ ಮುಖವನ್ನು ಕಾಣದಂತೆ ಆಕೆಯ ಮೇಲೆ ಮಹಿಳೆಯರು ನಡೆಸಿದ ದೌರ್ಜನ್ಯದ ವಿಡಿಯೊವನ್ನು ಶೇರ್ ಮಾಡಿದ್ದಾರೆ, ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆಕೆ ಸಿಖ್ ಸಮುದಾಯಕ್ಕೆ ಸೇರಿದ್ದಾಳೆ ಎಂಬ ಹೇಳಿಕೆಯಿರುವ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.

ಫ್ಯಾಕ್ಟ್ಚೆಕ್:
ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು ಸಂತ್ರಸ್ತೆಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಮತ್ತು ಆಕೆ ತನ್ನ ಪತಿಯೊಂದಿಗೆ ಸುರಕ್ಷಿತವಾಗಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಸುಳ್ಳು ಎಂದು ದೃಢಪಡಿಸಿದ್ದಾರೆ. ಸಂತ್ರಸ್ತೆಯ ಚಿಕ್ಕಪ್ಪ ಕೂಡ ಮಾಧ್ಯಗಳೊಂದಿಗೆ ಮಾತನಾಡಿದ್ದು , ನಾನು ಎರಡು ದಿನಗಳಿಂದ ಅವಳೊಂದಿಗೆ ಮಾತನಾಡಿಲ್ಲ, ದೆಹಲಿ ಪೊಲೀಸರು ಗುರುತಿಸಿರುವ ಸುರಕ್ಷಿತ ಮನೆಯಲ್ಲಿ ಆಕೆ ತನ್ನ ಪತಿಯೊಂದಿಗೆ ಉಳಿದುಕೊಂಡಿದ್ದಾರೆ ನಾನು ಆಕೆಯ ಗಂಡನೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

“ಅವಳು ಸಾಯುತ್ತಿರುವ ಬಗ್ಗೆ ಅಥವಾ ಅವಳು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಹರಡಿರುವ ಸುದ್ದಿ ಸುಳ್ಳಾಗಿದ್ದು. ನಾನು ಬೆಳಿಗ್ಗೆ ಅವಳ ಪತಿಯೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಕೂಡ ಆತ್ಮಹತ್ಯೆಯ ಯತ್ನದ ಬಗ್ಗೆ ಏನನ್ನು ಹೇಳಿಲ್ಲ” ಎಂದು ಮಹಿಳೆಯ ಚಿಕ್ಕಪ್ಪ ಹೇಳಿದರು. ಆತ್ಮಹತ್ಯೆ ಸುದ್ದಿಗೆ ಸಂಬಂಧಿಸಿದಂತೆ ವಿವೇಕ್ ವಿಹಾರ್ನ ಸಹಾಯಕ ಪೊಲೀಸ್ ಕಮಿಷನರ್ ಮನೋಜ್ ಪಂತ್ ಮಾತನಾಡಿದ್ದು, ಆತ್ಮಹತ್ಯೆಯ ವದಂತಿಗಳನ್ನು ತಳ್ಳಿಹಾಕಿದರು ಮತ್ತು ಮಹಿಳೆ ತನ್ನ ಪತಿಯೊಂದಿಗೆ ಸುರಕ್ಷಿತವಾಗಿದ್ದು, ಆ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಹಗಲಿರುಳು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು.
“ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂಬ ಪೋಸ್ಟ್ಗಳನ್ನು ಓದಿದ ನಂತರ ನಾನು ಸೋಮವಾರ ಅವರನ್ನು ಭೇಟಿ ಮಾಡಿದ್ದೇನೆ. ಅವರು ನನ್ನೊಂದಿಗೆ ಮಾತನಾಡಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ. ಅವರು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಮತ್ತು ಪತಿಯೊಂದಿಗೆ ಸುರಕ್ಷಿತ ಮನೆಯಲ್ಲಿದ್ದಾರೆ” ಎಂದು ಪಂತ್ ಹೇಳಿದರು. ಸಂತ್ರಸ್ತೆ ಸದ್ಯ ಚೇತರಿಸಿಕೊಳ್ಳುತ್ತಿದ್ದು ಆಕೆಯ ಆರೋಗ್ಯದ ಕುರಿತು ತೀವ್ರ ನಿಗಾವಹಿಸಲಾಗಿದೆ ಮತ್ತು ಆಕೆಗೆ ಅವಶ್ಯಕವಾದ ಆಹಾರವನ್ನು ನಾವು ಪೂರೈಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

“ಸಂತ್ರಸ್ತ ಮಹಿಳೆಯು ಸಾಕಷ್ಟು ನೊಂದಿದ್ದಾಳೆ ಮತ್ತು ಅವಳ ಕುಟುಂಬವೂ ದುಖಃದಲ್ಲಿದೆ. ಆತ್ಮಹತ್ಯೆಯ ವದಂತಿಗಳು ಕುಟುಂಬದ ದುಖಃವನ್ನು ಹೆಚ್ಚಿಸುತ್ತಿವೆ. ಈ ಸುಳ್ಳು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವವರ ಮೇಲೆ ನಾವು ನಿಗಾವಹಿಸಿದ್ದೇವೆ” ಎಂದಿರುವ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆರ್ ಸತ್ಯಸುಂದರಂ, ಮಹಿಳೆ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರು ಕೂಡ ಅಧಿಕೃತ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಡಿಸಿಪಿ ಸತ್ಯಸುಂದರಂ ಅವರು “ಜನರು ಸುಳ್ಳು ವದಂತಿಗಳನ್ನು ಹರಡದಂತೆ ಮತ್ತು ಹಾಗೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. “ಹಲವಾರು ಜನರು ಸಂತ್ರಸ್ತೆಯ ಬಗ್ಗೆ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ, ಆಕೆಯ ಗುರುತನ್ನು ಬಹಿರಂಗಪಡಿಸುತ್ತಿದ್ದಾರೆ ಮತ್ತು ಅದಕ್ಕೆ ಕೋಮು ಧ್ವನಿಯನ್ನು ಸಹ ನೀಡುತ್ತಿದ್ದಾರೆ. ಅಂತಹ ವದಂತಿಗಳನ್ನು ಪೋಸ್ಟ್ ಮಾಡುವವರ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಅಂತಹ ಪೋಸ್ಟ್ಗಳನ್ನು ಹಂಚಿಕೊಳ್ಳದಂತೆ ಜನರನ್ನು ಕೇಳುತ್ತೇವೆ. .” ಎಂದಿದ್ದಾರೆ.
अपील (पुलिस उपायुक्त, शाहदरा)
शाहदरा अपहरण एवं यौन हिंसा मामले में लोगों से अपील है कि, पीड़िता की पहचान उजागर न करें, भ्रामक तथ्य न फैलाएं। इस मामले में जिन लोगों ने भी अफवाह फैलाई है उनकी पहचान कर आवश्यक कार्यवाही की जा रही है। #DelhiPoliceUpdates @DCP_SHAHDARA @CPDelhi pic.twitter.com/HgRXKT5DUf
— Delhi Police (@DelhiPolice) January 31, 2022
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಜಿಲ್ಲಾಧಿಕಾರಿ ಏಕೆ ಮೇಕಪ್ ಮಾಡಿಲ್ಲ? – ಇದು ಕಲ್ಪಿತ ಕಥೆ ಹೊರತು ನೈಜ ಘಟನೆಯಲ್ಲ

