FACT CHECK | 2017 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯನ್ನು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೆ
ಪಶ್ಚಿಮ ಬಂಗಾಳದಲ್ಲಿ ಹಿಂದೂ ಯುವತಿಯರಿಗೆ ಮುಸ್ಲಿಂ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
क्या आप ऐसा ही पूरे भारत में देखना चाहते हैं
ये वीडियो पश्चिम बंगाल का है —
सुना है
जिहादी राह चलती हिन्दू लड़की को उसकी मां के सामने ही छेड़ते हैं, उठा लेते हैं –क्यों ,
क्योंकि वहां हिन्दू विरोधी और मुस्लिम परस्त सरकार है ।#जागोहिंदूजागो pic.twitter.com/IShCO7wd2g— राष्ट्रवादी सनातनी HiNdU (@HiNdU05019434) July 28, 2025
ರಾಷ್ಟ್ರವಾದಿ ಸನಾತನಿ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ನೀವು ಇದನ್ನು ಇಡೀ ಭಾರತದಾದ್ಯಂತ ನೋಡಲು ಬಯಸುತ್ತೀರಾ ಈ ವೀಡಿಯೊ ಪಶ್ಚಿಮ ಬಂಗಾಳದಿಂದ ಬಂದಿದೆ — ಜಿಹಾದಿಗಳು ತನ್ನ ತಾಯಿಯ ಮುಂದೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಿಂದೂ ಹುಡುಗಿಗೆ ಕಿರುಕುಳ ನೀಡುತ್ತಾರೆ, ಅವರು ಅವಳನ್ನು ಅಪಹರಿಸಲು ಪ್ರಯತ್ನಿಸುತ್ತಾರೆ — ಏಕೆ, ಏಕೆಂದರೆ ಅಲ್ಲಿ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರ ಸರ್ಕಾರವಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದೇ ರೀತಿಯಲ್ಲಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 28, 2017 ರಂದುYouTube ನಲ್ಲಿ ಅದೇ ವೈರಲ್ ಕ್ಲಿಪ್ ಅನ್ನು ಒಳಗೊಂಡಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ಈ ಗಟನೆ ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ ಅಲ್ಲ, ಉತ್ತರ ಪ್ರದೇಶದ ರಾಂಪುರದಲ್ಲಿ ಎಂದು ಹೇಳುತ್ತದೆ.
ಇದಲ್ಲದೆ, ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ಉತ್ತರ ಪ್ರದೇಶ ಪೊಲೀಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಪರಿಶೀಲಿಸಿದ್ದೇವೆ. ಎಫ್‌ಐಆರ್ ಪ್ರಕಾರ, ಶಹನವಾಜ್ (ಫಾರೂಕ್ ಅವರ ಮಗ), ಸದ್ದಾಂ (ಉಮರ್ ದುಧಿಯಾ ಅವರ ಮಗ), ಫಾಜಿಲ್ (ಅಬಿದ್ ಅವರ ಮಗ), ಡ್ಯಾನಿಶ್ (ನಾನ್ಹೆ ಅವರ ಮಗ), ಸರ್ಫರಾಜ್ (ಯೂಸುಫ್ ಅವರ ಮಗ), ನವೇದ್ (ನದೀಮ್ ಮುಲ್ಲಾಜಿ ಅವರ ಮಗ), ಭುರಾ (ಶಂಶಾದ್ ಅವರ ಮಗ), ಬಾಬು (ಮುನಬ್ಬರ್ ಅವರ ಮಗ), ನದೀಮ್ (ಸಲೀಮ್ ಅವರ ಮಗ), ಖಾಸಿಮ್ (ಸಲೀಮ್ ಅವರ ಮಗ), ಫರ್ಮಾನ್ (ಪಂಚ್ ಅಲಿಯಾಸ್ ನೇಮ್ ಅಲಿ ಅವರ ಮಗ), ರಹೀಸ್ (ಶಕೀಲ್ ಅವರ ಮಗ), ಜೇನ್ ಆಲಂ (ಕಲ್ವಾ ಅವರ ಮಗ) ಮತ್ತು ಸಿರಾಜ್ (ಶಬ್ಬೆ ಅವರ ಮಗ) ಸೇರಿದಂತೆ 14 ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದಾಗ್ಯೂ, ಎಫ್‌ಐಆರ್‌ನಲ್ಲಿ ಸಂತ್ರಸ್ಥರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸರ್ಚ್ ಮಾಡಿದಾಗ, ರಾಂಪುರ ಜಿಲ್ಲೆಯ ವಿಶೇಷ ಎಸ್‌ಸಿ/ಎಸ್‌ಟಿ ನ್ಯಾಯಾಲಯವು ಜೂನ್ 11, 2024 ರಂದು ಈ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ವಿಚಾರಣೆಯ ಆಧಾರದ ಮೇಲೆ, ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ಬಲಿಪಶುಗಳು ಎಸ್‌ಸಿ/ಎಸ್‌ಟಿ ಸಮುದಾಯದ ಮುಸ್ಲಿಮೇತರರು ಎಂಬುದು ಸ್ಪಷ್ಟವಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಂತಹ ಹಲ್ಲೆ ನಡೆದ ಬಗ್ಗೆ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ, ಮತ್ತು ವೈರಲ್ ಆಗಿರುವ ವೀಡಿಯೊಗೂ ಪಶ್ಚಿಮ ಬಂಗಾಳ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇದೇ ವೀಡಿಯೊ ಈ ಹಿಂದೆ ತೆಲಂಗಾಣದಲ್ಲಿ ನಡೆದಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 2017 ರಲ್ಲಿ ಉತ್ತರ ಪ್ರದೇಶದ ರಾಂಪುರದಲ್ಲಿ ಇಬ್ಬರು ಹುಡುಗಿಯರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಪಶ್ಚಿಮ ಬಂಗಾಳದ ಘಟನೆ ಎಂದು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದ ಆರ್ಥಿಕತೆ ವೈಟ್ ಹೌಸ್ ನಿಂದ ನಡೆಯುವುದಿಲ್ಲ ಎಂದು ಜೈಶಂಕರ್ ಅಮೆರಿಕಕ್ಕೆ ತಿರುಗೇಟು ನೀಡಿದ್ರಾ?

