Fact check: ಬುರ್ಖಾ ಧರಿಸಿ ಪೊಲೀಸ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಎಂಬ ವೈರಲ್ ಸುದ್ದಿಯ ಹಿಂದಿನ ವಾಸ್ತವವೇನು?
“ಬುರ್ಖಾ ಹಿಜಾಬ್ ಧರಿಸಿ ಪೊಲೀಸರ ಮೇಲೆ ಕಲ್ಲು ಎಸೆಯುತ್ತಿರುವ ಭಯೋತ್ಪಾದಕ ಪುರುಷ ಗುಂಪುಗಳು ಆಂದ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಒಂದು ಬುರ್ಖಾದಿಂದ ಹಲವು ಸಮಸ್ಯೆಗಳು ಎಂದು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದೆ.
ಹಿಜಾಬ್ ವಿವಾದವು ಕರ್ನಾಟಕದಾದ್ಯಂತ ದೊಡ್ಡ ವಿವಾದವನ್ನೆ ಸೃಷ್ಟಿಸಿತ್ತು. ಹೈಕೋರ್ಟ್ ತೀರ್ಪಿನ ನಂತರ ಹಿಜಾಬ್ ಧರಿಸಿ ತಮ್ಮ ಶಾಲಾ-ಕಾಲೇಜುಗಳಿಗೆ ಆಗಮಿಸಿದ ಕೆಲವು ಮುಸ್ಲಿಂ ವಿದ್ಯಾರ್ಥಿಗಳಿಗೆ ಅವರ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಘಟನೆಗಳು ವರದಿಯಾಗಿರುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಬುರ್ಖಾಧಾರಿಯೊಬ್ಬನನ್ನು ಪೊಲೀಸ್ ಅಧಿಕಾರಿಗಳು ಹಿಡಿದಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ವ್ಯಕ್ತಿಗಳ ಗುಂಪೊಂದು ಸಿಕ್ಕಿಬಿದ್ದಿದೆ. ಬುರ್ಖಾ ಧರಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಗ ಬುರ್ಖಾ ಧರಿಸಿದ ವ್ಯಕ್ತಿ ಪುರುಷ ಎಂಬುದು ಗೊತ್ತಾಗಿದೆ. ಹಾಗಿದ್ದರೆ ಬುರ್ಖ ಧರಿಸಿದ ವ್ಯಕ್ತಿಯು ಭಯೋತ್ಪಾದಕನೇ? ವೈರಲ್ ವಿಡಿಯೊದಲ್ಲಿ ಮಾಡಲಾದ ಪ್ರತಿಪಾದನೆಯನ್ನು ವಾಸ್ತವವಾಗಿ ಪರಿಶೀಲಿಸೋಣ.
https://twitter.com/SumanSonivds/status/1494996550048972805?ref_src=twsrc%5Etfw%7Ctwcamp%5Etweetembed%7Ctwterm%5E1494996550048972805%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fburqa-clad-men-pelting-stones-at-the-police-34064
ಬುರ್ಖಾ ಹಿಜಾಬ್ ಧರಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಭಯೋತ್ಪಾದಕ ಪುರುಷ ಗುಂಪುಗಳು ಎಪಿ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿವೆ ಎಂಬ ಟ್ವೀಟ್ ವೈರಲ್.
https://twitter.com/DextrousNinja/status/1495016078627336193?ref_src=twsrc%5Etfw%7Ctwcamp%5Etweetembed%7Ctwterm%5E1495016078627336193%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fburqa-clad-men-pelting-stones-at-the-police-34064


ಆರೋಪಿಗಳು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ ಮತ್ತು ಸಾಕ್ಷಿಸಮೇತರಾಗಿ ಸಿಕ್ಕಿಬಿದ್ದಿದ್ದಾರೆ ಎಂದು ಪ್ರತಿಪಾದಿಸಲಾಗಿರುವ ವೈರಲ್ ಪೋಸ್ಟ್ಅನ್ನು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಘಟನೆ ಆಗಸ್ಟ್ 2020 ರಲ್ಲಿ ನಡೆದಿದೆ ಎಂಬ ವರದಿ ಇದೆ. ಈಟಿವಿ ಆಂಧ್ರಪ್ರದೇಶದ ಚಾನೆಲ್ ಮೂಲಕ ವೈರಲ್ ಆಗಿರುವ ವಿಡಿಯೊ ಲಭ್ಯವಾಗಿದೆ. ವೈರಲ್ ವೀಡಿಯೊದಲ್ಲಿ ನೋಡಿದಂತೆ ವರದಿಯಲ್ಲಿ ಇದೇ ರೀತಿಯ ದೃಶ್ಯಗಳನ್ನು ನೋಡಬಹುದು.ಆದರೆ ವಿಡಿಯೊದಲ್ಲಿ ಶೀರ್ಷಿಕೆಯು ಹೀಗಿದೆ “ಕರ್ನೂಲ್ ಜಿಲ್ಲೆಯಲ್ಲಿ ಬುರ್ಖಾ ಧರಿಸಿ ಅಕ್ರಮ ಮದ್ಯವನ್ನು ಸಾಗಾಟ ಮಾಡಿದ್ದಕ್ಕಾಗಿ ಹಲವಾರ ಬಂಧನ “. ಎಂಬ ವರದಿ ಇದೆ. ವೀಡಿಯೊವನ್ನು ಆಗಸ್ಟ್ 8, 2020 ರಂದು ETV ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಚೆಕ್ಪೋಸ್ಟ್ನಲ್ಲಿ ಪೊಲೀಸರು ತಮ್ಮನ್ನು ಗಮನಿಸುವುದಿಲ್ಲ ಎಂದು ಭಾವಿಸಿ ಬುರ್ಖಾಧಾರಿಗಳಲ್ಲಿ ಒಬ್ಬರು ಮಹಿಳೆಯಂತೆ ವೇಷ ಧರಿಸಿದ್ದರು ಎಂದು ಎಎಸ್ಪಿ ಹೇಳಿದ್ದಾರೆ. ವರದಿಯ ಪ್ರಕಾರ, ಮೊಹಮ್ಮದ್ ಆರಿಫ್ (35) ಮತ್ತು ಸತೀಶ್ ಗೌಡ್ (46) ಅವರನ್ನು ಕರ್ನೂಲ್ ಜಿಲ್ಲೆಯ ಪಂಚಲಿಂಗ್ಲಾ ಚೆಕ್ಪೋಸ್ಟ್ನಲ್ಲಿ ಬಂಧಿಸಲಾಗಿದೆ.
ಕರ್ನೂಲ್ನ ಅಧೀಕ್ಷಕ ಡಾ.ಫಕ್ಕೀರಪ್ಪ ಕಾಗಿನೆಲ್ಲಿ ಅವರು ಈ ಕೆಳಗಿನವುಗಳನ್ನು ಹೇಳಿದರು: “ವಾಸ್ತವಗಳು # ಈ ವೀಡಿಯೊದಲ್ಲಿ ಬುರ್ಖಾಧಾರಿ ವ್ಯಕ್ತಿ ತೆಲಂಗಾಣದಿಂದ ಕರ್ನೂಲ್, ಆಂಧ್ರಪ್ರದೇಶಕ್ಕೆ ರಾಜ್ಯಾದ್ಯಂತ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಅಬಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. 7-8-2020 ರಂದು ಕರ್ನೂಲ್ ತಾಲೂಕಾ ಪೊಲೀಸ್ ಠಾಣೆಯಲ್ಲಿ. https://t.co/GDdPPW7wK5 ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಿ.” ಡಾ ಕಾಗಿನೆಲ್ಲಿ ಈಟಿವಿ ಆಂಧ್ರಪ್ರದೇಶ ವರದಿಯನ್ನು ಸಹ ಲಗತ್ತಿಸಿದ್ದಾರೆ.

BOOM ಫ್ಯಾಕ್ಟ್ ಚೆಕ್ ಪ್ರಕಾರ, ಕರ್ನೂಲ್ ಜಿಲ್ಲೆಯ ಮುಖ್ಯ ಇನ್ಸ್ಪೆಕ್ಟರ್ (ಅಬಕಾರಿ), ಲಕ್ಷ್ಮಿ ದುರ್ಗಯ್ಯ ಅವರು ಅಪರಾಧದಲ್ಲಿ ಯಾವುದೇ ಕೋಮು ಕೋನವನ್ನು ನಿರಾಕರಿಸಿದ್ದಾರೆ. ಈ ವ್ಯಕ್ತಿಗಳು ಮದ್ಯ ಕಳ್ಳಸಾಗಣೆದಾರರು ಮತ್ತು ಅವರು ತಮ್ಮನ್ನು ಮರೆಮಾಚಲು ಬುರ್ಖಾಗಳನ್ನು ಧರಿಸಿದ್ದರು ಎಂದು ಮುಖ್ಯ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಬುರ್ಖಾ ಹಿಜಾಬ್ ಧರಿಸಿದ ಭಯೋತ್ಪಾದಕ ಪುರುಷ ಗುಂಪುಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂಬ ಹೇಳಿಕೆ ಸುಳ್ಳು. ವೈರಲ್ ಕ್ಲಿಪ್ ಸಂದರ್ಭವನ್ನು ಹೊಂದಿರದ ಸಂಪೂರ್ಣ ವೀಡಿಯೊದ ತುಣುಕಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿರುವ ವಿಡಿಯೋ ವೈರಲ್ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವೀಡಿಯೊವು ಆಗಸ್ಟ್ 2020 ರಲ್ಲಿ ನಡೆದ ಘಟನೆಯಾಗಿದ್ದು ಬುರ್ಖ ಧರಿಸಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಗುಂಪು ಪೊಲೀಸ ಮೇಲೆ ದಾಳಿ ನಡಿಸಿದ ದೃಶ್ಯಗಳನ್ನು ಮುಸ್ಲಿಂ ಭಯೋತ್ಪಾದಕ ಗುಂಪು ಬುರ್ಖಾ ಧರಿಸಿ ಹೇಗೆಲ್ಲ ಮಾಡುತ್ತಿದೆ ನೋಡಿ ಎಂದು ಪ್ರಚೋದಿಸುವಂತೆ , ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆಪಾಧನೆ ಮಾಡುವುದರ ಜೊತೆಗೆ , ಪ್ರಸ್ತುತ ಹಿಜಾಬ್ ವಿವಾದದೊಂದಿಗೆ ತಳುಕಿ ಹಾಕುತ್ತ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿರಿ: Fact check: ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಭಯೋತ್ಪಾದಕನೆ?

