Fact check: ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ರಾಹುಲ್ ಗಾಂಧಿ ಬ್ಯಾಡ್ಮಿಟನ್ ಆಡುತ್ತಿದ್ದರೆ?
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಅಧಿಕಾರದಲ್ಲಿದ್ದ ಪಂಜಾಬ್ನಲ್ಲೂ “ಗ್ರ್ಯಾಂಡ್ ಓಲ್ಡ್ ಪಾರ್ಟಿ” ಕಾಂಗ್ರೆಸ್ ಗೆ ಸೋಲಾಗಿದೆ. ಇಷ್ಟೆಲ್ಲ ಸೋಲನ್ನನುಭವಿಸಿಯೂ ಎಚ್ಚೆತ್ತುಕೊಳ್ಳದ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಷಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ” ಎಂದು ಪ್ರತಿಪಾದಿಸಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ,
ವೀಡಿಯೊದಲ್ಲಿ, ರಾಹುಲ್ ಗಾಂಧಿ ಒಳಾಂಗಣ ಬ್ಯಾಟ್ಮಿಟನ್ ಕೋರ್ಟ್ನಲ್ಲಿ ಆಟವಾಡುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಕೆಲವು ಪಕ್ಷದ ನಾಯಕರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಇರುವುದನ್ನು ಗಮನಿಸಬಹುದು. ವೀಡಿಯೊದಲ್ಲಿ ರಾಹುಲ್ ಅವರ ಆಟವನ್ನು ಪ್ರೇಕ್ಷಕರು ಶ್ಲಾಘಿಸಿದ್ದಾರೆ.
“ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಅವಮಾನವನ್ನು ಎದುರಿಸಿಯೂ ರಾಹುಲ್ ಗಾಂಧಿ ಬ್ಯಾಡ್ಮಿಂಟನ್ ಆಡುತ್ತಿರುವುದು ಕಂಡುಬಂದಿದೆ” ಎಂದು ಈ ವೀಡಿಯೊವನ್ನು ‘ಬೆಸ್ಟ್ ಹಿಂದಿ ನ್ಯೂಸ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.

‘ಪಂಜಾಬ್ ಕೇಸರಿ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ’ದ ಅಧಿಕೃತ ಫೇಸ್ಬುಕ್ ಪೇಜ್ ಕೂಡ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದೆ, “ರಾಹುಲ್ ಗಾಂಧಿ ಅವರು 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಸ್ವಲ್ಪ ನಿರಾಳವಾದ ಮನಸ್ಥಿತಿಯಲ್ಲಿ ಕಂಡುಬಂದರು ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ.
ಫ್ಯಾಕ್ಟ್ಚೆಕ್:
ವಿಡಿಯೊದ ಸ್ಕ್ರೀನ್ಶಾಟ್ ಸಹಾಯ ಪಡೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನೈಜ ವಿಡಿಯೋ ಲಭ್ಯವಾಗಿದ್ದು, ರಾಹುಲ್ ಗಾಂಧಿ ಮಾರ್ಚ್ 9ರಂದು ಅಂದರೆ ಐದು ರಾಜ್ಯ ಚುನಾವಣೆಯ ಪಲಿತಾಂಶದ ಹಿಂದಿನ ದಿನ ಈ ಈವೆಂಟ್ ನಡೆದಿದ್ದು, ಮಲಪ್ಪುರಂನ ಅರೀಕೋಡ್ನಲ್ಲಿರುವ ಹೊಸ ಒಳಾಂಗಣ ಕ್ರೀಡಾಂಗಣದಲ್ಲಿ ರಾಹುಲ್ ಗಾಂಧಿ ಬ್ಯಾಡ್ಮಿಂಟನ್ ಆಡಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ರಾಹುಲ್ ಬ್ಯಾಡ್ಮಿಂಟನ್ ಆಡಿಲ್ಲ. ಮಾರ್ಚ್ 10 ರಂದು ಮತ ಎಣಿಕೆಗೆ ಒಂದು ದಿನ ಮೊದಲು ಕೇರಳದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.

ಕೆಲವು ಸಂಬಂಧಿತ ಕೀವರ್ಡ್ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡುವ ಮೂಲಕ ABP News. ಪ್ರಕಟಿಸಿದ ಲೇಖನವನ್ನು ಕಂಡುಕೊಂಡಿದ್ದೇವೆ. ಸುದ್ದಿ ವರದಿಯ ಕವರ್ ಫೋಟೋದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಎರಡು ಫೋಟೋಗಳನ್ನು ಕೊಲಾಜ್ ಮಾಡಲಾಗಿದೆ. ಒಂದರಲ್ಲಿ ರಾಹುಲ್ ಐಸ್ ಕ್ರೀಂ ಸವಿಯುತ್ತಿರುವ ಫೋಟೊ , ಇನ್ನೊಂದರಲ್ಲಿ ಬ್ಯಾಡ್ಮಿಂಟನ್ ಆಟದ ರಾಕೆಟ್ ಹಿಡಿದುಕೊಂಡಿದ್ದಾರೆ.

ವರದಿಯನ್ನು 10 ಮಾರ್ಚ್ 2022 ರಂದು ಪ್ರಕಟಿಸಲಾಗಿದ್ದರೂ, ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು ಕೇರಳದಲ್ಲಿ ರಾಹುಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಶೀರ್ಷಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮತ್ತಷ್ಟು ಸರ್ಚ್ ಮಾಡಿದಾಗ ಮಾರ್ಚ್ 9 ರಂದು ರಾಹುಲ್ ಗಾಂಧಿಯವರ ಅಧಿಕೃತ ಚಾನಲ್ ಪ್ರಕಟಿಸಿದ YouTube ವೀಡಿಯೊಗೆ ಲಭ್ಯವಾಗಿದ್ದು, ಐದು ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಒಂದು ದಿನದ ಮೊದಲು ನಡೆದಿದೆ ಎಂದು ತಿಳಿದುಬಂದಿದೆ.

ಮಲಪ್ಪುರಂನ ಎರ್ನಾಡ್ನ ಅರೀಕೋಡ್ನ ಸುಲ್ಲಾಮುಸ್ಸಲಾಮ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹೊಸ ಒಳಾಂಗಣ ಕ್ರೀಡಾಂಗಣದಲ್ಲಿ ಅವರು ಬ್ಯಾಡ್ಮಿಂಟನ್ ಆಟವನ್ನು ಆನಂದಿಸಿದ್ದಾರೆ ಎಂದು ಈ ವೀಡಿಯೊದ ವಿವರಣೆಯಲ್ಲಿ ಹೇಳಲಾಗಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ (INC) ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಚ್ 9 ರಂದು ಅದೇ ವೀಡಿಯೊವನ್ನು ಅಪ್ಲೋಡ್ ಮಾಡಿದೆ. ಹಾಗಾಗಿ, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ದಿನ ಮೊದಲು ರಾಹುಲ್ ಗಾಂಧಿ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋ ಚಿತ್ರೀಕರಣ ಮಾಡಿರುವುದು ಸ್ಪಷ್ಟವಾಗಿದೆ. ಫಲಿತಾಂಶದ ನಂತರ ಆಡಿದ್ದಾರೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.
ಇದನ್ನು ಓದಿರಿ: Fact check: ಯುಪಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲಿಗೆ ಮನನೊಂದು ಯುವಕರು ನೇಣಿಗೆ ಶರಣಾದರು ಎಂಬ ಸುದ್ದಿ ನಿಜವೆ?

