Fact check: ಪಾಕ್ ವ್ಯಕ್ತಿಯಿಂದ ‘ಹಿಂದೂ ಹುಡುಗಿ’ಯ ಬಲವಂತದ ಮತಾಂತರ! ವಾಸ್ತವವೇನು?
ಪಾಕಿಸ್ತಾನದ ವ್ಯಕ್ತಿಯೊಬ್ಬ ಅಪ್ರಾಪ್ತ ಹುಡುಗಿಗೆ ವಿದ್ಯುತ್ ಶಾಕ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿರುವ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ “ಹಿಂದೂ ಹುಡುಗಿ” ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋವನ್ನು ಇಸ್ಕಾನ್ನ ಉಪಾಧ್ಯಕ್ಷ ಮತ್ತು ವಕ್ತಾರರಾದ ರಾಧರಮ್ ದಾಸ್ ಅವರು ತಮ್ಮ ಟ್ವಟರ್ ಅಕೌಂಟ್ನಿಂದ ಈ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಪತ್ರಕರ್ತ ಯಥಾರ್ಥ್ ಸಿಕ್ಕಾ ಮತ್ತು ಬಲಪಂಥೀಯ ಪ್ರತಿಪಾದಕ ವೆಬ್ಸೈಟ್ ಕ್ರೀಟ್ಲಿ ಮತ್ತು ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು. ಇದನ್ನು “#TheKashmiriFiles” ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಶೇರ್ ಮಾಡಲಾಗಿದೆ.

A small Hindu child in Pakistan, forcefully kidnapped & being given electric shock to convert. This is how they converted 20% of Bharat.
Unless these crooks are given 440 volt electric shock & sent to hoors, they are not going to stop.#TheKashmiriFiles https://t.co/F6HGy8f88A
— Radharamn Das राधारमण दास (@RadharamnDas) March 14, 2022
ಫೇಸ್ ಬುಕ್ ನಲ್ಲೂ ವಿಡಿಯೋ ವೈರಲ್ ಆಗಿದೆ.

ಫ್ಯಾಕ್ಟ್ಚೆಕ್:
ಘಟನೆಗೆ ಸಂಬಂಧಿಸಿದಂತೆ ವಿಡಿಯೊದ ಸ್ಕ್ರೀನ್ ಶಾಟ್ ಸಹಾಯದಿಂದ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಲಾಗಿದ್ದು, ಆಗಸ್ಟ್ 2020 ರಲ್ಲಿ ಪ್ರಕಟವಾದ ಸುದ್ದಿ ವರದಿ ಲಭ್ಯವಾಗಿದೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿಯು ಜನಸಾಮಾನ್ಯರ ಮೇಲೆ ದೆವ್ವ, ಭೂತ ಬಂದಿದೆ ಎಂದು ಹೇಳಿ, ದೆವ್ವ ಬಿಡುಸುತ್ತೇನೆ, ಕಾಯಿಲೆಗೆ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿ ನಂಬಿಸಿ ಚಿತ್ರ ಹಿಂಸೆ ನೀಡುತ್ತಿದ್ದ, ಕೊನೆಗೆ ಆತ ನಕಲಿ ವೈದ್ಯ ಎಂದು ತಿಳಿದು ಬಂದಿದೆ. ಈ ನಕಲಿ ವೈದ್ಯ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡಿ ವಿದ್ಯುತ್ ಶಾಕ್ ಟ್ರೀಟ್ಮೆಂಟ್ ನೀಡುತ್ತಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯೂ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಂತೆಯೇ ಇದೆ.

ಪಾಕಿಸ್ತಾನದಲ್ಲಿ ಭೂತ ಬಿಡಿಸುವ ನಕಲಿ ವೈದ್ಯ
ಈ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಪಡಯಲು ಕೀವರ್ಡ್ ಸರ್ಚ್ ಮಾಡಿಲಾಗಿದ್ದು ಅದು ಆಗಸ್ಟ್ 2020 ರಿಂದ ಸುದ್ದಿ ವರದಿಗಳ ಮಾಹಿತಿಯನ್ನು ಒದಗಿಸಿದೆ, ಅದು ವೈರಲ್ ವೀಡಿಯೊವನ್ನು ಹೋಲುವ ಚಿತ್ರಗಳನ್ನು ಒಳಗೊಂಡಿತ್ತು. ಸುದ್ದಿ ವರದಿಯ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಪೀರ್ ಮೊಹಮ್ಮದ್ ಉಲ್ಲಾ, ಈತ ಎಲೆಕ್ಟ್ರಿಕ್ ಶಾಕ್ ಮೂಲಕ ಭೂತ ಬಿಡಿಸುತ್ತೇನೆ ಎಂದು ಹಿಂಸೆ ನೀಡುತ್ತಿದ್ದ, ಕೆಲವರು ಈತನ ವಿರುದ್ದ ದೂರು ನೀಡಿದ್ದ ಕಾರಣ ಪೇಶಾವರ ಪೊಲೀಸರು ಆತನನ್ನು ಬಂಧಿಸಿದ್ದರು ಎಂದು ವರದಿಯಲ್ಲಿದೆ.

ಸುದ್ದಿ ವರದಿಯಲ್ಲಿ ಪೇಶಾವರ ಪೊಲೀಸರು ಟ್ವೀಟ್ ಮಾಡಿದ್ದಾರೆ.
کرنٹ لگا کر بچوں کے جن نکالنے والا جعلی پیر گرفتار
سوشل میڈیا پر وائرل ہونے والی جعلی پیر کی ویڈیو کے بعد پشاور پولیس نے اچینی بالا کے علاقے میں کارروائی کرتے ہوئے جعلی پیر محمد اللہ ولد قدرت اللہ کو گرفتارکر لیا،
ایف آئی آر درج کرکے مزید تفتیش شروع کردی گئی ہے.@Aadiiroy pic.twitter.com/mEqfLm6ODx
— Capital City Police Peshawar (@PeshawarCCPO) August 9, 2020
Stop lying.
Here's the truth:https://t.co/PgeLppVGxh
— Membooda (@memebooda) March 17, 2022
ಮತ್ತಷ್ಟು ಕೀವರ್ಡ್ ಸರ್ಚ್ ನಡೆಸಲಾಗಿದ್ದು ಏಪ್ರಿಲ್ 2021 ರಲ್ಲಿ ಅವರ ಬಂಧನದ ಸುದ್ದಿ ವರದಿಯನ್ನು ನೋಡಿದ್ದೇವೆ. ವರದಿಯಲ್ಲಿ, ಮೊಹಮ್ಮದ್ ಉಲ್ಲಾ ಅವರ ಹಿಂದಿನ ಬಂಧನದ ನಂತರ, ಅವರಿಗೆ ಜಾಮೀನು ನೀಡಲಾಗಿದೆ ಮತ್ತು ಅಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಮೊಹಮ್ಮದ್ ಉಲ್ಲಾ ತಮ್ಮ ಕೃತ್ಯವನ್ನು ಮುಂದುವರೆಸಿದ್ದಾನೆ ನಂತರ ಅನೇಕ ಸಾರ್ವಜನಿಕ ದೂರುಗಳ ಆಧಾರದಲ್ಲಿ ಪೊಲೀಸರು ಬಂಧಿಸಿದರು ಎಂದು ಹೇಳಲಾಗಿದೆ.

ಹಾಜಿ ಮೊಹಮ್ಮದ್ ಉಲ್ಲಾ ಅವರ ಫೇಸ್ಬುಕ್ ಪೇಜ್ವೊಂದು ಸುಮಾರು 11 ಲಕ್ಷ ಪಾಲೋರ್ಯ್ಸ್ಗಳನ್ನು ಹೊಂದಿದೆ ಮತ್ತು ಅವರು ಜನರ ಮೇಲೆ ಬರುವ ಭೂತವನ್ನು ಬಿಡಿಸುವ ವೀಡಿಯೊಗಳನ್ನು ಅಪ್ಲೋಡ್ ಮಾಡುವುದನ್ನು ಮುಂದುವರೆಸಿದ್ದಾರೆ. ಅವರು 80k ಚಂದಾದಾರರನ್ನು ಹೊಂದಿರುವ YouTube ಚಾನಲ್ ಅನ್ನು ಸಹ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅವರ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಮಗೆ ವೈರಲ್ ವೀಡಿಯೊವನ್ನು ಕಂಡುಹಿಡಿಯಲಾಗಲಿಲ್ಲ, ಆದಾಗ್ಯೂ, ಅವರ ಸಾಮಾಜಿಕ ಜಾಲತಾಣಗಳ ಅಪ್ಲೋಡ್ ಮಾಡಿರುವ ವಿಡಿಯೊಗಳು, ಅವರ ಗುಜರಿ ಕೆಲಸ ನಡೆಯುವ ಅಂಗಡಿಯಲ್ಲಿ ಅದೇ ಸ್ಥಳದಲ್ಲಿ ಶೂಟ್ ಮಾಡಲಾಗಿದೆ. ಮೊಹಮ್ಮದ್ ಉಲ್ಲಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿರುವ ವೀಡಿಯೊಗೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋಗಳನ್ನು ಹೋಲಿಕೆ ಮಾಡಲಾಗಿದ್ದು ಅದರ ವ್ಯತ್ಯಾಸಗಳನ್ನು ಪ[ತ್ತೆ ಹಚ್ಚಿದ್ದೇವೆ.

ಈ ಸುದ್ದಿಯನ್ನು ಆಲ್ಟ್ ನ್ಯೂಸ್ ವರದಿ ಮಾಡಿದ್ದು ಆಲ್ಟ್ನ್ಯೂಸ್ ಪಾಕಿಸ್ತಾನದ ಪೊಲೀಸರೊಂದಿಗೆ ಮಾತನಾಡಿ ಮೊಹಮ್ಮದ್ ಉಲ್ಲಾ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪೇಶಾವರ ಪೊಲೀಸರು ಹೇಳುವಂತೆ ಮೊಹಮ್ಮದ್ ಉಲ್ಲಾ ಅವರ ವೀಡಿಯೊಗಳಲ್ಲಿನ ಎಲ್ಲಾ ಅಪ್ರಾಪ್ತ ವಯಸ್ಕರು ಮುಸ್ಲಿಮರಾಗಿದ್ದು , ನವೆಂಬರ್ 2021 ರಲ್ಲಿ ಮೊಹಮ್ಮದ್ ಉಲ್ಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದರು. ನಂತರ ಮೊಹಮ್ಮದ್ ಉಲ್ಲಾ ಅವರು ತಮ್ಮ ಯೂಟ್ಯೂಬ್ ನಿಂದ ಕೆಲವು ವಿಡಿಯೊಗಳನ್ನು ತೆಗೆದಿದ್ದಾರೆ.

ಆಲ್ಟ್ ನ್ಯೂಸ್ನೊಂದಿಗೆ ಮಾತನಾಡಿರುವ ಸ್ಥಳೀಯ ಹಿಂದೂ ಸಮುದಾಯದ ಮುಖಂಡ ಹರೂನ್ ಸರ್ಬಾಡಿಯಾಲ್, ಈ ಪ್ರದೇಶದಲ್ಲಿ ಯಾವುದೇ ಹಿಂದೂಗಳ ಮೇಲೆ ಈ ರೀತಿ ಶಾಕ್ ಟ್ರೀಟ್ಮಂಟ್ ನಡೆದಿಲ್ಲ, ಮತ್ತು ಬಲವಂತದ ಮತಾಂತರವು ಆಗಿಲ್ಲ, ಆ ರೀತಿಯ ಘಟನೆಗಳು ಏನೂ ನಡೆದಿಲ್ಲ. ವಾಸ್ತವವಾಗಿ, ಹಿಂದೂ ಸಮುದಾಯವು ತನ್ನದೇ ಆದ ಪಂಡಿತರನ್ನು (ಪುರೋಹಿತರನ್ನು) ಹೊಂದಿದ್ದು, ಹಿಂದೂಗಳೆಲ್ಲರೂ ಅವರ ಬಳಯೇ ಹೋಗುತ್ತಾರೆ ಅವರು ಭೂತೋಚ್ಚಾಟನೆ ಮಾಡುತ್ತಾರೆ ಆದರೆ ಯಾರಿಗೂ ಯಾವುದೇ ಶಾಕ್ ಟ್ರೀಟ್ಮೆಂಟ್ ರೀತಿಯಾದ ಹಿಂಸೆ ನೀಡುವುದಿಲ್ಲ ಎಂದಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಹೇಳಿರುವಂತೆ ಹಿಂದೂ ಅಪ್ರಾಪ್ತ ಬಾಲಕಿಯನ್ನು ಮತಾಂತರ ಮಾಡಲಾಗಿದೆ ಎಂಬುದು ಸುಳ್ಳು. ಬಲವಂತದ ಮತಾಂತರಕ್ಕೂ ಮೊಹಮ್ಮದ್ ಉಲ್ಲಾಗೂ ಯಾವುದೇ ಸಂಬಂಧವಿಲ್ಲ. ಇದು ಮುಸ್ಲಿಮ್ ಸಮುದಾಯದವರು ನಂಬುವ ವೈದ್ಯನೊಬ್ಬನ ವೀಡಿಯೊವಾಗಿದ್ದು, ಜನರ ಮೇಲೆ ಬರುವ ಭೂತವನ್ನು ಬಿಡುಸುತ್ತೇನೆ ಎಂದು ಹೇಳಿಕೊಂಡು ಮೂಡನಂಬಿಕೆಗೆ ಅವಕಾಶ ಮಾಡುತ್ತಿದ್ದಾನೆ ಆ ಮೂಲಕ ಜನರನ್ನು ಶಾಕ್ ಟ್ರೀಟ್ಮೆಂಟ್ ಮಾಡುವ ಮೂಲಕ ಹಿಂಸೆ ನೀಡುತ್ತಿದ್ದನು, ಈ ರೀತಿಯ ಕೃತ್ಯ ಎಸಗಿದ್ದಕ್ಕಾಗಿ ಹಲವು ಬಾರಿ ಬಂಧಿಸಲ್ಪಟ್ಟಿದ್ದಾನೆ. ಹಾಗಾಗಿ ವೈರಲ್ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯು ಸುಳ್ಳು ಎಂದು ತಿಳಿದು ಬಂದಿದೆ.
ಕೃಪೆ: ಆಲ್ಟ್ನ್ಯೂಸ್
ಇದನ್ನು ಓದಿರಿ: Fact check: “ದ ಕಾಶ್ಮೀರ್ ಫೈಲ್ಸ್” ಸಿನಿಮಾ ನೋಡಿ ಯೋಗಿ ಆದಿತ್ಯನಾಥ್ ಕಣ್ಣಿರು ಹಾಕಿಲ್ಲ: ಕೆಲವು ದೃಶ್ಯಗಳಿಗೆ ನಿರ್ದೇಶಕು ಕತ್ತರಿ ಹಾಕಿದರೆ?

