ಫ್ಯಾಕ್ಟ್‌ಚೆಕ್: ಕಚ್ಚಾ ಬಾದಂ ಹಾಡಿಗೆ ರೀಲ್ಸ್‌ ಮಾಡಿದ ಪೊಲೀಸರು! ವಾಸ್ತವವೇನು

ಮಕ್ಕಳು, ಹುಡುಗ-ಹುಡುಗಿಯರು, ಆಂಟಿ-ಅಂಕಲ್‌ಗಳು, ವಯಸ್ಕರಾದಿಯಾಗಿ ಈ ಹಾಡಿಗೆ ಸ್ಟೆಪ್ ಹಾಕಿದ್ದೆ ಹಾಕಿದ್ದು.  ‘ಕಚ್ಚಾ ಬಾದಂ’ ಹಾಡಿಗೆ ರೀಲ್ಸ್‌ ಮಾಡದವರೇ ಇಲ್ಲವೇನೊ, ಅಥವಾ ಅದನ್ನು ಗುನುಗದೆ ಇಲ್ಲ ಅನ್ನುವಷ್ಟು ಜನಪ್ರಿಯತೆ ಗಳಿಸಿದೆ. ‘ಕಚ್ಚಾ ಬಾದಂ’ ಜ್ವರ ಎಲ್ಲ ವರ್ಗದ ಜನರನ್ನು ಆವರಿಸಿದೆ. ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರನು ಹಾಡಿದ ಮೂಲ ಹಾಡಿಗೆ ಮ್ಯೂಸಿಕ್ ರಿಮಿಕ್ಸ್‌ ಮಾಡಿದ್ದೆ ತಡ ಹಾಡು ವೈರಲ್ ಆಗತೊಡಗಿತ್ತು. ಎಲ್ಲ ಭಾಷೆಯ ಜನರು ಅಭಿಮಾನಿಗಳಾದರು.

ಇದರ ನಡುವೆ  Dw News Hyderabad    ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೊದಲ್ಲಿ ಕರ್ತವ್ಯದಲ್ಲಿರುವ   ಪೊಲೀಸರೂ ಕೂಡ ‘ಕಚ್ಚಾ ಬಾದಂ’ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಎಂಜಾಯ್ ಮಾಡಿದ್ದಾರೆ ಎಂದು ಹೇಳಿಕೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದೆ. ಪೊಲೀಸರು ‘ಕಚಾ ಬಾದಂ’ ಟ್ಯೂನ್‌ಗೆ ನೃತ್ಯ ಮಾಡುತ್ತಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದರ ಹಿನ್ನಲೆಯನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅದೇ ವೀಡಿಯೊವನ್ನು ಕೆಲವು ಮಾಧ್ಯಮ ಏಜೆನ್ಸಿಗಳು ಕೇರಳ ಪೊಲೀಸರು ಕಚ್ಚಾ ಬಾದಮ್ ಟ್ಯೂನ್‌ಗೆ ನೃತ್ಯ ಮಾಡುತ್ತಿರುವಂತೆ ಹಂಚಿಕೊಂಡಿರುವುದು ಕಂಡುಬಂದಿದೆ. ಆದ್ದರಿಂದ, ಅಂತರ್ಜಾಲದಲ್ಲಿ ಕೆಲವು ಮಲಯಾಳಂ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಮಾರ್ಚ್ 2022 ರಲ್ಲಿ ‘ಮಾತೃಭೂಮಿ’ ಪ್ರಕಟಿಸಿದ ಲೇಖನವು ಕಂಡುಬಂದಿದೆ. ‘ಹೋಟೆಲ್ ಡ್ಯೂಲ್ಯಾಂಡ್‘ (ಹೋಟೆಲ್ ಹೆಸರನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು) ವಿಡಿಯೊದಲ್ಲಿ ಪೊಲೀಸ್ ಸಮವಸ್ತ್ರವನ್ನು ಧರಿಸಿ ನೃತ್ಯ ಮಾಡತ್ತಿರುವವರು ಸಿನಿಮಾ ಕಲಾವಿದರು, ನಿಜವಾದ ಪೊಲೀಸ್‌ ಅಲ್ಲ ಎಂದು ಉಲ್ಲೇಖಿಸಲಾಗಿದೆ. ‘ರಾಕಾಚಾಶಿ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು ಪೊಲೀಸ್ ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಚಿತ್ರದ ಭಾಗವಾಗಿರುವ ಮತ್ತು ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರೀತಿ ಗೋಸ್ವಾಮಿ ಅವರು ಮಾರ್ಚ್ 2022 ರಲ್ಲಿ ತಮ್ಮ Instagram ಪ್ರೊಫೈಲ್‌ನಲ್ಲಿ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ . ಅವರು ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಅವರು ಅದೇ ಸ್ಥಳದಲ್ಲಿ ಅದೇ ಟ್ಯೂನ್‌ಗೆ ನೃತ್ಯ ಮಾಡುವುದನ್ನು ಕಾಣಬಹುದು. ಅದೇ ಸ್ಥಳದಲ್ಲಿ ಇನ್ನೊಬ್ಬ ನಟಿಯ (ಅದೇ ಚಲನಚಿತ್ರದ) ವೀಡಿಯೊವನ್ನು ಇಲ್ಲಿ ನೋಡಬಹುದು.

 

View this post on Instagram

 

A post shared by Preeti G Goswami (@preetigoswami555)

‘ಹೋಟೆಲ್ ಡ್ಯೂಲ್ಯಾಂಡ್’ ನಲ್ಲಿ ನಟಿ ಪ್ರೀತಿ ಗೋಸ್ವಾಮಿ ಅವರ ಇತರ ಫೋಟೋಗಳನ್ನು ಇಲ್ಲಿ ನೋಡಬಹುದು. ಚಲನಚಿತ್ರಕ್ಕೆ ಸಂಬಂಧಿಸಿದ ಇತರ ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಿದ ವೀಡಿಯೊದಲ್ಲಿ ‘ಕಚಾ ಬಾದಮ್’ ಟ್ಯೂನ್‌ಗೆ ನೃತ್ಯ ಮಾಡಿರುವವರು ನಿಜವಾದ ಪೊಲೀಸರಲ್ಲ ಅವರು ಸಿನಿಮಾ ಕಲಾವಿದರು, ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸರ್ಕಾರಿ ಶಾಲೆಗಳನ್ನು ಮದರಸಾಗಳನ್ನಾಗಿ ಮಾಡಿದ ಕೇಜ್ರೀವಾಲ್ ಎಂಬುದು ಸುಳ್ಳು ಸುದ್ದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights