ಫ್ಯಾಕ್ಟ್‌ಚೆಕ್: IAS ಅಧಿಕಾರಿಯು ದರ್ಪದಿಂದ ವರ್ತಿಸಿರುವ ಸುದ್ದಿ ಯಾವಾಗಿನದ್ದು? ಇಲ್ಲಿದೆ ಡೀಟೈಲ್ಸ್
IAS ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹಾಸಿಗೆಯ ಮೇಲೆ ದುರಹಂಕಾರದಿಂದ ತನ್ನ ಕಾಲನ್ನು ಇಟ್ಟುಕೊಂಡಿರುವ ಇತ್ತೀಚಿನ ಘಟನೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯ ಸತ್ಯಾಸತ್ಯತೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಫೋಟೋದೊಂದಿಗೆ ಇರುವ ಅನೇಕ ಸುದ್ದಿ ಲೇಖನಗಳ ಲಭ್ಯವಾಗಿವೆ. ‘ಹಿಂದೂಸ್ತಾನ್ ಟೈಮ್ಸ್’ ಲೇಖನದ ಪ್ರಕಾರ, “ಡಾ. ಜಗದೀಶ್ ಸೋಂಕರ್ ಅವರು ಸಾಮಾನ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೌಷ್ಟಿಕ ಮಕ್ಕಳ ತಾಯಂದಿರೊಂದಿಗೆ ಮಾತುಕತೆ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ”. ಫೋಟೋದಲ್ಲಿರುವ ಘಟನೆಯು 2016 ರಲ್ಲಿ ಸಂಭವಿಸಿತು. ಆಗ ಅವರು ಬಲರಾಂಪುರ ಜಿಲ್ಲೆಯ (ಛತ್ತೀಸ್‌ಗಢ) ರಾಮಾನುಜ್‌ಗಂಜ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿದ್ದರು. ಘಟನೆಗೆ ಸಂಬಂಧಿಸಿದ ಇತರ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಜಗದೀಶ್ ಸೋಂಕರ್ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರ ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಇದೊಂದು ಹಳೆಯ ಘಟನೆಯಾಗಿದ್ದು ಜಗದೀಶ್ ಸೋಂಕರ್ (ಐಎಎಸ್) ಆಸ್ಪತ್ರೆಯ ಹಾಸಿಗೆಯ ಮೇಲೆ ಕಾಲು ಇಟ್ಟುಕೊಂಡಿರುವ ಹಳೆಯ ಫೋಟೋವನ್ನು ಐಎಎಸ್ ಟ್ರೈನಿಯೊಬ್ಬರು ಹೇಗೆ ನಡೆದುಕೊಂಡಿದ್ದಾರೆ ನೋಡಿ ಎಂಬ ಹೇಳಿಕೆಯೊಂದಿಗೆ ಇತ್ತೀಚಿನ ಘಟನೆ ಎಂಬಂತೆ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಮ್ಮೆಗೆ 11 ಶಿಶುಗಳಿಗೆ ಜನ್ಮ ನೀಡಿದ ತಾಯಿ! ಜಗತ್ತಿನಲ್ಲೆ ಮೊದಲ ಎಂಬುದರ ವಾಸ್ತವವೇನು?

