ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಎಂಬುದು ಸುಳ್ಳು

ವ್ಯಕ್ತಿಯೊಬ್ಬನ ಮೇಲೆ ಯುವಕರ ಗುಂಪೊಂದು ಕಬ್ಬಿಣದ ರಾಡ್, ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಮುಸ್ಲಿಮರು ಹಿಂದೂಗಳನ್ನು ಹಾಡು ಹಗಲಿನಲ್ಲೆ ರಾಜಾರೋಷವಾಗಿ ಕೊಲ್ಲುತ್ತಿದ್ದಾರೆ”, ಇದಕ್ಕೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜೋಧ್‌ಪುರದಲ್ಲಿ ಇಂಟರ್ನೆಟ್ ಸಂಪರ್ಕವನ್ನು ತೆಗೆದು ಹಾಕಿದೆ ಎಂದು ಹೇಳುವ  ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಟ್ವಿಟರ್‌ನಲ್ಲೂ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. (ಆರ್ಕೈವ್ ಲಿಂಕ್).

ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಏನ್‌ಸುದ್ದಿ.ಕಾಮ್‌ ನಮ್ಮ WhatsApp  ಸಂಖ್ಯೆ (9108969301) ಗೆ ವಿನಂತಿಗಳು ಬಂದಿವೆ.

ಬಾಂಗ್ಲಾದೇಶದಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕಾಗಿ ಹಿಂದೂ ಮುಖಂಡನನ್ನು ಥಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ . ಈ ಹೇಳಿಕೆಯೊಂದಿಗೆ ಟ್ವಿಟರ್‌ನಲ್ಲಿ  ಕೆಲವು ಟ್ವಿಟರ್ ಬಳಕೆದಾರರು @UmaShankar2054, @KaranGu44058621, @mr_subodhkumar, @yogeshDharmSena, ಮತ್ತು @TheSachai ಮೇಲಿನ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋ ಕೂಡ ವೈರಲ್ ಆಗಿದೆ. ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

https://twitter.com/UmaShankar2054/status/1521831229477113856?t=dn3vHUXz1B4Iiaabb4zNiw&s=19

ಫ್ಯಾಕ್ಟ್‌ಚೆಕ್:

ಇಫ್ತಾರ್ ಕೂಟದಲ್ಲಿ ಭಾಗವಾಗಲು ನಿರಾಕರಿಸಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಮುಖಂಡನನ್ನು ಥಳಿಸಲಾಗಿದೆ ಎಂಬ ಹೇಳಿಕೆಯು ಸುಳ್ಳಾಗಿದ್ದು ಅದನ್ನು ಆಲ್ಟ್ ನ್ಯೂಸ್ ಈಗಾಗಲೇ ತಳ್ಳಿಹಾಕಿದೆ. ಇದರ ಸಂಪೂರ್ಣ ವರದಿಯನ್ನು ಇಲ್ಲಿ ಓದಬಹುದು.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ ಮೇ 1 ರಂದು ಪ್ರಕಟವಾದ ಅಮರ್ ಉಜಾಲಾ ಅವರ ಸುದ್ದಿ ವರದಿಯು ಲಭ್ಯವಾಗಿದೆ. ವರದಿಯ ಪ್ರಕಾರ, ಹರಿಯಾಣದ ಯಮುನಾನಗರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯು ಸುಲ್ತಾನ್‌ಪುರದ ಟ್ರಕ್ ಚಾಲಕ ಕಮಲ್‌ಜೀತ್. ವರದಿಯಲ್ಲಿ ದಾಳಿಮಾಡಿದವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ದಾಳಿಗೆ ವೈಯಕ್ತಿಕ ದ್ವೇಷವೇ ಕಾರಣ  ಎಂದು ಹೇಳಲಾಗಿದೆ. ದಾಳಿಕೋರರಲ್ಲಿ ಇಬ್ಬರು ಕಮಲ್ಜೀತ್ ಅವರ ಅದೇ ಗ್ರಾಮದವರು ಎಂದು ಹೇಳುತ್ತದೆ.

ಅಮರ್ ಉಜಾಲಾ ಅವರ ವರದಿಯನ್ನು ಆಧರಿಸಿ,  ಕೀವರ್ಡ್ ಸರ್ಚ್ ನಡೆಸಿದ್ದು, ಟೈಮ್ಸ್ ಆಫ್ ಇಂಡಿಯಾದಲ್ಲಿ ಘಟನೆಗೆ ಸಂಬಂಧಿಸಿದ ಸುದ್ದಿಯು ಲಭ್ಯವಾಗಿದೆ.  TOI ಪ್ರಕಾರ, ಸಂತ್ರಸ್ತನ ಪೂರ್ಣ ಹೆಸರು ಕಮಲ್ಜೀತ್ ಸಿಂಗ್ ಮತ್ತು ಅವರ  ವೈದ್ಯಕೀಯ ವರದಿಯ(MNC) ಪ್ರಕಾರ, ಅವರ ಮುಖ, ತೋಳುಗಳು ಮತ್ತು ಕಾಲುಗಳ ಮೇಲೆ ಗಂಭೀರವಾದ ಗಾಯಗಳಾಗಿವೆಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಪೊಲೀಸರೊಂದಿಗೆ ಮಾತನಾಡಿದ ಕಮಲ್‌ಜೀತ್, ಸುಮಾರು 10 ದಿನಗಳ ಹಿಂದೆ ಹಣದ ವಿವಾದಕ್ಕೆ ಸಂಬಂಧಿಸಿದಂತೆ ಕಣಿಪ್ಲಾ ಗ್ರಾಮದ ರಿಕಿಯೊಂದಿಗೆ ಫೋನ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಹಣಕಾಸಿನ ವಿವಾದದಿಂದಾಗಿ ರಿಕಿಯು ಕಮಲ್‌ಜೀತ್ ಸಿಂಗ್ ಮೇಲೆ ದಾಳಿ ಮಾಡಲು ಯೋಜಿಸಿದನು. ಘಟನೆ ನಡದ ದಿನ ಇಶಾಕ್ ಖಾನ್ ಎಂಬುವವನು ಕಮಲ್‌ಜೀತ್‌ಗೆ ಗ್ರಾಮದ ಡೈರಿಗೆ ಬರುವಂತೆ ಕರೆ ಮಾಡಿದ್ದ ಎಂದು ಹೇಳಿದ್ದಾನೆ.

ಕಮಲ್‌ ಜಿತ್ ಸಿಂಗ್ ಹೇಳಿರುವಂತೆ ಘಟನೆ ನಡೆದ ದಿನ “ಬೆಳಿಗ್ಗೆ 11 ಗಂಟೆಗೆ, ಸುಮಾರು 10 ಜನರು ಎರಡು ಕಾರುಗಳಲ್ಲಿ ಬಂದರು, ಅವರು ಕೋಲು, ಕತ್ತಿ, ಕಬ್ಬಿಣದ ಪೈಪ್‌ಗಳು ಮತ್ತು ಹರಿತವಾದ ಆಯುಧಗಳನ್ನು ಹೊಂದಿದ್ದರು. ರಿಕಿ ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದನು ಮತ್ತು ಅವರನ್ನು ನೋಡಿದ ನಾನು ಅಂಗಡಿಯಿಂದ ಓಡಿಹೋಗಲು ಪ್ರಯತ್ನಿಸಿದೆ ಆದರೆ ಅವರೆಲ್ಲರು ಅಂಗಡಿಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ನನ್ನ ಕಾಲುಗಳ ಮೇಲೆ ಕತ್ತಿಗಳಿಂದ ಹಲ್ಲೆ ನಡೆಸಿದರು ಮತ್ತು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದರು, ನಾನೆಷ್ಟು ಕೇಳಿಕೊಂಡರು ಅಮಾನುಷವಾಗಿ ಹೊಡೆಯುವುದನ್ನು ಮುಂದುವರೆಸಿದರು. ನಾನು ಸಹಾಯಕ್ಕಾಗಿ ಕೂಗಿದಾಗ, ಜನರು ಜಮಾಯಿಸುತ್ತಿದ್ದಂತೆ , ಆರೋಪಿಗಳು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾ ತಮ್ಮ ಕಾರುಗಳಲ್ಲಿ ಪರಾರಿಯಾರು ಎಂದು ತಿಳಿಸಿದ್ದಾರೆ.

ಯಮುನಾನಗರ ಪೊಲೀಸರು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದು, ಇಬ್ಬರು ಆರೋಪಿಗಳಾದ ಕಣಿಪಾಲ ನಿವಾಸಿ ರಿಕಿ ಮತ್ತು ಖಂಡ್ರಾ ಗ್ರಾಮದ ಇಶಾಕ್ ಅವರನ್ನು ಬಂಧಿಸಲಾಗಿದೆ.

ಆಲ್ಟ್ ನ್ಯೂಸ್ ಡಿಎಸ್ಪಿ ಪರ್ಮೋದ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು,  ಘಟನೆಯಲ್ಲಿ ಯಾವುದೇ ಕೋಮು ದ್ವೇಷದ ಆಯಾಮವಿಲ್ಲ ಎಂದು  ತಿಳಿಸಿದ್ದು “ನಾವು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಯಾವುದೇ ಕೋಮು ಸಂಘರ್ಷದ ಹಿನ್ನಲೆಯಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಯಾವುದೇ ಪ್ರತಿಪಾದನೆಗಳು ಆಧಾರರಹಿತವಾಗಿವೆ ಮತ್ತು ಜನರು ಅದಕ್ಕೆ ಕಿವಿಗೊಡಬಾರದು ಎಂದು ಡಿಎಸ್ಪಿ ಕುಮಾರ್ ಹೇಳಿದರು.

ಮುಂದುವರೆದು “ಆರೋಪಿಗಳು ಮತ್ತು ಸಂತ್ರಸ್ತ ಪರಸ್ಪರ ಪರಿಚಿತರಾಗಿದ್ದು, ಘಟನೆಯು ವೈಯಕ್ತಿಕ ಮತ್ತು ಹಣಕಾಸಿನ ವಿವಾದದ  ದಾಳಿಯಾಗೆ ಕಾರಣವಾಗಿದೆ ಎಂದಿದ್ದಾರೆ. ರಿಕಿ ಹಿಂದೂ ಜಾಟ್ ಸಮುದಾಯದಿಂದ ಬಂದವರು. ವಾಸ್ತವವಾಗಿ, ಎರಡೂ ಸಮುದಾಯಗಳ ಜನರು ಇದ್ದರು.

ಸಧೌರಾ ಠಾಣಾ ಪೊಲೀಸ್ ಅಧಿಕಾರಿಯನ್ನು ಸಹ ಸಂಪರ್ಕಿಸಿದ್ದೇವೆ, ಅವರು ಇಲ್ಲಿಯವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಎಫ್‌ಐಆರ್‌ನ ಪ್ರತಿಯನ್ನು ಪರಿಶೀಲಿಸಲಾಗಿದ್ದು ಸಂತ್ರಸ್ತ ಕಮಲ್‌ಜೀತ್ ಹೇಳಿಕೆಯಂತೆ ಹಣಕಾಸಿನ ವಿವಾದದ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಪೊಲೀಸರು ವಾಟ್ಸಾಪ್‌ನಲ್ಲಿ ಹಂಚಿಕೊಂಡ ಪತ್ರಿಕಾ ಟಿಪ್ಪಣಿಯಲ್ಲಿ ಅಪರಾಧ ತನಿಖಾ ಸಂಸ್ಥೆ (ಸಿಐಎ) – 1 ಇತರ ಮಂಜೀಂದ್ರ ಸಿಂಗ್ ಅಕಾ ಜಿಂದ್ರ ಮತ್ತು ಗುರು ಸೇವಕ್ ಅಕಾ ಸೆಬಿ ಇಬ್ಬರನ್ನು ಬಂಧಿಸಿದೆ .

ಒಟ್ಟಾರೆಯಾಗಿ ಹೇಳುವುದಾದರೆ, ಹರಿಯಾಣದ ಯಮುನಾನಗರದಲ್ಲಿ ವೈಯಕ್ತಿಕ ದ್ವೇಷದ ಕಾರಣ ಯುವಕನೊಬ್ಬನನ್ನು ಬರ್ಬರವಾಗಿ ಥಳಿಸಲಾಗಿದೆ. ಹಿಂದೂ ಯುವಕನನ್ನು ಮುಸ್ಲಿಮರು ಥಳಿಸಿದ್ದಾರೆ ಎಂಬುದು ಸುಳ್ಳು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಹೇಳಿಕೆಯೊಂದಿಗೆ ಘಟನೆಯ ವೀಡಿಯೊವನ್ನು ವೈರಲ್ ಮಾಡಲಾಗಿದೆ.

ಕೃಪೆ ಆಲ್ಟ್‌ನ್ಯೂಸ್ 

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಂದೂ ಯುವಕನೊಬ್ಬ ಚೂರಿಯಿಂದ ಇರಿದ ವಿಡಿಯೋವನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಎಂಬುದು ಸುಳ್ಳು

  • May 8, 2022 at 11:33 pm
    Permalink

    Why those beginners are not yet arrested on miss information and miss relation basis. Then why these type of messages are more and more promoted on Twitter or in WhatsApp.

    Reply

Leave a Reply

Your email address will not be published.

Verified by MonsterInsights