ಫ್ಯಾಕ್ಟ್‌ಚೆಕ್: ಇದು ಅಸ್ಸಾಂನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಿರುವ ಸುರಂಗ ಮಾರ್ಗದ ವಿನ್ಯಾಸವೇ?

ಅಸ್ಸಾಂನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭಾರತದ ಮೊದಲ ಸುರಂಗ ರಸ್ತೆ ಮತ್ತು ರೈಲು ಮಾರ್ಗದ ವಿನ್ಯಾಸದ ಚಿತ್ರ ಎಂದು ಹೇಳಿಕೊಳ್ಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಅಸ್ಸಾಂ ನ ಮೊದಲ ಸುರಂಗ ಮಾರ್ಗದ ನಿಜವಾದ ವಿನ್ಯಾಸವೇ ಎಂದು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಫೋಟೋ ‘Ramboll’ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ. ‘Ramboll’ ಡೆನ್ಮಾರ್ಕ್‌ನಲ್ಲಿ ಸ್ಥಾಪಿಸಲಾದ ಜಾಗತಿಕ ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ಸಲಹಾ ಕಂಪನಿಯಾಗಿದೆ. ರಾಮ್‌ಬೋಲ್ ಈ ಚಿತ್ರವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಡೆನ್ಮಾರ್ಕ್ ಮತ್ತು ಜರ್ಮನಿ ನಡುವಿನ Under water ರಸ್ತೆ ಮತ್ತು ರೈಲು ಸುರಂಗ ಮಾರ್ಗವಾದ ಫೆಹ್ಮರ್ನ್ ಬೆಲ್ಟ್‌ನ ವಿನ್ಯಾಸದ ಚಿತ್ರ ಎಂದು ಉಲ್ಲೇಖಿಸಿದ್ದಾರೆ.


ಫೆಹ್ಮರ್ನ್ ಬೆಲ್ಟ್ ಸುರಂಗ ಮಾರ್ಗದ ನಿರ್ಮಾಣದಲ್ಲಿ ತೊಡಗಿರುವ ಮತ್ತೊಂದು ಸಲಹಾ ಸಂಸ್ಥೆಯಾದ ಟನಲ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಕೂಡ ಈ ಚಿತ್ರವನ್ನು ಫೆಹ್ಮರ್ನ್ ಬೆಲ್ಟ್‌ನ ವಿನ್ಯಾಸದ ಚಿತ್ರ ಎಂದು ವಿವರಿಸಿ ಪ್ರಕಟಿಸಿತ್ತು. ‘ಕನ್ಸಲ್ಟೆನ್ಸಿ.ಯುಕೆ’ ವೆಬ್‌ಸೈಟ್ ಕೂಡ ಅದೇ ಚಿತ್ರವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು ಫೆಹ್ಮರ್ನ್ ಬೆಲ್ಟ್ ಸುರಂಗದ ಹಳೆಯ ವಿನ್ಯಾಸದ ಚಿತ್ರ ಎಂದು ತೀರ್ಮಾನಿಸಬಹುದು.

ಇತ್ತೀಚೆಗೆ, ಭಾರತ ಸರ್ಕಾರವು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನ ಸಹಕಾರದೊಂದಿಗೆ ಅಸ್ಸಾಂನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ರೈಲ್ ಕಮ್ ಹೈವೇ ಅಂಡರ್ವಾಟರ್ ಸುರಂಗವನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಹಲವು ಸುದ್ದಿ ವೆಬ್‌ಸೈಟ್‌ಗಳು ಲೇಖನಗಳನ್ನು ಪ್ರಕಟಿಸಿದವು. ಡೈರೆಕ್ಟರ್-ಜನರಲ್ ಬಾರ್ಡರ್ ರೋಡ್ಸ್ (ಡಿಜಿಬಿಆರ್) ಇತ್ತೀಚೆಗೆ ಬ್ರಹ್ಮಪುತ್ರ ನದಿಯಲ್ಲಿ ರೈಲ್ ಕಮ್ ಹೈವೇ ಅಂಡರ್ ವಾಟರ್ ಟನಲ್ ಅನ್ನು ಯೋಜಿಸಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ  ಸುರಂಗ ಮಾರ್ಗದ ವಿನ್ಯಾಸದ ಚಿತ್ರವನ್ನು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ವಿನ್ಯಾಸದ ಚಿತ್ರ ಎಂದು  ರೈಲ್ವೇ ಸಚಿವಾಲಯವಾಗಲಿ ಅಥವಾ BRO ಆಗಲಿ  ಹೇಳಿಲ್ಲ. ಫೆಹ್ಮರ್ನ್ ಬೆಲ್ಟ್ ನ ಸುರಂಗ ಮಾರ್ಗದ ವಿನ್ಯಾಸದ ಚಿತ್ರವನ್ನು ಅಸ್ಸಾಂನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗತ್ತಿರುವ ವಿನ್ಯಾಸ ಎಂದು ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಫೆಹ್ಮರ್ನ್ ಬೆಲ್ಟ್ ಸುರಂಗದ ವಿನ್ಯಾಸದ ಚಿತ್ರವನ್ನು ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಿರುವ Under water ರೈಲು ಮತ್ತು ಹೆದ್ದಾರಿ ಸುರಂಗ ಮಾರ್ಗ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಬಾದಲ್ಲಿ ಪವಾಡ ನಡೆದಿದ್ದು ನಿಜವೆ? ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights