ಫ್ಯಾಕ್ಟ್‌ಚೆಕ್ :ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ್ದು ಮುಸ್ಲಿಮರಲ್ಲ, ಹಿಂದೂಗಳು

ಇಬ್ಬರು ಮುಸ್ಲಿಂ ಯುವಕರು ನದಿ ದಡದಲ್ಲಿರುವ ಶಿವಲಿಂಗದ ಬಳಿ ಕುಳಿತು ಮದ್ಯಪಾನ ಮಾಡುತ್ತಾ, ಶಿವಲಿಂಗದ ಮೇಲೆ ಬಿಯರ್ ಸುರಿದು, ಶಿವಲಿಂಗಕ್ಕೆ ನಮಸ್ಕರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ.

https://twitter.com/RakeshpdmPandit/status/1540545553552969728?ref_src=twsrc%5Etfw%7Ctwcamp%5Etweetembed%7Ctwterm%5E1540545553552969728%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fvideo-of-youths-pouring-beer-on-shivling-viral-with-false-communal-spin-36248

ಈ ಪೋಸ್ಟ್ಅನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಶಿವಲಿಂಗಕ್ಕೆ ಸಾರಾಯಿ ಸುರಿದು ಹಿಂದೂಗಳ ಭಾವನೆಯನ್ನು ಕೆರಳಿಸಲಾಗುತ್ತಿದೆ,  ಈ ಇಬ್ಬರು ಜಿಹಾದಿಗಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದರೆ ಏನಾಗತ್ತದೆ ಊಹಿಸಿ, ಜನರು ಸಂವಿಧಾನ ಅಂತ ಅಳುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಮುಸ್ಲಿಮ್ ಯುವಕರಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ಅರ್ಥದಲ್ಲಿ ಪೋಸ್ಟ್‌ಅನ್ನು ಶೇರ್ ಮಾಡಲಾಗಿದೆ. ಈ ಪೋಸ್ಟ್ಅನ್ನು @DgpChdPolice  @PMOIndia   @dgpup  @Uppolice  ಚಂಡೀಗಢ ಮತ್ತು ಉತ್ತರ ಪ್ರದೇಶದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಹಾಗಿದ್ದರೆ ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವೀಡಿಯೊದಲ್ಲಿನ ಕೀಫ್ರೇಮ್‌ಗಳನ್ನು ಬಳಸಿ Google ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಕುರಿತು 26 ಜೂನ್ 2022 ರ ದೈನಿಕ್ ಭಾಸ್ಕರ್ ವೀಡಿಯೊ ವರದಿ ಮಾಡಿರುವುದು ಕಂಡುಬಂದಿದೆ. ಅದರ ಮೂಲ ವಿಡಿಯೋದಲ್ಲಿ ವೈರಲ್ ತುಣುಕನ್ನು ಕಾಣಬಹುದು. “ಪಾನ ಮತ್ತರಾಗಿರುವ ಯುವಕರು ಬಿಯರ್‌ನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ ಎಂಬ ವರದಿಯಲ್ಲಿ ಆರೋಪಿಗಳನ್ನು ಪಂಚಕುಲದ ವಿನೋದ್ ಕುಮಾರ್, ನರೇಶ್ ಅಲಿಯಾಸ್ ಕಾಲಿಯಾ ಮತ್ತು ಬಾಪುಧಾಮ್‌ನ ವಿವೇಕ್” ಎಂದು ಗುರುತಿಸಲಾಗಿದೆ.

Image Credit: Dainik Bhaskar

Youths From Muslim Community Poured Beer On Shivling? No, Video Viral With False Communal Spin

ಶಿವಲಿಂಗಕ್ಕೆ ಮಧ್ಯ ಸುರಿದು ವಿಕೃತಿ ಮೆರೆದವರು ಹಿಂದೂಗಳು

ವಿಡಿಯೊದ ದೃಶ್ಯಗಳನ್ನು ಆಧರಿಸಿ ಪ್ರಕರಣವನ್ನು ಯುಟಿ ಪೊಲೀಸ್ ಸೈಬರ್ ಸೆಲ್‌ಗೆ ನೀಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಯುವಕರನ್ನು ಪಂಚಕುಲದ ವಿನೋದ್ ಕುಮಾರ್, ಮಣಿಮಜ್ರಾದ ನರೇಶ್ ಅಲಿಯಾಸ್ ಕಾಲಿಯಾ ಎಂದು ಗುರುತಿಸಲಾಗಿದ್ದು,  ಈ ಇಬ್ಬರು ಆರೋಪಿಗಳು ನಡೆಸಿದ ಕೃತ್ಯವನ್ನು ವಿಡಿಯೋ ಮಾಡುತ್ತಿದ್ದ ಯುವಕನಮ್ಮು ಬಾಪುಧಾಮ್‌ನ ವಿವೇಕ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಬಜರಂಗದಳ, ಅಧ್ಯಕ್ಷ ಅನಿಲ್ ದುಮ್ರಾ ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಚಂಡೀಗಢದಲ್ಲಿ ಬಜರಂಗದಳ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಶಿವಲಿಂಗಕ್ಕೆ ಮಧ್ಯ ಸುರಿದ ಕೃತ್ಯವನ್ನು ಎಸಗಿದ ಆರೋಪಿಗಳು ಹಿಂದೂ ಸಮುದಾಯದವರು ಎಂಬುದು ಸ್ಪಷ್ಟವಾಗಿದೆ. ಈ ಘಟನೆಗೆ ಯಾವುದೇ ಕೋಮು ಹಿನ್ನಲೆಯಾಗಲಿ, ಮುಸ್ಲಿಮರ ಪಾತ್ರವಾಗಲಿ ಇಲ್ಲ ಎಂದು ದೃಢಪಟ್ಟರುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ. ಇಂತಹ ಪ್ರಕರಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವಕರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ ಮುಸ್ಲಿಮರ ಬಗ್ಗೆ ದ್ವೇಷ ಹರಡುವ ಪುಂಡರ ಬಗ್ಗೆ ಎಚ್ಚರವಿರಲಿ. ಇಂತಹ ಸುದ್ದಿಗಳನ್ನು ಪರಿಶೀಲಿಸದೇ ಹಂಚಿಕೊಳ್ಳಬೇಡಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶಿವಸೇನಾ- NCP ನಡುವೆ ಮಾರಾಮಾರಿ ನಡೆದಿದ್ದು ನಿಜವೇ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

2 thoughts on “ಫ್ಯಾಕ್ಟ್‌ಚೆಕ್ :ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ್ದು ಮುಸ್ಲಿಮರಲ್ಲ, ಹಿಂದೂಗಳು”

  • June 30, 2022 at 1:14 pm
    Permalink

    Factcheck ಹೆಸರಲ್ಲಿ ,alt news ಹೆಸರೇಳಿಕೊಂಡು ಪೋಸ್ಟ್ ಮಾಡಿದರೆ ಜನ ಬೀದಿಯಲ್ಲಿ ಬೆನ್ನು ಮೂಳೆ ನಿಮಗೆ ಮುರಿಯೋದು ಖಚಿತ ,ರಾಜಸ್ಥಾನದ ಹಿಂದೂ ಕನ್ಹಯ್ಯನ ಕೊಲೆ ವಿಚಾರವಾಗಿ ಬಾಯಿ ಬಿಡದ ಬೇವರ್ಸಿ ಪತ್ರಿಕೆಗೆ ಏನನ್ನಬೇಕು ಹೇಳಿ ಮೊದಲು ,ಬೇರೆ ಸಮಯದಲ್ಲಿ ಟೌನ್ ಹಾಲ್ ಮುಂದೆ ಬಾಯಿಬಡಿದು ಕೊಳ್ಳೋ ನಿಮಗೆ ಈಗ ನಾಲಿಗೆ ಬಿದ್ದೋಗಿದೆ ತಾನೇ ಕಮ್ಯೂನಿಸ್ಟ್ ಪತ್ರಿಕಾ ಸಂಪಾದಕರೇ

    Reply

Leave a Reply

Your email address will not be published.

Verified by MonsterInsights