ಫ್ಯಾಕ್ಟ್‌ಚೆಕ್: ಅಪಘಾತದಿಂದ ಮಗುವನ್ನು ರಕ್ಷಿಸಿದ ಸೈನಿಕ ಎಂಬುದು ನಾಟಕೀಯ ವಿಡಿಯೋ

ತಾಯಿಯೊಬ್ಬಳು ತನ್ನ ಮಗುವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡು ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಗು ರಸ್ತೆಯನ್ನು ದಾಟಲು ಮುಂದಾಗುತ್ತದೆ, ಅದೇ ಸಮಯಕ್ಕೆ ಕಾರೊಂದು ವೇಗವಾಗಿ ಮುನ್ನುಗುತ್ತಾ ಬರುತ್ತದೆ ಇನ್ನೇನು ಕಾರು ಮಗುವಿಗೆ ಡಿಕ್ಕಿ ಹೊಡೆದೇ ಬಿಟ್ಟಿತು ಎನ್ನುವಷ್ಟರಲ್ಲಿ ಇದನ್ನು ಗಮನಿಸುತ್ತಿದ್ದ ಸೈನಿಕರೊಬ್ಬರು ಅಪಘಾತದಿಂದ ಮಗುವನ್ನು ರಕ್ಷಿಸುತ್ತಾರೆ.  ಈ ವಿಡಿಯೊ CCTV ಯಲ್ಲಿ ಸೆರೆಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

CCTV ಯಲ್ಲಿ ಸೆರೆಯಾಗಿರುವ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯದಲ್ಲಿ ಸೆರೆಯಾಗಿರುವ ದೃಶ್ಯಗಳು ನೈಜ ಘಟನೆಯಲ್ಲ ಇದೊಂದು ಸ್ಕ್ರಿಪ್ಟಡ್ (ನಾಟಕೀಯ) ಎಂದು ತಿಳಿದು ಬಂದಿದೆ. ಅದೇ ವೀಡಿಯೊದ ವಿಸ್ತೃತ ಆವೃತ್ತಿಯನ್ನು ‘3RD EYE’ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ವೀಡಿಯೊದ ವಿವರಣೆಯಲ್ಲಿ, ಇದು ಸ್ಕ್ರಿಪ್ಟ್ ವೀಡಿಯೊ ಎಂದು ಓದಬಹುದು. ಅಲ್ಲದೆ, ವೀಡಿಯೊದ ವಿಸ್ತೃತ ಆವೃತ್ತಿಯ ಕೊನೆಯಲ್ಲಿ, ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬ ಶೀರ್ಷಿಕೆಯನ್ನು ಕಾಣಬಹುದು. ಇಂತಹ ಹಲವು ಸ್ಕ್ರಿಪ್ಟೆಡ್ ವೀಡಿಯೊಗಳನ್ನು ‘3RD EYE’ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಬಹುದು.

ಅದೇ ರೀತಿಯ ಡ್ರೆಸ್‌ಗಳನ್ನು ಧರಿಸಿರುವ ನಟರೊಂದಿಗೆ ಇದೇ ರೀತಿಯ ಮತ್ತೊಂದು ಸ್ಕ್ರಿಪ್ಟ್ ವೀಡಿಯೊವನ್ನು ನಟಿ ಪ್ರಿಯಾ ಅಪ್‌ಲೋಡ್ ಮಾಡಿದ್ದು, ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬ ಶೀರ್ಷಿಕೆಯನ್ನು ಕಾಣಬಹುದು

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ CCTV ಯಲ್ಲಿ ಸೆರೆಯಾದ ದೃಶ್ಯಾವಳಿಗಳಲ್ಲ, ಬದಲಿಗೆ ಶೈಕ್ಷಣಿಕ ಉದ್ದೇಶಕ್ಕೆ ಹಾಗೂ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೋವನ್ನು 3RD EYE’ ಎಂಬ YOU Tube ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೋ ಸ್ಕ್ರಿಪ್ಟೆಡ್ ಆಗಿದ್ದರೂ ಸಮಾಜಕ್ಕೆ ಸಂದೇಶವನ್ನು ನೀಡುವ ಉದ್ದೇಶಕ್ಕೆ ರಚಿಸಲಾಗಿರುತ್ತದೆ. ಜನರ ಬೇಜವ್ದಾರಿತನದ ವರ್ತನೆಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಇವುಗಳು ಪರಿಣಮ ಬೀರುತ್ತವೆ ಆದರೆ ಇದು ನೈಜ ಘಟನೆಯಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights