ಫ್ಯಾಕ್ಟ್‌ಚೆಕ್: ‘ಮೆಟ್ರೋ ನಿಲ್ದಾಣದಲ್ಲಿ ಭಯೋತ್ಪಾದಕನ ಸೆರೆ’ ಲೈವ್‌ ವಿಡಿಯೊದ ಅಸಲಿ ಕಥೆಯೇನು?

ಹರ್ಯಾಣದ ಫರಿದಾಬಾದ್‌ನಲ್ಲಿ ಭಯೋತ್ಪಾದಕನನ್ನು ಬಂಧಿಸುವ ಲೈವ್ ವಿಡಿಯೊ ಎಂದು ಹೇಳುವ ತುಣುಕೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ಕೈಯಲ್ಲಿ ಮೆಷಿನ್ ಗನ್‌ಗಳನ್ನು ಹಿಡಿದು ಭಯೋತ್ಪಾದಕನನ್ನು ಸುತ್ತುವರೆದಾಗ ತೆಗೆದ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಂಬಂಧಿತ ಕೀವರ್ಡ್‌ಗಳೊಂದಿಗೆ Google ನಲ್ಲಿ ಸರ್ಚ್ ಮಾಡಿದಾಗ ಕೆಲವು ವಿಡಿಯೋಗಳು ಲಭ್ಯವಾಗಿದ್ದು ಅವು ವೈರಲ್ ವಿಡಿಯೊವನ್ನು ಹೋಲುತ್ತಿವೆ. ‘ಫರಿದಾಬಾದ್ ನ್ಯೂಸ್‘ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವಿಡಿಯೊ ಕಂಡುಬಂದಿದೆ. ವಿಡಿಯೋವನ್ನು ಜೂನ್ 25 ರಂದು ಅಪ್‌ಲೋಡ್‌ ಮಾಡಲಾದ ವಿಡಿಯೊಗೆ, ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿಯ ಅಣಕು ಪ್ರದರ್ಶನ ಎಂಬ ಶೀರ್ಷಿಕೆ ವಿವರಣೆಯನ್ನು ನೀಡಿದ್ದಾರೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ  ಇಂಟರ್‌ನೆಟ್‌ನಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ, ಸಿಐಎಸ್‌ಎಫ್‌ನ ಅಣಕು ಡ್ರಿಲ್‌ನಿಂದ ವೀಡಿಯೊ ಎಂದು ಫರಿದಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಫರಿದಾಬಾದ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಿದ್ದರೆ, ಅದನ್ನು ಪ್ರಮುಖ ಸುದ್ದಿವಾಹಿನಿಗಳು ವರದಿ ಮಾಡುತ್ತಿದ್ದವು. ಆದರೆ ಅಂತಹ ಬಂಧನದ ಬಗ್ಗೆ ಇತ್ತೀಚಿನ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಹಾಗಾಗಿ ಇದೊಂದು ಅಣಕು ಪ್ರದರ್ಶನ ಡ್ರಿಲ್ ಎಂದು ಖಾತ್ರಯಾಗಿದೆ.

ಜೂನ್ 24 ರಂದು ಎನ್‌ಎಫ್‌ಪಿಸಿ ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್‌ಎಫ್ ನಡೆಸಿದ ಅಣಕು ಡ್ರಿಲ್ ಅನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಿದರು. “ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಇದು ನಿಜವಾಗಿ ಸಿಐಎಸ್ಎಫ್ ನಡೆಸಿದ ಅಣಕು ಡ್ರಿಲ್ ” ಎಂದು ಫರಿದಾಬಾದ್ ಪೊಲೀಸ್ ಪಿಆರ್‌ಒ ಸುಬೆ ಸಿಂಗ್ ಮಾಹಿತಿ ನೀಡಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಸಿಐಎಸ್ಎಫ್ ಅಧಿಕಾರಿಯೊಂದಿಗೆ ಮಾತನಾಡಿದ್ದು, ಇದು ಸಿಐಎಸ್ಎಫ್ ನಡೆಸಿದ ಮೆಟ್ರೋ ರೈಲು ಅಪಹರಣದ ಅಣಕು ಡ್ರಿಲ್ ಎಂದು ದೃಢಪಡಿಸಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಡ್ರಿಲ್ ನಡೆದಿದ್ದು, ಅದರ ವರದಿಯನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ಭಯೋತ್ಪಾದಕನೊಬ್ಬ ಸಿಕ್ಕಿಬಿದ್ದಿದ್ದಾನೆ ಮತ್ತು ಜನರು ಮೆಟ್ರೋದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇದು ಸಿಐಎಸ್ಎಫ್ ನಡೆಸಿದ ಅಣಕು ಡ್ರಿಲ್ ಎಂದು PIB ಹೇಳಿದೆ. ಹಾಗಾಗಿ ಇದು ಸುಳ್ಳು ಸುದ್ದಿ ಇದನ್ನು ನಂಬಬೇಡಿ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್‌ಎಫ್ ನಡೆಸಿದ ಅಣಕು ಡ್ರಿಲ್‌ನ ವೀಡಿಯೊವನ್ನು ಫರಿದಾಬಾದ್‌ನಲ್ಲಿ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ ಭಯೋತ್ಪಾದಕನನ್ನು ಬಂಧಿಸಿರುವ ಯಾವುದೇ ಇತ್ತೀಚಿನ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶಿವಸೇನಾ- NCP ನಡುವೆ ಮಾರಾಮಾರಿ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights