ಫ್ಯಾಕ್ಟ್‌ಚೆಕ್: ವಿಜಯ್ ಮಲ್ಯ BJP ಗೆ 35 ಕೋಟಿ ರೂ ಚೆಕ್ ನೀಡಿದ್ದು ನಿಜವೇ?

ಆಕ್ಸಿಸ್ ಬ್ಯಾಂಕ್ ಚೆಕ್ ನ ಚಿತ್ರದ ಪೋಸ್ಟ್‌ವೊಂದು ವಾಟ್ಸಾಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ಹೆಂಡದ ದೊರೆ ವಿಜಯ್ ಮಲ್ಯ ಲಂಡನ್‌ಗೆ ಪಲಾಯನ ಮಾಡುವ ಮುನ್ನ ಬಿಜೆಪಿಗೆ 35 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ ಎಂದು ಚೆಕ್‌ನೊಂದಿಗೆ ಸಂದೇಶದಲ್ಲಿ ಹೇಳಲಾಗಿದೆ. ವಿಜಯ್ ಮಲ್ಯ ಅವರು ಸಹಿ ಇರುವ, ಭಾರತೀಯ ಜನತಾ ಪಕ್ಷಕ್ಕೆ ನೀಡಿರುವ ಚೆಕ್ ಎಂದು ಹಂಚಿಕೊಳ್ಳಲಾಗುತ್ತಿದೆ.

” ಎಂತಾ ರಾಜಕೀಯ, ನಮ್ಮ ದೇಶದ ಜನರನ್ನು ಹೇಗೆ ಕುರಿಗಳಾಗಿ ಮಾಡುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ ಮಧ್ಯದ ದೊರೆ ವಿಜಯ್ ಮಲ್ಯ ಬ್ರಿಟನ್‌ಗೆ ಹೋಗುವುದಕ್ಕೂ ಮುನ್ನ ಅಂದರೆ 08-11-2016 ರಂದು BJP ಪಾರ್ಟಿಗೆ 35 ಕೋಟಿ ದೇಣಿಗೆ ನೀಡಿ ಹೋಗಿದ್ದಾನೆ, ಇನ್ನು ಇವನನ್ನು ಹೇಗೆ ಬಂಧಿಸುತ್ತಾರೆ ಗೊತ್ತಿರುವವರು ತಿಳಿಸಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

Facebook ಮತ್ತು  Twitter ನಲ್ಲಿ ಇದೇ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಮಲ್ಯ ಸಹಿ ಇರುವ 35 ಕೋಟಿ ರೂಪಾಯಿ ಚೆಕ್ ನ ಅಸಲಿ ಕತೆ ಏನೆಂದು ಪರಿಶೀಲಿಸೋಣ.

 

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others


ಫ್ಯಾಕ್ಟ್‌ಚೆಕ್:

ಚೆಕ್‌ನಲ್ಲಿರುವ ದೋಷಗಳು: 

ಚೆಕ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದು ನಕಲಿ ಚೆಕ್ ಎಂಬುದಕ್ಕೆ ಸಾಕ್ಷಿಯಂತೆ ಕೆಲವು ಅಂಶಗಳು ಕಂಡುಬಂದಿವೆ. ಚೆಕ್ ನಲ್ಲಿ ನಮೂದಿಸಿರುವ ದಿನಾಂಕ ನವೆಂಬರ್ 8, 2016, ಆದರೆ ಉದ್ಯಮಿ ಮಲ್ಯ ಭಾರತದಿಂದ ಪಲಾಯನ ಆಗಿದ್ದು ಮಾರ್ಚ್ 2, 2016 ರಂದು.

1. ಮೊದಲನೆಯದಾಗಿ, ಬಿಜೆಪಿಯ ಪೂರ್ಣ ರೂಪವನ್ನು ‘ಭಾರತೀಯ ಜನತಾ ಪಾರ್ಟಿ’ ಬದಲಿಗೆ ‘ಭಾರ್ತಿಯ ಜನತಾ ಪಾರ್ಟಿ’ ಎಂದು ತಪ್ಪಾಗಿ ಬರೆಯಲಾಗಿದೆ.

2. ಚೆಕ್ ಮಧ್ಯದಲ್ಲಿ ಎರಡು ಓರೆಯಾದ ಗೆರೆಗಳನ್ನು ಕಾಣಬಹುದು. ಚೆಕ್ ಬರೆಯುವಾಗ ಅಂತಹ ಯಾವುದೇ ಸಾಲುಗಳನ್ನು ಸಾಮಾನ್ಯವಾಗಿ ಎಳೆಯಲಾಗುವುದಿಲ್ಲ.

3. ವಿಜಯ್ ಮಲ್ಯ ಅವರ ಸಹಿ ಕೂಡ ನಕಲಿ. ಮಲ್ಯರ  ನಿಜವಾದ ಸಹಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಎರಡೂ ಒಂದೇ ರೀತಿ ಕಾಣುತ್ತಿಲ್ಲ. ಜೂನ್ 2018 ರಿಂದ ಮಲ್ಯ ಅವರ ಟ್ವೀಟ್‌ಗಳಲ್ಲಿ ನಿಜವಾದ ಸಹಿಯನ್ನು ಕಾಣಬಹುದು.

ಮಲ್ಯರ ನಿಜವಾದ ಸಹಿ ಮತ್ತು ನಕಲಿ ಸಹಿ ನಡುವೆ ಇರುವ ವ್ಯತ್ಯಾಸ
ಮಲ್ಯರ ನಿಜವಾದ ಸಹಿ ಮತ್ತು ನಕಲಿ ಸಹಿ ನಡುವೆ ಇರುವ ವ್ಯತ್ಯಾಸ

4. ಗ್ಲಾಮರ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಪರವಾಗಿ ಚೆಕ್ ಅನ್ನು ನೀಡಲಾಗಿದೆ. ಈ ಕಂಪನಿಯ ನಿರ್ದೇಶಕರು ಅಮಿತ್ ಕುಮಾರ್ ಸಕ್ಸೇನಾ ಮತ್ತು ಮುಖೇಶ್ ಕುಮಾರ್.

ಮೇ 2017 ರಲ್ಲಿ, ಎಎಪಿ ನಾಯಕ ಕಪಿಲ್ ಮಿಶ್ರಾ ಅವರು ಆಮ್ ಆದ್ಮಿ ಪಕ್ಷಕ್ಕೆ ನೀಡಲಾದ ಇದೇ ರೀತಿಯ ಚೆಕ್‌ಗಳನ್ನು ಪತ್ರಿಕೆಗಳಿಗೆ ಪ್ರದರ್ಶಿಸಿದ್ದರು. ಇವುಗಳಲ್ಲಿ ಒಂದು ಆಕ್ಸಿಸ್ ಬ್ಯಾಂಕ್‌ನಿಂದ ಬಂದಿತ್ತು. ಮಿಶ್ರಾ ತೋರಿಸಿದ ಒಂದರ ಹೋಲಿಕೆ ಮತ್ತು ವೈರಲ್ ಚಿತ್ರ ಎರಡೂ ಒಂದೇ ಎಂದು ಖಚಿತಪಡಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಆಮ್ ಆದ್ಮಿ ಪಕ್ಷಕ್ಕೆ ನೀಡಿದ ಚೆಕ್ ದಿನಾಂಕವನ್ನು ಹೊಂದಿಲ್ಲ.

5. ಇದಲ್ಲದೆ, ‘ಮೂವತ್ತೈದು ಕೋಟಿ ಮಾತ್ರ’ ಹಾಗೂ ಸಂಖ್ಯೆಯಲ್ಲಿ ಇರುವ ‘35,00,00,00’ ಎರಡರಲ್ಲೂ ಒಂದೇ ಕೈಬರಹದಲ್ಲಿ ಬರೆಯಲಾಗಿದೆ. ಚೆಕ್ ಕುರಿತಂತೆ ಜುಲೈ 18, 2018 ರಂದು, ಬೂಮ್‌ಲೈವ್  ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿತ್ತು.

ಉದ್ಯಮಿ ವಿಜಯ್ ಮಲ್ಯ  BJP ಪಕ್ಷಕ್ಕೆ ಧೇಣಿಗೆ ನೀಡಿರಬಹುದು, ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ  35 ಕೋಟಿ  ರೂ ಹಣದ ಚೇಕ್ ಅನ್ನು ವಿಜಯ್ ಮಲ್ಯ ನೀಡಿದ್ದಾರೆ ಎಂಬುದು ಸುಳ್ಳು. ವೈರಲ್ ಪೋಸ್ಟ್‌ನಲ್ಲಿ ಇರುವ ಚೆಕ್ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.

ವಿಜಯ್ ಮಲ್ಯ ಅವರು ಭಾರತದಿಂದ ಪಲಾಯನ ಮಾಡುವ ಮೊದಲು ಬಿಜೆಪಿಗೆ 35 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಎಡಿಟ್ ಮಾಡಲಾದ ಚೆಕ್ ನ ಫೋಟೋವನ್ನು ಹಂಚಿಕೊಳ್ಳಲಾಗಿದೆ. 2017 ರಲ್ಲಿ AAP ಯಿಂದ ಹೊರಬಂದಿದ್ದ ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಲು ಬಳಸಿದ್ದರು, ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿರುವ ಚೆಕ್ ನಕಲಿ ಎಂದು ಖಾತ್ರಿಯಾಗಿದೆ.

ರಾಜಕೀಯ ಪಕ್ಷಗಳಿಗೆ ಉದ್ಯಮಿಗಳು ದೇಣಿಗೆ ನೀಡುವುದು ಸಾಮಾನ್ಯ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚೆಕ್ ನಕಲಿ ಆದರೆ ಜನ ಸಾಮಾನ್ಯರಿಗೆ ತಿಳಿಯದಂತೆ ಬಂಡವಾಳಶಾಹಿಗಳು ಮತ್ತು ಉದ್ಯಮಿಗಳು ಲೆಕ್ಕವಿಲ್ಲದಷ್ಟು ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತಾರೆ. ಹಾಗಾಗಿ ಆಡಳಿತ ಪಕ್ಷಗಳು ಸದಾ ಅವರ ಪರವಾಗಿಯೇ ಆಡಳಿತ ನಡೆಸುತ್ತಾರೆ ಎಂಬುದು ತೆರದ ಸತ್ಯ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ :ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ್ದು ಮುಸ್ಲಿಮರಲ್ಲ, ಹಿಂದೂಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights