ಫ್ಯಾಕ್ಟ್‌ಚೆಕ್: ಪ್ರವಾಹಕ್ಕೆ ‘ಸಾವಿರಾರು ಕುರಿ ಬಲಿ’ – ವೈರಲ್ ವಿಡಿಯೊ ಎಲ್ಲಿಯದು?

ಭಾರತದಲ್ಲಿ ಬಹುತೇಕ ಕಡೆ ಭಾರೀ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಭಾರತದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಜಾನುವಾರುಗಳು ಮುಳುಗಿ ಸತ್ತಿವೆ  ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಕುರಿಗಳ ಹಿಂಡು ಮಳೆಯ ಪ್ರವಾಹಕ್ಕೆ ಸಿಲುಕಿ ಸತ್ತಿರುವ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಘಟನೆಯ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 12 ನವೆಂಬರ್ 2020 ರಂದು ‘ಅರೇಬಿಯಾ ವೆದರ್-ಸೌದಿ ಅರೇಬಿಯಾ’ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಸೌದಿ ಅರೇಬಿಯಾದ ಅರಾರ್ ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಸಾವಿರಕ್ಕೂ ಹೆಚ್ಚು ಕುರಿಗಳು ಪ್ರಾಣ ಕಳೆದುಕೊಂಡಿವೆ. ಇತರ ಕೆಲವು ಯುಟ್ಯೂಬ್ ಚಾನೆಲ್‌ಗಳು ನವೆಂಬರ್ 2020 ರಲ್ಲಿ ಇದೇ ರೀತಿಯ ವಿವರಣೆಯೊಂದಿಗೆ ಈ ವೀಡಿಯೊವನ್ನು ಪ್ರಕಟಿಸಿವೆ.

ಮತ್ತಷ್ಟು ಮಾಹಿತಿಗಾಗಿ ವಿಡಿಯೋದ ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು  ಹೆಚ್ಚಿನ ಮೂಲಗಳನ್ನು ಹುಡುಕಿದಾಗ, 14 ನವೆಂಬರ್ 2020 ರಂದು ‘Q8 ನ್ಯೂಸ್’ ವೆಬ್‌ಸೈಟ್ ಪ್ರಕಟಿಸಿದ ಲೇಖನದ ವೀಡಿಯೊದ ವಿವರಗಳು ಕಂಡುಬಂದಿವೆ. ಸತ್ತ ಜಾನುವಾರುಗಳ ವೈರಲ್ ಫೋಟೋದಲ್ಲಿ ಕಂಡುಬರುವ  ರೀತಿಯಲ್ಲೆ ಫೋಟೋವನ್ನು ಪ್ರಕಟಿಸಿದೆ. ಈ ಲೇಖನದಲ್ಲಿ ಅರಾರ್ ಅನ್ನು ಮುಳುಗಿಸಿದ ಪ್ರವಾಹವನ್ನು ವರದಿ ಮಾಡಿದೆ, ಸೌದಿ ಪ್ರಜೆಯ ಮಾಲೀಕತ್ವದ ನೂರಾರು ಕುರಿಗಳ ಸಾವಿಗೆ ಪ್ರವಾಹ ಕಾರಣವಾಗಿದೆ ಎಂದು ಉಲ್ಲೇಖಿಸಿದೆ. ಅದೇ ರೀತಿ ವರದಿ ಮಾಡುತ್ತಾ, ಹಲವು ಸುದ್ದಿ ವೆಬ್‌ಸೈಟ್‌ಗಳು ನವೆಂಬರ್ 2020 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಇತ್ತೀಚೆಗೆ ಮಧ್ಯಪ್ರದೇಶದ ಶಿವಪುರಿ ನಗರದಲ್ಲಿ ಭಾರೀ ಮಳೆಯ ವೇಳೆ ಸಿಡಿಲು ಬಡಿದು ಇಪ್ಪತ್ತು ಕುರಿಗಳ ಹಿಂಡು ಸಾವನ್ನಪ್ಪಿವೆ. ಆದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅತೀ ಹೆಚ್ಚು ಮಳೆಯಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾದಾಗೆಲ್ಲ ಈ ವಿಡಿಯೊ ಶೇರ್ ಆಗುತ್ತಿರುತ್ತದೆ. ಆದರೆ ಇದು 2020ರ ಹಳೆಯ ವಿಡಿಯೊ.

ಒಟ್ಟಾರೆಯಾಗಿ ಹೇಳುವುದಾದರೆ, ಸೌದಿ ಅರೇಬಿಯಾದ ಹಳೆಯ ವೀಡಿಯೊವನ್ನು ಭಾರತದಲ್ಲಿ ಪ್ರವಾಹದ ಸಮಯದಲ್ಲಿ ಮುಳುಗಿದ ಸತ್ತ ಜಾನುವಾರುಗಳ ಇತ್ತೀಚಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಗುವಿನ ಅಪಹರಣ ವಿಡಿಯೋ ಹಿಂದಿನ ರಹಸ್ಯವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights