ಫ್ಯಾಕ್ಟ್‌ಚೆಕ್ : ಮೋದಿ, ಶಿಂಧೆ ಮತ್ತು ದ್ರೌಪದಿ ಮುರ್ಮು ಅವರ ಹರೆಯದಲ್ಲಿನ ಫೋಟೋ ಎಂಬುದು ನಿಜವೇ?

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರ ಪ್ರದೇಶದ CM ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪ್ರಾಯದಲ್ಲಿ(ಯೌವ್ವನದ) ಹೇಗಿದ್ದರು ನೋಡಿ ಎಂದು ಹೇಳಿಕೊಂಡು ನಾಲ್ಕು ಚಿತ್ರಗಳ ಕೊಲಾಜ್ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ನೆಲವನ್ನು ಗುಡಿಸುತ್ತಿರುವಂತೆ, ಸೀರೆಯಲ್ಲಿ ಕಾಣಿಸಿಕೊಂಡ ಮಹಿಳೆ ದ್ರೌಪದಿ ಮುರ್ಮು ಎಂದು,  ಆಟೋದೊಂದಿಗೆ ಪೋಸ್ ಕೊಡುತ್ತಿರುವ ವ್ಯಕ್ತಿ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಎಂದು ಪ್ರತಿಪಾದಿಸಿ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

6 ಜನರು, ಗಡ್ಡ, ನಿಂತಿರುವ ಜನರು ಮತ್ತು ಪಠ್ಯ 'ಮೋದಿ मैसदेशदलरंहा መመፕ ಮಾರುಮ मेरा मेरादेश देश देशबदल बदल रहा ला हायो| I 開演 新年 MH14B172 8172 MHи ಯೋಗಿ ಅಕನಾದ Interesting pics. Modi, Murmu, Yogi and Eknath Shinde' ಹೇಳುತ್ತಿದೆ ನ ಚಿತ್ರವಾಗಿರಬಹುದು

ಫ್ಯಾಕ್ಟ್‌ಚೆಕ್ :

1. ನರೇಂದ್ರ ಮೋದಿಯವರ ಫೋಟೋ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ  ಚಿತ್ರಗಳಲ್ಲಿ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 2 ಜೂನ್ 1946 ರಲ್ಲಿ ಹರಿಜನ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಬೀದಿ ಗುಡಿಸುತ್ತಿರುವ ಸಂದರ್ಭವನ್ನು ಚಿತ್ರದ ವಿವರಣೆ ಹಂಚಿಕೊಳ್ಳಲಾಗಿದೆ. ಮೂಲ ಚಿತ್ರವನ್ನು ಮ್ಯಾಕ್ಸ್ ಡೆಸ್ಫೋರ್ ಎಂಬ ಛಾಯಾಗ್ರಾಹಕರಿಂದ 1946 ರಲ್ಲಿ ಸೆರೆಹಿಡಿಯಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಯುವ ಮೋದಿ ನೆಲವನ್ನು ಗುಡಿಸುತ್ತಿರುವುದನ್ನು ತೋರಿಸುವ ಮೊದಲ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಬಹಳ ಹಿಂದೆಯೇ ನಿರಾಕರಿಸಲಾಗಿದೆ. ಅದರ ಹೊರತಾಗಿಯೂ, ಫೋಟೋಗಳು ಆಗೊಮ್ಮೆ ಈಗೊಮ್ಮೆ ಹಂಚಿಕೊಳ್ಳಲಾಗುತ್ತಿದೆ. 2014 ರ ಲೋಕಸಭೆ ಚುನಾವಣೆಗೆ ಮೋದಿಯವರ ಪರ ಪ್ರಚಾರ ಮಾಡುವಾಗನಿಂದಲೂ ಈ ಫೋಟೋವನ್ನು ವೈರಲ್ ಮಾಡಲಾಗಿದೆ. ಸ್ವಚ್ಛ ಬಾರತ್ ಅಭಿಯಾನದ ಸಂರ್ಭದಲ್ಲಿ ಈ ಪೋಟೋವನ್ನು ವೈರಲ್ ಮಾಡಲಾಗಿದೆ. ಆದರೆ ಇದು ಮೋದಿಯವರ ಫೋಟೊ ಅಲ್ಲ.

 

ಎರಡು ಚಿತ್ರಗಳನ್ನು ಹೋಲಿಸಿದಾಗ, ಮೋದಿಯವರ ಮುಖವನ್ನು ಫೋಟೋಶಾಪ್ ಮಾಡಿರುವುದನ್ನು ನಾವು ಗಮನಿಸಬಹುದು. ಮತ್ತೊಬ್ಬ ವ್ಯಕ್ತಿಯ ಚಿತ್ರದ ಮೇಲೆ ಮೋದಿ ಮುಖವನ್ನು ಫೋಟೋಶಾಪ್ ಮಾಡಲಾಗಿದೆ.

(ಮೂಲ: ದಿ ಕ್ವಿಂಟ್)

2. ದ್ರೌಪದಿ ಮುರ್ಮು ಅವರ ಫೋಟೋ ಅಲ್ಲ

ನಾವು Google ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು 23 ಜುಲೈ 2022 ರಂದು ಪೋಸ್ಟ್ ಮಾಡಿದ ಸುದ್ದಿ ಚಾನಲ್ News18 ನ ಲೇಖನ ಲಭ್ಯವಾಗಿದೆ. ವರದಿಯು ಮಹಿಳೆಯ ಅದೇ ಚಿತ್ರವನ್ನು ಹೊಂದಿತ್ತು ಮತ್ತು ಆಕೆಯ ಹೆಸರನ್ನು ಸುಕುಮಾರ್ ತುಡು ಎಂದು ಉಲ್ಲೇಖಿಸಿದೆ. ತುಡು ಅವರು ಉಪರಬೇಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಾರೆ.ಈ ಮಹಿಳೆ ಒಡಿಶಾ ಮೂಲದವರು.

3. ಯೋಗಿ ಆದಿತ್ಯನಾಥ್ ಅವರ ಫೋಟೋ

ಯೋಗಿ ಆದಿತ್ಯನಾಥ್ ಎಂದಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದಾಗ, 19 ಮಾರ್ಚ್ 2017 ರಂದು ಪೋಸ್ಟ್ ಮಾಡಿದ ಇಂಗ್ಲಿಷ್ ಪತ್ರಿಕೆ, ಟೈಮ್ ಆಫ್ ಇಂಡಿಯಾದ ಲೇಖನವ ಲಭ್ಯವಾಗಿದೆ. ಯೋಗಿ ಆದಿತ್ಯನಾಥ್ ಅಲಿಯಾಸ್ ಅಜಯ್ ಸಿಂಗ್ ಬಿಷ್ತ್ ಅವರು 22 ವರ್ಷದವರಾಗಿದ್ದಾಗ 1994 ರಲ್ಲಿ ‘ದೀಕ್ಷೆ’ ಸ್ವೀಕರಿಸಿದ ಸಂದರ್ಭದಲ್ಲಿ ಎಂದು ಹೇಳುವ ಶೀರ್ಷಿಕೆಯೊಂದಿಗೆ ಅದೇ ವೈರಲ್ ಚಿತ್ರವನ್ನು ಕಾಣಬಹುದು. ಇದು ಯೋಗಿ ಎನ್ನುವುದು ಸತ್ಯ.

4. ಏಕನಾಥ್ ಶಿಂಧೆ ಅವರ ಫೋಟೋ

ಏಕನಾಥ್ ಶಿಂಧೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ತನಿಖೆ ಮಾಡಿದಾಗ ಚಿತ್ರದಲ್ಲಿ ಕಾಣುವ ಆಟೋ ರಿಕ್ಷಾದ ನಂಬರ್ ಪ್ಲೇಟ್ ‘MH 14 8172’ ಆಗಿದೆ.  ನಂತರ ‘MH 14’ ಎಂಬ ಕೋಡ್ ಎಲ್ಲಿದೆ ಎಂದು ಪರಿಶೀಲಿಸಿದಾಗ ಆರ್‌ಟಿವೋ (RTO) ವಾಹನ ನೋಂದಣಿ ವಿವರಗಳ ಪ್ರಕಾರ, ‘MH-14’ ಪುಣೆಯಲ್ಲಿರುವ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡದ್ದ ಎಂದು ತಿಳಿದುಬಂದಿದೆ.

ಚಿತ್ರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನಾವು ಫೇಸ್‌ಬುಕ್‌ನಲ್ಲಿ ವಿವಿಧ ಪ್ರೊಫೈಲ್‌ಗಳನ್ನು ಕಂಡುಕೊಂಡಿದ್ದೇವೆ ಮತ್ತು ಇದೇ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ  ಕೆಲವರು ಅಪ್‌ಲೋಡ್ ಮಾಡಿದ್ದು ಚಿತ್ರದಲ್ಲಿರುವ ವ್ಯಕ್ತಿ ಏಕನಾಥ್ ಶಿಂಧೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಸ್ಥಾಪಕ ಅಧ್ಯಕ್ಷ ನಾಯಕ ಬಾಬಾ ಕಾಂಬಳೆ ರಿಕ್ಷಾದೊಂದಿಗೆ ಅವರ ಫೋಟೋ ಇದು. 1997 ರಲ್ಲಿ ರಿಕ್ಷಾ ಓಡಿಸುತ್ತಿರುವ ಫೋಟೋ, ರಾತ್ರಾಣಿ ರಿಕ್ಷಾ ನಿಲ್ದಾಣದಲ್ಲಿ ಶ್ರಾವಣ ಮಾಸದ ಪೂಜೆಯ ಸಂದರ್ಭದ್ದು ಎಂದು ವಿವರಣೆಯಲ್ಲಿದೆ. ಈ ಚಿತ್ರವು ಬಾಬಾ ಕಾಂಬಳೆ ಅವರದ್ದು ಮತ್ತು ಮಹಾ ಸಿಎಂ ಏಕನಾಥ್ ಶಿಂಧೆ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯೋಗಿ ಫೋಟೋ ಹೊರತುಪಡಿಸಿ ಉಳಿದಂತೆ ಮೋದಿ, ಶಿಂಧೆ ಮತ್ತು ದ್ರೌಪದಿ ಮುರ್ಮು ಅವರ ಪೋಟೋವನ್ನು ಎಡಿಟ್ ಮಾಡಿ ಚಿಕ್ಕ ವಯಸ್ಸಿನ ಪೋಟೋ ಎಂದು ಎಡಿಟ್ ಮಾಡಿದ ಪೋಟೋವನ್ನು ಹಂಚಿಕೊಂಡಿದ್ದಾರೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಭಿಕ್ಷುಕರ ಬಗ್ಗೆ ಎಚ್ಚರಿಕೆ ಎನ್ನುವ ಪೊಲೀಸ್ ಪ್ರಕಟಣೆಯ ವಾಸ್ತವವೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights