ಫ್ಯಾಕ್ಟ್ಚೆಕ್: ವೈರಲ್ ವಿಡಿಯೋ ರಾಜಸ್ತಾನದ ದಲಿತ ವಿದ್ಯಾರ್ಥಿಯ ಸಾವಿನ ಘಟನೆಗೆ ಸಂಬಂಧಿಸಿದ್ದಲ್ಲ
ರಾಜಸ್ಥಾನದ ಜಲೋರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಪಾತ್ರೆಯಲ್ಲಿ ಇಟ್ಟಿದ್ದ ನೀರು ಕುಡಿದ್ದದಕ್ಕೆ ಜಾತಿವಾದಿ ಶಿಕ್ಷಕನೊಬ್ಬ ಥಳಿಸಿದ್ದರಿಂದ ಒಂಬತ್ತು ವರ್ಷದ ದಲಿತ ಬಾಲಕ ಶನಿವಾರ ಮೃತಪಟ್ಟಿದ್ದಾನೆ.
ಆಘಾತಕಾರಿ ಘಟನೆಯ ಬಗ್ಗೆ ಸಾರ್ವಜನಿಕರ ಆಕ್ರೋಶದ ನಡುವೆ, ಫೇಸ್ಬುಕ್ ಬಳಕೆದಾರರು ಶಿಕ್ಷಕನೊಬ್ಬ ಬಾಲಕನನ್ನು ಅಮಾನುಷವಾಗಿ ಥಳಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ನೀರು ಕುಡಿದ ಕಾರಣಕ್ಕೆ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿ ಈ ರೀತಿ ಕೊಂದಿದ್ದಾನೆ ಎಂದು ಪ್ರತಿಪಾದಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೊ ರಾಜಸ್ಥಾನದ ಜಾಲೋರ್ನ ಸುರಾನಾ ಗ್ರಾಮದಲ್ಲಿ ನಡೆದ ಘಟನೆಯದ್ದಾ ಎಂದು ಪೊಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಕನೊಬ್ಬ ಬಾಲಕನನ್ನು ಅಮಾನುಷವಾಗಿ ಥಳಿಸುತ್ತಿರುವ ವೈರಲ್ ಆಗಿರುವ ವಿಡಿಯೊಗೂ ಮತ್ತು ರಾಜಸ್ತಾನದ ಜಲೋರ್ನಲ್ಲಿ ನಡೆದ ಘಟನೆಗೂ ಸಂಬಂಧವಿಲ್ಲ ಎಂದು ‘ಇಂಡಿಯಾ ಟುಡೇ’ ಫ್ಯಾಕ್ಟ್ಚೆಕ್ ಕಂಡುಹಿಡಿದಿದೆ. ವೈರಲ್ ಆಗಿರುವ ವಿಡಿಯೊ ಬಿಹಾರದ ಪಾಟ್ನಾದಲ್ಲಿ ಟ್ಯೂಷನ್ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಅಮಾನುಷವಾಗಿ ಥಳಿಸಿದ್ದಕ್ಕಾಗಿ ಬಂಧಿಸಲಾದ ವೀಡಿಯೊ ಎಂದು ಖಚಿತವಾಗಿದೆ.
#ಪ್ರತಿಪಾದನೆ : ಶಿಕ್ಷಕನೊಬ್ಬ ಬಾಲಕನಿಗೆ ಅಮಾನುಷವಾಗಿ ಥಳಿಸುವ ಘಟನೆಯು ಗುಜರಾತಿನಲ್ಲಿ ನಡೆದಿದೆ ಎಂದು ವಿಡಿಯೋ ವೈರಲ್#ಏನ್ಸುದ್ದಿ : 2022ರ ಜುಲೈನಲ್ಲಿ ಬಿಹಾರದ ಪಾಟ್ನಾದಲ್ಲಿ ಘಟನೆ ನೆಡೆದಿದ್ದು ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿ ಜೈಲುಪಾಲಾಗಿದ್ದಾನೆ.#FactCheck #fakenews #facts pic.twitter.com/3Cq4uMfWju
— ensuddi.com (@EnSuddi) July 17, 2022
ಈ ಹಿಂದೆ ಈ ವಿಡಿಯೋವನ್ನು ಬೇರೆ ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾಗ ಏನ್ ಸುದ್ದಿ.ಕಾಂ ಫ್ಯಾಕ್ಟ್ಚೆಕ್ ಮಾಡುವ ಮೂಲಕ ವಾಸ್ತವ ಏನೆಂದು ಪರಿಶಿಲಿಸಿ ಘಟನೆ ಬಗ್ಗೆ ವಿವರಣೆ ನೀಡಿತ್ತು.
ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜುಲೈ 7, 2022 ರಂದು ANI ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ ವೈರಲ್ ವಿಡಿಯೊದ ಸ್ಕ್ರೀನ್ಶಾಟ್ಗಳು ಲಭ್ಯವಾಗಿವೆ. ಟ್ವೀಟ್ ಪ್ರಕಾರ, ಘಟನೆಯು ಬಿಹಾರದ ಅಮರಕಾಂತ್ ಕುಮಾರ್ ಎಂಬ ಟ್ಯೂಷನ್ ಶಿಕ್ಷಕ ಆರು ವರ್ಷದ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿದ್ದಕ್ಕಾಗಿ ಬಂಧಿಸಲಾಯಿತು ಎಂದು ವರದಿ ಮಾಡಿದೆ.
Bihar: Tuition teacher Amarkant Kumar arrested for brutally thrashing 6y/o student
Teacher thrashed the child after he witnessed teacher talking to a female student.Special team was constituted considering matter's seriousness: SSP Patna
(Pic 1,2,3: Screengrab from viral video) pic.twitter.com/II0X832l2E
— ANI (@ANI) July 7, 2022
“ದಿ ಟೈಮ್ಸ್ ಆಫ್ ಇಂಡಿಯಾ” ನಂತಹ ಹಲವಾರು ಮಾಧ್ಯಮಗಳು ಘಟನೆಯ ಬಗ್ಗೆ ವರದಿ ಮಾಡಿದ್ದವು. ಈ ಸುದ್ದಿ ವರದಿಗಳ ಪ್ರಕಾರ, ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕಾಗಿ ಅಮರಕಾಂತ್ ಕುಮಾರ್ ಆರು ವರ್ಷದ ಮಗುವಿಗೆ ಥಳಿಸಿದ್ದಾರೆ.

#Rajasthan
No words for this! A 9-year-old Dalit boy beaten to death allegedly by his school teacher, who got angry on seeing the boy drink water from an earthen pot (matka) meant for the upper casteTeacher has been arrested under sec 302 of IPC & relevant sections of ST SC Act pic.twitter.com/7ckdLS20NH
— Tabeenah Anjum (@TabeenahAnjum) August 13, 2022
ಸವರ್ಣಿಯರಿಗೆ ಮೀಸಲಾದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕಾಗಿ ಶಿಕ್ಷಕರು ನಿರ್ದಯವಾಗಿ ಥಳಿಸಿದ್ದಾರೆ ಎಂದು ಶನಿವಾರ ಅಹಮದಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟ ರಾಜಸ್ಥಾನದ 9 ವರ್ಷದ ದಲಿತ ಬಾಲಕನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೃತ ಬಾಲಕನನ್ನು ಇಂದ್ರ ಮೇಘವಾಲ್ ಎಂದು ಗುರುತಿಸಲಾಗಿದ್ದು, ಜಾಲೋರ್ನ ಸುರಾನಾ ಗ್ರಾಮದ ಸರಸ್ವತಿ ವಿದ್ಯಾ ಮಂದಿರದಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದನು ಎಂದು ತಿಳಿದುಬಂದಿದೆ. ಇನ್ನು, ಆರೋಪಿ ಶಿಕ್ಷಕನನ್ನು ಜಾಲೋರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವಿಟರ್ನಲ್ಲಿ ತಮ್ಮ ದುಃಖ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.
जालौर के सायला थाना क्षेत्र में एक निजी स्कूल में शिक्षक द्वारा मारपीट के कारण छात्र की मृत्यु दुखद है। आरोपी शिक्षक के विरुद्ध हत्या व SC/ST एक्ट की धाराओं में प्रकरण पंजीबद्ध कर गिरफ्तारी की जा चुकी है।
— Ashok Gehlot (@ashokgehlot51) August 13, 2022
ಒಟ್ಟಾರೆಯಾಗಿ ಹೇಳುವುದಾದರೆ, ಜಾಲೋರ್ನ ಸುರಾನಾ ಗ್ರಾಮದ ಸರಸ್ವತಿ ವಿದ್ಯಾ ಮಂದಿರದಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ದಲಿತ ಬಾಲಕ ಇಂದ್ರ ಮೇಘವಾಲ್, ಸವರ್ಣಿಯರಿಗೆ ಮೀಸಲಾದ ಪಾತ್ರೆಯಲ್ಲಿ ನೀರು ಕುಡಿದ ಕಾರಣಕ್ಕೆ ಶಿಕ್ಷಕರು ನಿರ್ದಯವಾಗಿ ಥಳಿಸಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ, ಶಿಕ್ಷಕನನ್ನು ಬಂಧಿಸಲಾಗಿದೆ. ಆದರೆ ಈಗ ವೈರಲ್ ಆಗಿರುವ ವಿಡಿಯೋ ಜಲೋರ್ನ ಆಘಾತಕಾರಿ ಘಟನೆಗೆ ಸಂಬಂಧಿಸಿಲ್ಲ. ಬಿಹಾರದ ಪಾಟ್ನಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಆಗಿರುವ ವಿಡಿಯೋಗೂ, ರಾಜಸ್ಥಾಸನ ಜಾಲೋರ್ನ ಸುರಾನಾ ಗ್ರಾಮದಲ್ಲಿ ನಡೆದ ಘಟನೆಗೂ ಸಂಬಂಧವಿಲ್ಲ. ಆದರೆ ಎರಡೂ ಶಿಕ್ಷಾರ್ಹ ಅಪರಾಧಗಳೇ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಚಿತ್ರ ಕೆತ್ತನೆ ಮಾಡಲಾಗಿತ್ತೆ!


ಆ ಶಿಕ್ಷಕರನ್ನು ಸಹ ಕೊಂದು ಹಾಕಬೇಕು ಇವತ್ತಿನ ನ್ಯಾಯಲಯಗಳು (ದುಡ್ಡು) ಹಣದ ಹಿಂದೆ ಹೋಗುತ್ತಿವಿ ನ್ಯಾಯ ಸಾಯುತ್ತಿದ್ದೆ