ಫ್ಯಾಕ್ಟ್‌ಚೆಕ್ : ಅಂಚೆ ಇಲಾಖೆಯಲ್ಲಿ 1 ಲಕ್ಷ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂಬುದು ಸುಳ್ಳು

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1 ಲಕ್ಷಕ್ಕೂ ಹೆಚ್ಚು  ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದೇ ಸುದ್ದಿಯನ್ನು ‘ನ್ಯೂಸ್ 18‘ , ‘ಡಿಎನ್‌ಎ‘  ಮತ್ತು ‘ಇಂಡಿಯಾ.ಕಾಮ್‘ (ಆರ್ಕೈವ್ ಮಾಡಲಾಗಿದೆ) ನಂತಹ ಹಲವು ಮಾಧ್ಯಮಗಳು ಇದೆ ರೀತಿಯ ವರದಿಗಳನ್ನು ಮಾಡಿವೆ. ಹಾಗಿದ್ದರೆ  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ ಅಂಚೆ ಇಲಾಖೆಯಲ್ಲಿ 1ಲಕ್ಷ ಖಾಲಿ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆಯೇ ಎಂದು ಪರಿಶೀಲಿಸಲು ‘ಇಂಡಿಯನ್ ಪೋಸ್ಟ್’ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ, 1ಲಕ್ಷ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರುವ ಇತ್ತೀಚಿನ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಖಾಲಿ ಹುದ್ದೆಯ ಅಧಿಸೂಚನೆಯ ಸ್ಕ್ರೀನ್‌ಶಾಟ್‌ಗಳನ್ನು ಕೆಲವು ಸುದ್ದಿ ಲೇಖನಗಳಲ್ಲಿ ಪ್ರಕಟಿಸಿವೆ. ಸ್ಕ್ರೀನ್‌ಶಾಟ್‌ನಿಂದ ಕೆಲವು ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಅದು ಇತ್ತೀಚೆಗೆ ‘ಉದ್ಯೋಗಿ ಕಾರ್ನರ್’ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಡಾಕ್ಯುಮೆಂಟ್‌ನ ಭಾಗವಾಗಿರುವುದು ಕಂಡುಬಂದಿದೆ (‘ಇಲಾಖೆಯಲ್ಲಿನ ವಿವಿಧ ಕೇಡರ್‌ಗಳಲ್ಲಿ 01.08.2022 ರಂತೆ ಪೋಸ್ಟ್‌ಗಳ ಮಂಜೂರಾತಿ’) ಇಂಡಿಯಾ ಪೋಸ್ಟ್, ‘ನೇಮಕಾತಿ’ ಪುಟದಲ್ಲಿ ಅಲ್ಲ.

ಒಂದು ವೇಳೆ ಅಂಚೆ ಇಲಾಖೆ 1 ಲಕ್ಷ ಖಾಲಿ ಹುದ್ದೆಗಳಿಗೆ ಉದ್ಯೋಗ ಅಧಿಸೂಚನೆಯನ್ನು ಅಧಿಕೃತವಾಗಿ ಇಲಾಖೆಯೇ ಹೊರಡಿಸಿದ್ದರೆ ಅರ್ಜಿಯ ದಿನಾಂಕಗಳು, ಅರ್ಹತೆ, ಪರೀಕ್ಷಾ ಕೇಂದ್ರಗಳು ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ವಿವರಗಳು ಆ ದಾಖಲೆಯ ಭಾಗವಾಗಿರುತ್ತಿದ್ದವು ಆದರೆ ಇಲ್ಲಿ ಅದ್ಯಾವುದರ ವಿವರಗಳೂ ಇಲ್ಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಇಂಡಿಯಾ ಪೋಸ್ಟ್’ ಇತ್ತೀಚೆಗೆ 1 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಯಾವುದೇ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ. ‘ಸರ್ಕಲ್‌ವಾರು ಮಂಜೂರಾದ ಒಟ್ಟು ಸಾಮರ್ಥ್ಯದ ಪೋಸ್ಟ್‌ಮ್ಯಾನ್, ಮೇಲ್‌ಗಾರ್ಡ್ ಮತ್ತು ಎಂಟಿಎಸ್’ ಸಂಖ್ಯೆಗಳನ್ನು ಉಲ್ಲೇಖಿಸಿ ಹೇಳಿರುವ ವಿವರಗಳನ್ನು,  ಖಾಲಿ ಹುದ್ದೆಗಳ ಸಂಖ್ಯೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ  ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಕೇಕ್‌ ಪ್ಯಾಕೆಟ್‌ನಲ್ಲಿ ಮಾತ್ರೆಗಳಿದ್ದವೆ? ತಿಂದರೆ ಮಕ್ಕಳಿಗೆ ಪಾರ್ಶ್ವವಾಯು ತಗುಲುವುದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights