ಫ್ಯಾಕ್ಟ್‌ಚೆಕ್: ಮೈಸೂರಿನ ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಮುಸ್ಲಿಂ ಎಂದು ಸುಳ್ಳು ಹರಡಿದ ಬಲಪಂಥೀಯರು

21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ, ಮೈಸೂರು ನಗರದ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಕೊಲೆಯಾದ ಬಗ್ಗೆ ಮೈಸೂರಿನ ಸ್ಥಳಿಯ ಸುದ್ದಿ ಮಾಧ್ಯಮಗಳು ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಯ ಪ್ರಕಾರ, ಯುವತಿಯು ತನ್ನ ಗೆಳೆಯನೊಂದಿಗೆ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಗ ಕೊಲೆಯಾಗಿದ್ದಳು. ಆರೋಪಿಯು 28 ವರ್ಷದ ಆಶಿಕ್ ಎಂಬ ಹೆಸರಿನವನಾಗಿದ್ದು, ಆತ ಹಿನಕಲ್ ಗ್ರಾಮದ ನಿವಾಸಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸುದರ್ಶನ್ ನ್ಯೂಸ್ ನ ಪತ್ರಕರ್ತ ಸಾಗರ್ ಕುಮಾರ್ ಸುದ್ದಿ ವರದಿಯಲ್ಲಿ ಲಭ್ಯವಾದ ಸಂತ್ರಸ್ತೆ ಮತ್ತು ಆರೋಪಿಗಳ ಫೋಟೋ ಕೊಲಾಜ್ ಅನ್ನು ಟ್ವೀಟ್ ಮಾಡಿದ್ದಾರೆ ಮತ್ತು ಎಂ ಹುಡುಗನೊಂದಿಗೆ ಹಿಂದೂ ಹುಡುಗಿ ಏಕೆ ಇದ್ದಳು ಎಂದು ಆರೋಪಿಯನ್ನು ಮುಸ್ಲಿಂ ಎಂದು ಕರೆದಿದ್ದಾರೆ.

ಆರೋಪಿಯು ಮುಸ್ಲಿಂ  ಹೆಸರನ್ನು ಹೊಂದಿದ್ದರಿಂದ ಇದು ಅಂತರ್ಧರ್ಮೀಯ ಸಂಬಂಧ ಎಂದು ಅವರ ಟ್ವೀಟ್ ಧ್ವನಿಸುತ್ತಿದೆ. ಹಿಂದೂ ಮಹಿಳೆಯರು ಮತ್ತು ಮುಸ್ಲಿಂ ಪುರುಷರ ನಡುವಿನ ಅಂತರಧರ್ಮೀಯ ಸಂಬಂಧಗಳನ್ನು ಸಾಮಾನ್ಯವಾಗಿ “ಲವ್ ಜಿಹಾದ್” ಎಂದು ಕರೆಯಲಾಗುತ್ತದೆ, ಇದು ಹಿಂದೂ ಯುವತಿಯರನ್ನು ಮೋಸದ ಮೂಲಕ ಬಲೆಗೆ ಬೀಳಿಸಿಕೊಳ್ಳುವ ಮುಸ್ಲಿಂ ಯುವಕರು ಅವರನ್ನು ತಮ್ಮ ಧರ್ಮಕ್ಕೆ ಮತಾಂತರಿಸುತ್ತಾರೆ. ಎಂದಿದ್ದಾರೆ.

ಈ ಘಟನೆಯನ್ನು ಝೀ ನ್ಯೂಸ್, ಟೈಮ್ಸ್ ಆಫ್ ಇಂಡಿಯಾ ಮಲಯಾಳಂ, ನ್ಯೂಸ್ 18 ಕನ್ನಡ, ಟಿವಿ9 ಕನ್ನಡ ಹಾಗೂ ಮಾತೃಭೂಮಿ ಕೂಡ ವರದಿ ಮಾಡಿವೆ. ನ್ಯೂಸ್ 18 ಕನ್ನಡ ಹಾಗೂ  ಟಿವಿ9 ಕನ್ನಡದ ವರದಿಗಳನ್ನು ಹೊರತುಪಡಿಸಿ, ಉಳಿದ ವರದಿಗಳು ಆರೋಪಿಯನ್ನು ಆಶಿಕ್ ಎಂದು ಹೆಸರಿಸಿವೆ. ಉಳಿದ ವರದಿಗಳಲ್ಲಿ ಅವರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಇದಕ್ಕೆ ಕೋಮು ಬಣ್ಣ ನೀಡಿದ್ದಾರೆ. ಹಾಗಿದ್ದರೆ ಟ್ವಿಟರ್ ಮತ್ತು ಸುದರ್ಶನ್ ನ್ಯೂನ್‌ ಘಟನೆಯನ್ನು ಕೋಮು ಹಿನ್ನಲೆಯಲ್ಲಿ ಮಾಡಲಾದ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ಮೈಸೂರು ಯುವತಿ ಅಪೂರ್ವ ಶೆಟ್ಟಿ ಕೊಲೆ ಪ್ರಕರಣಕ್ಕೆ ಕೋಮು ಕೋಮು ಆಯಾಮವಿಲ್ಲ ಎಂದು Alt News ವರದಿ ಮಾಡಿದೆ. Alt News ಮೈಸೂರು ಡಿಸಿಪಿ ಪ್ರದೀಪ್ ಗುಂಟಿ (ಕಾನೂನು ಮತ್ತು ಸುವ್ಯವಸ್ಥೆ) ಅವರನ್ನು ಸಂಪರ್ಕಿಸಿದ್ದು, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿರುವ Alt News ಆರೋಪಿಯ ಹೆಸರು ಆಶಿಕ್ ಅಲ್ಲ, ಆಶಿಶ್ ಎಂದು ಖಚಿತಪಡಿಸಿದ್ದಾರೆ. ಕೊಲೆಯಾದ ಯುವತಿ ಹಾಗೂ ಆರೋಪಿ ಇಬ್ಬರೂ ಹಿಂದೂ ಸಮುದಾಯದವರು ಎಂದು ಅವರು ಖಚಿತಪಡಿಸಿದ್ದಾರೆ. Alt News ಎಫ್ಐಆರ್ ನ ಪ್ರತಿ ಪರಿಶೀಲಿಸಿದ್ದು, ಅಲ್ಲಿ ಆರೋಪಿಯನ್ನು “ಆಶಿಶ್” ಎಂದು ಸ್ಪಷ್ಟವಾಗಿ ಹೆಸರಿಸಲಾಗಿದೆ.

ಆರೋಪಿ  ಆಗಸ್ಟ್ 29 ರಂದು ಆಶಿಶ್ ಎಂಬ ಹೆಸರಿನಲ್ಲಿ ಹೋಟೆಲ್ ಅನ್ನು ಬುಕ್ ಮಾಡಿರುವುದು ಕಂಡುಬಂದಿದೆ. ಸಂತ್ರಸ್ತೆ ಕೊನೆಯದಾಗಿ ಆಗಸ್ಟ್ 30 ರಂದು ಕುಟುಂಬದೊಂದಿಗೆ ಮಾತನಾಡಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರ ನಡುವೆ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ನಲ್ಲಿ ಎಲ್ಲಿಯೂ ಕೋಮು ಆಯಾಮವಿದೆ ಎಂದು ಉಲ್ಲೇಖಿಸಲಾಗಿಲ್ಲ ಎಂದು Alt News ಎಫ್ಐಆರ್ ನ ವಿವರಗಳನ್ನು ಹಂಚಿಕೊಂಡಿದೆ.

ಸಂತ್ರಸ್ತೆಯ ತಂದೆ ರವೀಶ್ ಕುಮಾರ್ ಹೆಚ್. ಟಿ (53) ಅವರೊಂದಿಗೂ ಮಾತನಾಡಿದ್ದು, ಅವರು ಆರೋಪಿ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ದೃಢಪಡಿಸಿದ್ದಾರೆ ಎಂದು Alt News ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೈಸೂರಿನಲ್ಲಿ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಕೊಲೆ ಆರೋಪಿಯ ಹೆಸರು ಆಶಿಕ್ ಎಂದು ತಪ್ಪಾಗಿ ವರದಿ ಮಾಡಿರುವ ಆಧಾರದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ವರದಿಗೆ ಕೋಮುಬಣ್ಣ ನೀಡಲಾಗಿದೆ. ಪೊಲೀಸರು ಕೋಮು ಆಯಾಮವನ್ನು ಅಲ್ಲಗೆಳೆದಿದ್ದು, ಆರೋಪಿಯ ಹೆಸರು ಆಶಿಶ್ ಎಂದು ಬಹಿರಂಗವಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ (ಹಿಂದೂ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣವನ್ನು ಎಡಿಟ್ ಮಾಡಿ ಹಂಚಿಕೊಂಡ BJP


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights