ಫ್ಯಾಕ್ಟ್‌ಚೆಕ್: ಇರಾನ್‌ನಲ್ಲಿ ಮಗಳ ಶವದ ಮುಂದೆ ನೃತ್ಯ ಮಾಡುವ ತಂದೆ! ವಾಸ್ತವವೇನು ?
ಇರಾನ್ ನೆಲದಲ್ಲಿ ಹಿಜಾಬ್ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದರ ಪರಿಣಾಮ, ಇದುವರೆಗೂ 31ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದಲ್ಲಿ ಯುವತಿಯೊಬ್ಬಳ ಸಾವು ಎಲ್ಲರ ಮನಕಲಕಿರುವುದಂತೂ ಸತ್ಯ.
ಇರಾನ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, 22 ವರ್ಷದ ಯುವತಿಯ ಹತ್ಯೆಯ ನಂತರ ನಡೆದ ಶವ ಮೆರವಣಿಗೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ನೃತ್ಯ ಮಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ನೃತ್ಯ ಮಾಡುತ್ತಿರುವವರು ಬೇರೆ ಯಾರೋ ಅಲ್ಲ ಸ್ವತಃ ಸಾವಿಗೀಡಾದ ಯುವತಿಯ ತಂದೆ ಎಂದು ಪ್ರತಿಪಾದಿಸಲಾಗಿದೆ.
Saddest thing I have ever seen in my
life: a father who promised his
daughter he will dance at her wedding
now dancing at her grave after she was killed by Iranian regime in the protests against killing people for forced hijab. #Feminism #Mahsa_Amini #IranRevolution
Be our VOICE pic.twitter.com/iWFzcqylxM— Asal diyan (@asal_diyan) September 28, 2022
ತಮ್ಮ ಮಗಳ ಮದುವೆಯಲ್ಲಿ ನೃತ್ಯ ಮಾಡುವ ಭರವಸೆ ನೀಡಿದ್ದರು, ಆದರೆ ಆಕೆ ಈ ರೀತಿ ಹತ್ಯೆಯಾದ ಹಿನ್ನಲೆಯಲ್ಲಿ ಆಕೆಯ ಕೊನೆ ಆಸೆಯನ್ನು ಈಡೇರಿಸಲಾಗಗಲಿಲ್ಲ ಎಂಬ ದುಖಃದಲ್ಲಿ ಮಗಳ ಶವದ ಮುಂದೆ ನೃತ್ಯ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ 29 ಸೆಪ್ಟೆಂಬರ್ 2022 ರಂದು ಅಜರ್‌ಬೈಜಾನಿ ಪತ್ರಕರ್ತ “ಕಾವಿಡ್ ಅಗಾ” ಅವರ ಟ್ವೀಟ್ ಲಭ್ಯವಾಗಿದೆ. ಈ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರಿಗೆ ಪ್ರತಿಕ್ರಯಿಸಿದ್ದು, “ಈ ವ್ಯಕ್ತಿ ನನಗೆ ವೈಯಕ್ತಿಕವಾಗಿ ತಿಳಿದಿರುವ ನಟ. ಅವನ ಹೆಸರು ಗುರ್ಬನ್ ಇಸ್ಮಾಯಿಲೋವ್ ಮತ್ತು ಈ ದೃಶ್ಯವು 4 ವರ್ಷಗಳ ಹಿಂದೆ ಪ್ರಸಾರವಾದ ಪ್ರಸಿದ್ಧ ಟಿವಿ ನಾಟಕ ಅಟಾ ಒಕಾಗ್ (ಅಪ್ಪನ ಗೂಡು) ನಿಂದ ಬಂದಿದೆ ಎಂದು ತಿಳಿಸಿದ್ದಾರೆ. (18:40 ಕ್ಕೆ ಪ್ರಾರಂಭವಾಗುತ್ತದೆ)
This man is an actor I personally know. His name is Gurban Ismayilov and this scene is from a famous TV drama Ata Ocağı (Hearth of Father) aired 4 years ago. https://t.co/SJP6tNZa0o (starts at 18:40) https://t.co/7gUDDIaxqr
— Cavid Ağa (@cavidaga) September 29, 2022
Give this man an Oscar already. He was popular in Azerbaijan and now rose to fame in the world too! pic.twitter.com/cx8tDA5CLc
— Cavid Ağa (@cavidaga) September 29, 2022
ಇದರಿಂದ ಸುಳಿವು ಪಡೆದು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಸರ್ಚ್ ಮಾಡಿದಾಗ ಅದು ನಿಜವೆಂದು ಕಂಡುಬಂದಿದೆ. ಈ ವೀಡಿಯೊವನ್ನು 9 ಜನವರಿ 2018 ರಂದು “Ata Ocağı (78-ci seriya)” ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ, ಇದು “ತಂದೆಯ ಗೂಡು (ಸಂಚಿಕೆ 78)” ಎಂದು ಅನುವಾದಿಸುತ್ತದೆ. 19:05 ನಿಮಿಷಗಳಿಂದ, ಗುರ್ಬನ್ ಇಸ್ಮಾಯಿಲೋವ್ ನಿರ್ವಹಿಸಿದ ಪಾತ್ರವನ್ನು ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದ ವಿವರಣೆಯು ಅದನ್ನು ದೂರದರ್ಶನ ಸರಣಿ ಎಂದು ಖಚಿತಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೂರದರ್ಶನ ಸರಣಿಯ ವೀಡಿಯೊವನ್ನು ಇರಾನಿನ ತಂದೆ ತನ್ನ ಮಗಳ ಶವದ ಮುಂದೆ ನೃತ್ಯ ಮಾಡುವ ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಈ ವೀಡಿಯೊವು 2018 ರಲ್ಲಿ ಪ್ರಸಾರವಾದ ಅಜೆರ್ಬೈಜಾನಿ ದೂರದರ್ಶನ ಸರಣಿಯ ‘ಅಟಾ ಒಕಾಸಿ’ 78 ನೇ ಸಂಚಿಕೆಯಿಂದ ಬಂದಿದೆ . ಇದು ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಯಾವುದೇ ನೈಜ ಘಟನೆಯನ್ನು ತೋರಿಸುವುದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗಾಂಧಿಯ ಈ ಫೋಟೋಗಳ ಬಗ್ಗೆ ನಿಮಗೆಷ್ಟು ಗೊತ್ತು ?

