ಫ್ಯಾಕ್ಟ್ಚೆಕ್: ಡ್ಯಾನ್ಸರ್ ಉಡುಪಿನಲ್ಲಿರುವ ಫೋಟೊ ಸ್ಮೃತಿ ಇರಾನಿಯವರದ್ದಲ್ಲ, ಅದು ಎಡಿಟೆಡ್ ಫೋಟೋ
ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬೆಲ್ಲಿ ಡ್ಯಾನ್ಸರ್ ಉಡುಪಿನಲ್ಲಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಠಾಣ್ ಚಿತ್ರದ ಬಾಯ್ಕಾಟ್ ಘೋಷಣೆಯ ಬೆನ್ನಲ್ಲೆ ಸ್ಮೃತಿ ಇರಾನಿ ಅವರ ಫೋಟೋ ಎಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ. ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ಪರಿ ಮತ್ತು ಆಕೆಯ ಬಿಕಿನಿ ಬಣ್ಣ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಒಂದೆಡೆ ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಚಿತ್ರದ ದೃಶ್ಯಗಳು ಮತ್ತು ಬಟ್ಟೆಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರೆ, ಮತ್ತೊಂದೆಡೆ ಜನರು ಪೋಸ್ಟರ್ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನ ಫೋಟೋದಲ್ಲಿರುವ ಸ್ಮೃತಿ ಇರಾನಿಯವರ ಚಿತ್ರ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ಅನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ, ಟ್ರಿಪ್ ಅಡ್ವೈಸರ್ ಎಂಬ ವೆಬ್ಸೈಟ್ನಲ್ಲಿ ಫೋಟೋದ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಈ ಫೋಟೋ ಹೋಟೆಲ್ ಕ್ಲಬ್ ಎಕ್ಸೆಲ್ಸಿಯರ್ನ ಫೋಟೋ ಗ್ಯಾಲರಿಯಲ್ಲಿದೆ. ಆ ಫೋಟೋವನ್ನು ನೀವು ಇಲ್ಲಿ ನೋಡಬಹುದು.

“ಬೆಲ್ಲಿ ಡ್ಯಾನ್ಸರ್ ಆನ್ ದಿ ಟರ್ಕಿಶ್ BBQ ನೈಟ್” ಎಂದು ಫೋಟೋ ಅಡಿಯಲ್ಲಿ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕಲರ್ನಲ್ಲಿರುವ ಈ ಫೋಟೋವನ್ನು ಬೆಲ್ಲಿ ಡ್ಯಾನ್ಸರ್ನ ಮುಖದ ಬದಲು ಸ್ಮೃತಿ ಇರಾನಿ ಅವರ ಮುಖದೊಂದಿಗೆ ಎಡಿಟ್ ಮಾಡಲಾಗಿದೆ ಮತ್ತು ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಬದಲಾಯಿಸಲಾಗಿದೆ. ವಾಸ್ತವವಾಗಿ ಮೂಲ ಫೋಟೋದಲ್ಲಿರುವುದು ಸ್ಮೃತಿ ಇರಾನಿ ಅಲ್ಲ. ಬೆಲ್ಲಿ ನೃತ್ಯ ಕಲಾವಿದೆಯ ಫೋಟೋವನ್ನು ಎಡಿಟ್ ಮಾಡಿ ಸ್ಮೃತಿ ಇರಾನಿ ಮುಖವನ್ನು ಇರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋವನ್ನು ಎಡಿಟ್ ಮಾಡಲಾಗಿದೆ. ಅವರ ಮೂಲ ಫೋಟೋ ಹೋಟೆಲ್ ಕ್ಲಬ್ ಎಕ್ಸೆಲ್ಸಿಯರ್ನ ಟ್ರಿಪ್ ಅಡ್ವೈಸರ್ ವೆಬ್ಸೈಟ್ನ ಆಲ್ಬಮ್ನಲ್ಲಿದೆ. ಮೂಲ ಫೋಟೋದಲ್ಲಿರುವ ಬೆಲ್ಲೆ ನೃತ್ಯ ಕಲಾವಿದೆಯ ಉಡುಪಿನ ಬಣ್ಣ ಹಸಿರು ಬಣ್ಣದಲ್ಲಿದೆ ಆದರೆ ಎಡಿಟ್ ಮಾಡಿದ ಚಿತ್ರಕ್ಕೆ ಸ್ಮೃತಿ ಇರಾನಿ ಫೋಟೋ ಸೇರಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಹೊಸ ವರ್ಷದಿಂದ ಮತ್ತೆ ₹1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವುದು ನಿಜವೇ?

