ಫ್ಯಾಕ್ಟ್‌ಚೆಕ್: ಅರ್ಜೆಂಟೀನಾ ದೇಶದ ಕರೆನ್ಸಿಯಲ್ಲಿ ಮೆಸ್ಸಿ ಚಿತ್ರ ಹಾಕಲಾಗಿದೆಯೇ?

ಅರ್ಜೆಂಟೀನಾ ಸರ್ಕಾರ ತನ್ನ ಹೊಸ ಕರೆನ್ಸಿ ನೋಟುಗಳಲ್ಲಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಚಿತ್ರವನ್ನು ಮುದ್ರಿಸಲು ಹೊರಟಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಒಂದು ಕಡೆ ಮೆಸ್ಸಿಯ ಮುಖವಿರುವ 1000 ಅರ್ಜೆಂಟೀನಾದ ಪೆಸೊ ನೋಟಿನ ಫೋಟೋಗಳು ಮತ್ತು ಇನ್ನೊಂದು ಬದಿಯಲ್ಲಿ ಅರ್ಜೆಂಟೀನಾ ರಾಷ್ಟ್ರೀಯ ಫುಟ್‌ಬಾಲ್ ತಂಡವು FIFA ವಿಶ್ವಕಪ್ ಟ್ರೋಫಿಯನ್ನು ಎತ್ತುತ್ತಿರುವ ಫೋಟೋದೊಂದಿಗೆ ಹಂಚಿಕೊಳ್ಳಲಾಗಿದೆ.

ಅದೇ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಕೂಡ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಅರ್ಜೆಂಟೀನಾ ತನ್ನ ಹೊಸ ಕರೆನ್ಸಿ ನೋಟುಗಳಿಗೆ ಲಿಯೊನೆಲ್ ಮೆಸ್ಸಿ ಅವರ ಚಿತ್ರವನ್ನು ಹಾಕಲಾಗಿದೆ ಎಂದು ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಅರ್ಜೆಂಟೀನಾ ಹೊಸ ಕರೆನ್ಸಿ ನೋಟುಗಳನ್ನು ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಮುಖದೊಂದಿಗೆ ಮುದ್ರಿಸಲು ಹೊರಟಿದೆ ಎಂದು ವೈರಲ್ ಆಗಿರುವ ಪೋಸ್ಟ್‌ಗಳು ಸುಳ್ಳು ಎಂದು  BOOM ಕಂಡುಹಿಡಿದಿದೆ.

ಅರ್ಜೆಂಟೀನಾ ದೇಶದ ಕೇಂದ್ರ ಬ್ಯಾಂಕ್, ಬ್ಯಾಂಕೊ ಸೆಂಟ್ರಲ್ ಡಿ ಲಾ ರಿಪಬ್ಲಿಕಾ ಅರ್ಜೆಂಟೀನಾ (BCRA) ನ ವಕ್ತಾರರೊಂದಿಗೆ ಮಾತನಾಡಿದೆ, ಅವರು ಮೆಸ್ಸಿಯ ಗೌರವಾರ್ಥವಾಗಿ ಕರೆನ್ಸಿ ನೋಟುಗಳನ್ನು ಮುದ್ರಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಫೈನಾನ್ಸಿರೋ ಅವರ ವರದಿಯ ಪ್ರಕಾರ “ಅರ್ಜೆಂಟೀನಾದ ಪ್ರಶಸ್ತಿಗಾಗಿ ನಾವು ಮೆಸ್ಸಿಯ ಮುಖದೊಂದಿಗೆ ಸಾವಿರ-ಪೆಸೊ ಬಿಲ್ ಅನ್ನು ಹೊಂದಿದ್ದೇವೆಯೇ?” ಎಂಬ ಶೀರ್ಷಿಕೆಯನ್ನು ಹೊಂದಿದೆ. ಇದು FIFA ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಗೆಲುವಿನ ಬಗ್ಗೆ ಮಾತನಾಡುತ್ತದೆ ಮತ್ತು 1978 ರಲ್ಲಿ ತನ್ನ ಮೊದಲ ವಿಶ್ವಕಪ್ ಗೆದ್ದ ನಂತರ ದೇಶವು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಿದೆ ಎಂದು ಉಲ್ಲೇಖಿಸುತ್ತದೆ.

ಅರ್ಜೆಂಟೀನಾದ ಸೆಂಟ್ರಲ್ ಬ್ಯಾಂಕ್‌ನ ಸದಸ್ಯರು ಸಾವಿರ-ಪೆಸೊ ಬಿಲ್‌ನಲ್ಲಿ ಲಿಯೋನೆಲ್ ಮೆಸ್ಸಿಯ ಮುಖವನ್ನು ಹೊಂದಬಹುದು ಎಂದು “ತಮಾಷೆಗೆ ಪ್ರಸ್ತಾಪಿಸಿದ್ದಾರೆ” ಎಂದು ಹೇಳಲಾಗಿದೆ. “ಅಧಿಕಾರಿಗಳಿಗೆ ಅಂಕಿಗಳು ’10’ ರೊಂದಿಗೆ ಪ್ರಾರಂಭವಾಗುವುದು ಮುಖ್ಯವಾಗಿದೆ”. ಯಾಕೆಂದರೆ ಮೆಸ್ಸಿ ಸಂಖ್ಯೆ 10 ಎಂದು ಹೇಳಲಾಗಿದೆ.

Screenshot of a translation of the story published by El Financiero

ಚರ್ಚೆಯಲ್ಲಿ, ವಿಶ್ವಕಪ್ ಮಾರ್ಕ್‌ನಲ್ಲಿ ಮೆಸ್ಸಿಯ ಮುಖವನ್ನು ಬಳಸಬೇಕೆ ಎಂದು ಪರಿಗಣಿಸಲಾಗಿದೆ. ಗುಂಪು ‘ತಮಾಷೆಗೆ’ ಮೆಸ್ಸಿಯನ್ನು ನೋಟುಗಳ ಮೇಲೆ ಇರಿಸುವ ಬಗ್ಗೆ ಚರ್ಚಿಸಿತು. ಸುದ್ದಿ ವರದಿಯ ಪರಿಣಾಮವಾಗಿ 1,000-ಪೆಸೊ ಬಿಲ್‌ನಲ್ಲಿ ಮೆಸ್ಸಿಯ ಚಿತ್ರಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗಿವೆ.

BCRA ನ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದು,  ಅರ್ಜೆಂಟೀನಾದ ಕೊನೆಯ 1000 ಪೆಸೊಸ್ ಬ್ಯಾಂಕ್‌ನೋಟ್ ಅನ್ನು ಡಿಸೆಂಬರ್ 2017 ರಲ್ಲಿ ಮುದ್ರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ವೆಬ್‌ಸೈಟ್ ಪ್ರಕಾರ, ಅರ್ಜೆಂಟೀನಾದ ರಾಷ್ಟ್ರೀಯ ಪಕ್ಷಿಯಾದ ರೂಫಸ್ ಹಾರ್ನೆರೊವನ್ನು ನೋಟಿನ ಚಿತ್ರವಾಗಿ ಬಳಕೆಯಾಗಿದೆ. ಮೆಸ್ಸಿ ಅವರ ಚಿತ್ರವನ್ನು 1000 ಪೆಸೊಸ್ ನಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ತಮಾಷೆಗೆ ನಡೆದ ಚರ್ಚೆಯಿಂದ ಬಂದಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಅರ್ಜೆಂಟೀನಾ ಸರ್ಕಾರ ತನ್ನ ಹೊಸ ಕರೆನ್ಸಿ ನೋಟುಗಳಲ್ಲಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಚಿತ್ರವನ್ನು ಮುದ್ರಿಸಲು ಹೊರಟಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿದರು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights