ಫ್ಯಾಕ್ಟ್‌ಚೆಕ್: ಮುಸ್ಲಿಮರು ರಸ್ತೆಯಲ್ಲೆ ನಮಾಜ್ ಮಾಡಲು ಮುಂದಾಗಿದ್ದು ನಿಜವೇ?

ಟ್ರಾಫಿಕ್ ರಸ್ತೆ ಮಧ್ಯದಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗಳನ್ನು ಸಾರ್ವಜನಿಕರು ಎಳೆದು ರಸ್ತೆ ಬದಿಗೆ ಸರಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗುತ್ತಿದೆ. ಫ್ರಾನ್ಸ್‌ನಲ್ಲಿ ರಸ್ತೆಯ ಮಧ್ಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮುಸ್ಲಿಮರನ್ನು ಬಲವಂತವಾಗಿ ಎಳೆದು ಹಾಕುತ್ತಿರುವ ವಿಡಿಯೋ ಎಂದು ಪ್ರತಿಪದಿಸಿ ಮೇಘಾಲಯದ ಮಾಜಿ ಗವರ್ನರ್ ತಥಾಗತ ರಾಯ್ ಅವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

Protesters

ಬಲಪಂಥೀಯ ಪ್ರತಿಪಾದಕಿ ಮಧು ಪೂರ್ಣಿಮಾ ಕಿಶ್ವರ್ ಕೂಡ ಅದೇ ವೀಡಿಯೊವನ್ನು ಟ್ವೀಟ್ ಮಾಡಿದ್ದು “ಫ್ರಾನ್ಸ್ ಜನರು ತಮ್ಮ ಕಾರುಗಳಿಂದ ಇಳಿದು ನಮಾಜಿಗಳು ಆಕ್ರಮಿಸಿಕೊಂಡಿರುವ ರಸ್ತೆಗಳನ್ನು ತೆರವುಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಸರ್ಕಾರಗಳು ಹೇಡಿಗಳಾಗಿದ್ದು, ಅವರು ಮತ ಬ್ಯಾಂಕ್‌ಗಳ ಒತ್ತೆಯಾಳುಗಳಾಗಿದ್ದಾರೆ. ಕೇವಲ ನಾಗರಿಕರ ಕ್ರಮವು ಮುಝ್‌ಬೀಸ್‌ನ ಮಾರಣಾಂತಿಕ ಹರಡುವಿಕೆಯಿಂದ ನಮ್ಮನ್ನು ರಕ್ಷಿಸುತ್ತದೆ. ಅಂತಹ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆ ಮಧ್ಯದಲ್ಲಿ ಕುಳಿತಿರುವ ಜನರನ್ನು ರಸ್ತೆಬದಿಗೆ ಎಳೆದು ಹಾಕುತ್ತಿರುವ ವಿಡಿಯೋದ ವಾಸ್ತವವನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಪ್ಯಾರಿಸ್‌ನ ಲೆವಾಲ್ಲೋಯಿಸ್-ಪೆರೆಟ್‌ನಲ್ಲಿರುವ ಲೆವಾಲ್ಲೋಯಿಸ್ ಸೇತುವೆಯ ಬಳಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಫ್ರಾನ್ಸ್‌ ಸರ್ಕಾರದ ವಿರುದ್ದ ಟ್ರಾಫಿಕ್ ರಸ್ತೆಯ ನಡುವಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ತೆರೆವುಗೊಳಿಸಲು ಜನರನ್ನು ಎಳೆದೊಯ್ಯುತ್ತಿದ್ದಾರೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Furious driver

ಕಾರ್ಯಕರ್ತರ ಗುಂಪನ್ನು “ಡೆರ್ನಿಯರ್ ರೆನೋವೇಶನ್”  ಎಂದು ಗುರುತಿಸಲಾಗಿದೆ ಮತ್ತು ಅವರು ಪ್ಯಾರಿಸ್‌ನಲ್ಲಿನ ಕಟ್ಟಡಗಳ ಉಷ್ಣ ನವೀಕರಣಕ್ಕೆ ಒತ್ತಾಯಿಸುತ್ತಿದ್ದಾರೆಂದು ವರದಿಯಾಗಿದೆ. ಪ್ರತಿಭಟನಾಕಾರರು ಸಂಚಾರ ಸ್ಥಗಿತಗೊಳಿಸಿ ಪ್ರಯಾಣಿಕರ ಆಕ್ರೋಶಕ್ಕೆ ಕಾರಣರಾದರು.

ಡೆರ್ನಿಯರ್ ರೆನೋವೇಶನ್‌ನ ಸದಸ್ಯರು ಪ್ರತಿಭಟನೆ ನಡೆಸುತ್ತಿರುವಾಗ ಹಲವಾರು ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸುವ ಕುರಿತು ಫ್ರಾನ್ಸ್‌ನಿಂದ ಹಲವಾರು ಮಾಧ್ಯಮ ವರದಿಗಳನ್ನು ಇಲ್ಲಿ ನೋಡಬಹುದು. ಉತ್ತಮ ಕಟ್ಟಡ ನಿರೋಧನವನ್ನು ಖಚಿತಪಡಿಸಿಕೊಳ್ಳಲು ಗುಂಪು ಫ್ರೆಂಚ್ ಸರ್ಕಾರವನ್ನು ಒತ್ತಾಯಿಸಿದೆ. ಇದು ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಫ್ರಾನ್ಸ್‌ನ ಮುಸ್ಲಿಮರು ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹವಾಮಾನ ವೈಪರಿತ್ಯವನ್ನು ತಡೆಯಲು ಫ್ರಾನ್ಸ್‌ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಪಾದಿಸಿ ನಡೆದ ಪ್ರತಿಭಟನೆಯನ್ನು, ಮುಸ್ಲಿಮರು ಕಾನೂನು ಉಲ್ಲಂಘಿಸಿ ರಸ್ತೆ ಮಧ್ಯದಲ್ಲಿ ನಮಾಜ್‌ ಮಾಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿದರು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights