ಫ್ಯಾಕ್ಟ್‌ಚೆಕ್: ವ್ಯಾನ್‌ಅನ್ನು ಸುತ್ತುವರೆದ ಬೃಹತ್ ಗಾತ್ರದ ಹಾವು ಎಂಬ ವೈರಲ್ ವಿಡಿಯೋದ ವಾಸ್ತವವೇನು?

ಬೃಹತ್ ಗಾತ್ರದ ಆನಕೊಂಡಾವೊಂದು ವ್ಯಾನ್‌ಅನ್ನು ಸುತ್ತುವರೆದಿದ್ದು, ಆ ಹಾವನ್ನು ಹೋಡಿಸಲು ಹುಡುಗನೊಬ್ಬ ಪ್ರಯತ್ನಿಸುತ್ತಿದ್ದಾನೆ ಎಂದು When man fights nature! ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ನ್ಯೂಸ್‌ 18 ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬೃಹತ್ ಗಾತ್ರದ ಹಾವು ವ್ಯಾನ್‌ಅನ್ನು ಸುತ್ತಿಕೊಂಡ ವಿಡಿಯೋ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ನ್ಯೂಸ್‌ 18 ಸುದ್ದಿ ವಾಹಿನಿಯ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಬೃಹತ್ ಗಾತ್ರದ ಹಾವಿನ ವಿಡಿಯೋದ ವಾಸ್ತವವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,  ಚೀನಾದ ‘ಝೊಂಗ್ನಾನ್ ಬೈಕಾವೊ ಗಾರ್ಡನ್’ ಎಂಬ ಅಮ್ಯೂಸ್‌ಮೆಂಟ್ ಝೂ ಪಾರ್ಕ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು  ವಿನ್ಯಾಸಗೊಳಿಸಲಾದ ಮಾನವ ನಿರ್ಮಿತ ಕಲಾಕೃತಿ ಎಂಬದಾಗಿ ತಿಳಿದು ಬಂದಿದೆ. ಹಾಗಾಗಿ ವೈರಲ್ ದೃಶ್ಯಗಳಲ್ಲಿ ಕಂಡುಬರುವುದು ನಿಜವಾದ ಹಾವಲ್ಲ.

ಉದ್ಯಾನವನದ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ ಈ ಹಿಂದೆ ಈ ಹಾವಿನ ಕಲಾಕೃತಿಯ ದೃಶ್ಯಗಳನ್ನು ಇತರ ಸಣ್ಣ ಆಟಿಕೆ ಹಾವುಗಳೊಂದಿಗೆ ಹಂಚಿಕೊಂಡಿತ್ತು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಅಲ್ಲದೆ, ಹಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಈ ಕಲಾಕೃತಿಗಳ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಚೀನಾದ ಮೃಗಾಲಯದಲ್ಲಿನ ಹಾವಿನ ಕಲಾ ಕೃತಿಯ ದೃಶ್ಯಗಳನ್ನು ವ್ಯಾನ್‌ಅನ್ನು ದೈತ್ಯ ಹಾವೊಂದು ಸುತ್ತಿಕೊಂಡಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಚೀನಾದ ‘ಝೊಂಗ್ನಾನ್ ಬೈಕಾವೊ ಗಾರ್ಡನ್’ ಎಂಬ ಅಮ್ಯೂಸ್‌ಮೆಂಟ್ ಝೂ ಪಾರ್ಕ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು  ವಿನ್ಯಾಸಗೊಳಿಸಲಾದ ಮಾನವ ನಿರ್ಮಿತ ಕಲಾಕೃತಿ ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎಂದು ಡಿಜಿಟಲ್ ತಂತ್ರಜ್ಞಾನದಿಂದ ರಚಿಸಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights