ಫ್ಯಾಕ್ಟ್‌ಚೆಕ್: ಕಬ್ಬಿಣ ಮತ್ತು ಇಟ್ಟಿಗೆ ಕದಿಯಲು ಪಾಕ್‌ನ ಜನರು ಮಸೀದಿಯನ್ನು ಒಡೆದರೆ?

ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಪಾಕಿಸ್ತಾನದ ಜನರು ಕರಾಚಿಯಲ್ಲಿ ಮಸೀದಿಯನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಸೀದಿಯಂತೆ ಕಾಣುವ ಕಟ್ಟಡದ ಮಿನಾರ್‌ಗಳನ್ನು ಕೆಲ ವ್ಯಕ್ತಿಗಳು ಹೊಡೆತಯತ್ತಿರುವ ವೀಡಿಯೊ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿಯ ಜನರು ಇಂತಹ ಕೃತ್ಯಗಳಿಗೆ ಇಳಿದಿದ್ದು, ಕಬ್ಬಿಣಗಳನ್ನು ಹಣಕ್ಕಾಗಿ ಮಾರಾಟ ಮಾಡಬಹುದೆಂದು ಈ ರೀತಿ ದಾಳಿ ಮಡುತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಪ್ರತಿಪಾದನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವೀಡಿಯೊದ ಕುರಿತು ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸಹಾಯದಿಂದ ಕೀವರ್ಡ್ ಸರ್ಚ್ ನಡೆಸಿದಾಗ,  ವೈರಲ್ ವಿಡಿಯೊದಂತೆಯೇ ಅದೇ ದೃಶ್ಯಗಳನ್ನು ಒಳಗೊಂಡಿರುವ ಕೆಲವು ಇತ್ತೀಚಿನ ಸುದ್ದಿ ಲೇಖನಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಲಭ್ಯವಾದವು. ವರದಿಗಳ ಪ್ರಕಾರ ಪಾಕಿಸ್ತಾನಿ ಗುಂಪಿನ ತೆಹ್ರೀಕ್-ಎ-ಲಬ್ಬೈಕ್‌ನ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಮಾಧ್ಯಯಮಗಳು ವರದಿ ಮಾಡಿವೆ.

ಮೂಲಭೂತವಾದಿಗಳು ಅಹ್ಮದಿಯಾ ಮಸೀದಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಕರಾಚಿಯಲ್ಲಿ ಕಳೆದ ಶುಕ್ರವಾರ ಮತಾಂಧರ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರ ಆಗಮನದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದು ದಾಳಿಕೋರರಿಗಾಗಿ ಶೋಧ ನಡೆಯುತ್ತಿದೆ. ಹಶು ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೆಲ್ಮೆಟ್ ಧರಿಸಿರುವ ಕೆಲವು ಅಪರಿಚಿತ ವ್ಯಕ್ತಿಗಳು ಮಸೀದಿಯ ಮಿನಾರ್‌ಗಳನ್ನು ಒಡೆಯುತ್ತಿರುವುದನ್ನು ಕಾಣಬಹುದು.

“ಕರಾಚಿಯ ಹಶು ಮಾರ್ಕೆಟ್‌ನ ಪ್ರಾರ್ಥನಾ ಸ್ಥಳದ ಮೇಲೆ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ” ಎಂದು ರೈಸ್ ನ್ಯೂಸ್ ಟ್ವೀಟ್ ಮಾಡಿದೆ. ಪಾಕಿಸ್ತಾನದ ಕರಾಚಿ ನಗರದಲ್ಲಿನ ಮಸೀದಿಯೊಂದರ ಮಿನಾರ್‌ಗಳನ್ನು ಕೆಲವರು ಬಹಿರಂಗವಾಗಿ ಒಡೆಯುತ್ತಿರುವ ಘಟನೆಯ ವಿಡಿಯೋ ಹೊರಬಿದ್ದಿದೆ. ಘಟನೆಯ ವೇಳೆ ಪೊಲೀಸ್ ಪಡೆ ಕೂಡ ಇತ್ತು ಎಂದು ಹೇಳಲಾಗುತ್ತಿದೆ. ಒಂದಾದ ಮೇಲೊಂದರಂತೆ ಪಾಕಿಸ್ತಾನದ ಮಸೀದಿಗಳ ಮೇಲೆ ದಾಳಿ ನಡೆಯುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ.

‘ತಹರಿಕ-ಎ-ಲಬ್ಬೈಕ ಪಾಕಿಸ್ತಾನ’ ಎಂಬ ಸಂಘಟನೆಯು ಅಹಮದಿಯಾ ಮುಸಲ್ಮಾನರ ಒಂದು ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ಕಳೆದ ಕೆಲವು ದಿನದಲ್ಲಿ ಈ ರೀತಿಯ ಇದು ಐದನೇ ಘಟನೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಅಹಮದಿಯಾ ಮುಸಲ್ಮಾನರನ್ನು ‘ಮುಸಲ್ಮಾನ’ರೆಂದು ಪರಿಗಣಿಸುವುದಿಲ್ಲ. ಅವರನ್ನು ಅಲ್ಪಸಂಖ್ಯಾತರ ರೀತಿಯಲ್ಲಿ ನೋಡುತ್ತಾರೆ. ಕಳೆದ ವರ್ಷ ‘ತಹರಿಕ್-ಎ-ಲಬ್ಬೈ-ಕ ಪಾಕಿಸ್ತಾನ’ದ ಮೌಲ್ವಿ (ಇಸ್ಲಾಮಿನ ಧಾರ್ಮಿಕ ಮುಖಂಡ) ಮಹಮ್ಮದ್ ನಹಿಮ್ ಚಟ್ಟಾ ಇವನು ಮಹಮ್ಮದಿಯಾ ಮುಸಲ್ಮಾನ ಗರ್ಭಿಣಿ ಮಹಿಳೆಯ ಮೇಲೆ ದಾಳಿ ಮಾಡಲು ಕರೆ ನೀಡಿದ್ದನು. ‘ಹೀಗೆ ಮಾಡಿದರೆ ಅಹಮದಿಯಾ ಮುಸಲ್ಮಾನರು ಹುಟ್ಟುವುದಿಲ್ಲ’ ಎಂದು ಮೌಲ್ವಿ ಹೇಳುತ್ತಿದ್ದನು.

ಒಟ್ಟಾರೆಯಾಗಿ ಹೇಳುವುದಾದರೆ, ‘ತಹರಿಕ-ಎ-ಲಬ್ಬೈಕ ಪಾಕಿಸ್ತಾನ’ ಎಂಬ ಸಂಘಟನೆಯ ಕೆಲವು ಶಂಕಿತ ಸದಸ್ಯರು ಕರಾಚಿಯ ಸದ್ದಾರ್‌ನಲ್ಲಿರುವ ಅಹ್ಮದಿ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆಯನ್ನು, ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿಯ ಜನರು ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ  ಕರಾಚಿಯಲ್ಲಿ ಮಸೀದಿಯನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಎಂದು ತಪ್ಪಾಗಿ ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇದು 2023ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights