ಫ್ಯಾಕ್ಟ್‌ಚೆಕ್: Basket ball ರೆಫರಿಯನ್ನೆ ಹೂಪ್‌ನೊಳಕ್ಕೆ ಎತ್ತಿ ಎಸೆದ್ರಾ ಮಹಿಳಾ ಆಟಗಾರ್ತಿ? ವೈರಲ್ ದೃಶ್ಯಗಳ ಹಿಂದಿನ ವಾಸ್ತವವೇನು?

ರಷ್ಯಾ ಮತ್ತು ಫ್ರಾನ್ಸ್‌ನ ಮಹಿಳಾ ಬಾಸ್ಕೆಟ್‌ಬಾಲ್ ತಂಡಗಳ ನಡುವಿನ ಈ ಪಂದ್ಯದ ವೇಳೆ, ರೆಫರಿ ತಪ್ಪಾದ ಪೆನಾಲ್ಟಿಯನ್ನು ನೀಡಿದ್ದಾರೆ, ರೆಫರಿ ನೀಡಿದ ತಪ್ಪು ಪೆನಾಲ್ಟಿ ರಷ್ಯಾದ ಮಹಿಳಾ ತಂಡದ ಹೈ ಸೆಂಟರ್ ಫಾರ್ವರ್ಡ್ ಆಟಗಾರ್ತಿಯನ್ನು ಕೆರಳಿಸಿದೆ. ಕೋಪದ ಭರದಲ್ಲಿ,  ರೆಫರಿಯನ್ನು ಎತ್ತಿ ಬಾಲ್ ಎಸೆಯುವ (ರಿಂಗ್) ಹೂಪ್‌ನೊಳಕ್ಕೆ ಎತ್ತಿ ಎಸೆದಿದ್ದಾಳೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮಹಿಳಾ ಬ್ಯಾಸ್ಕೆಟ್‌ಬಾಲ್ ಪಂದ್ಯವನ್ನು ತೋರಿಸುವ ವೀಡಿಯೊ ವೈರಲ್ ಆಗಿದ್ದು, ಆಟಗಾರರೊಬ್ಬರು ರೆಫರಿಯನ್ನು ಎತ್ತಿ ಬಾಸ್ಕೆಟ್‌ಬಾಲ್ ಹೂಪ್ಸ್‌ನಲ್ಲಿ ಎಸೆದಿದ್ದಾರೆ ಎಂದು ಟ್ವಿಟರ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ರಷ್ಯಾ ಮತ್ತು ಫ್ರಾನ್ಸ್ ನಡುವೆ ನಡೆದ ಪಂದ್ಯದಲ್ಲಿ ರೆಫರಿ ನೀಡಿದ ತಪ್ಪು ಪೆನಾಲ್ಟಿ ರಷ್ಯಾದ ತಂಡವನ್ನು ಕೆರಳಿಸಿತು, ತಂಡದ ಆಟಗಾರರೊಬ್ಬರು ತಕ್ಷಣ ರೆಫರಿಯನ್ನು ಎತ್ತಿ ಬುಟ್ಟಿಗೆ ಎಸೆದರು ಎಂದು ಪೋಸ್ಟ್‌ಗಳಲ್ಲಿ ಹೇಳಲಾಗಿದ್ದು ಈ ಕ್ಲಿಪ್  ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಕೆಲವು ಅದ್ಭುತ ಹೊಡೆತಗಳಲ್ಲಿ ಒಂದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಡಿದ್ದಾರೆ.

ಹಾಗಿದ್ದರೆ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳು ನಿಜವಾಗಿಯೂ ನಡೆದಿದೆಯೇ ಅಥವಾ ಬೇರೆ ಏನಾದರೂ ಎಡಿಟ್ ಮಾಡಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ರೆಡ್ಡಿಟ್ ಪೇಜ್‌ನಲ್ಲಿ, ಮಹಿಳಾ ಬ್ಯಾಸ್ಕೆಟ್‌ಬಾಲ್ ರೆಫರಿಯನ್ನು ರಿಮ್‌ನಲ್ಲಿ ಎಸೆಯುವ ಕುರಿತು ಸಂಭಾಷಣೆಯ ಚಲನಚಿತ್ರವೆಂದು ಉಲ್ಲೇಖಿಸುವ The Eighth World Wonder ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ರೆಡ್ಡಿಟ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಉಲ್ಲೇಖಿಸಲಾದ ಚಲನಚಿತ್ರದ ಹೆಸರಿನೊಂದಿಗೆ ಸರ್ಚ್ ಮಾಡಿದಾಗ, ವೈರಲ್ ವೀಡಿಯೊವು ಚಲನಚಿತ್ರದಿಂದ ಕ್ಲಿಪ್ ಮಾಡಲಾದ ಭಾಗವಾಗಿದೆ ಎಂದು ದೃಢೀಕರಿಸುವ ಹಲವಾರು ಚಿತ್ರಗಳು ಮತ್ತು ವಿಡಿಯೊಗಳನ್ನು ಪಟ್ಟಿಮಾಡಲಾಗಿದೆ. ಪಟ್ಟಿ ಮಾಡಲಾದ ಚಿತ್ರಗಳಲ್ಲಿರುವ ಜನರು ವೈರಲ್ ವಿಡಿಯೊದಲ್ಲಿರುವ ವ್ಯಕ್ತಿಗಳೊಂದಿಗೆ ಹೊಂದುತ್ತದೆ.

ರಷ್ಯಾದ ಭಾಷೆಯಲ್ಲಿ ಶೀರ್ಷಿಕೆಯೊಂದಿಗೆ ಪೂರ್ಣ ಚಲನಚಿತ್ರವನ್ನು ಅಪ್‌ಲೋಡ್‌ ಮಾಡಿದ ಯುಟ್ಯೂಬ್ ಚಾನೆಲ್ ಕಂಡುಬಂದಿದೆ. ವಿಡಿಯೊದ 33:40 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಮಹಿಳಾ ಬಾಸ್ಕೆಟ್‌ಬಾಲ್ ಆಟಗಾರ್ತಿಯ ಪಾತ್ರದಲ್ಲಿರುವ ವ್ಯಕ್ತಿಯು ರೆಫರಿಯನ್ನು ಬ್ಯಾಸ್ಕೆಟ್‌ಬಾಲ್ ಹೂಪ್‌ಗಳಲ್ಲಿ ಎಸೆಯುವುದನ್ನು ಕಾಣಬಹುದು. ವೈರಲ್ ವಿಡಿಯೊ ಪೂರ್ಣ ಚಲನಚಿತ್ರದಿಂದ ಕ್ಲಿಪ್ ಮಾಡಲಾದ ಕೆಲವು ನಿಮಿಷದ ಭಾಗವನ್ನು ತೆಗೆದು ಎಡಿಟ್ ಮಾಡಿ ರೆಫರಿಯನ್ನು ಬಾಸ್ಕೆಟ್‌ನಲ್ಲಿ ಹಾಕುವಂತೆ ತೋರಿಸಲಾಗಿದೆ.

ರಷ್ಯಾದ ಚಲನಚಿತ್ರ ‘Восьмое чудо света’ ಕುರಿತು ಸರ್ಚ್ ಮಾಡಿದಾಗ, ಚಲನಚಿತ್ರದ ಇನ್ನೊಂದು ಹೆಸರನ್ನು ‘Vosmoe chudo sveta’ ಎಂದು ಉಲ್ಲೇಖಿಸಲಾಗಿದೆ ಮತ್ತು ಇದು IMBD ವೆಬ್‌ಸೈಟ್‌ನಲ್ಲಿ ಸೋವಿಯತ್ ಒಕ್ಕೂಟದಲ್ಲಿ ಫೆಬ್ರವರಿ 1, 1982 ರಂದು ಬಿಡುಗಡೆ ಮಾಡಲಾದ ದಿನಾಂಕವನ್ನು ಪ್ರದರ್ಶಿಸಲಾಗಿದೆ. ಈ ಚಲನಚಿತ್ರವನ್ನು ಹಾಸ್ಯ ಮತ್ತು ಕ್ರೀಡಾ ಪ್ರಕಾರದ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ರೆಫರಿಯನ್ನು ಬ್ಯಾಸ್ಕೆಟ್‌ಗೆ ಎಸೆಯುವ ದೃಶ್ಯವು ನೈಜ ಘಟನೆಯಲ್ಲ. ಸೋವಿಯತ್ ರಷ್ಯಾದ ವೋಸ್ಮೋ ಚುಡೋ ಸ್ವೇಟಾ/ಎಂಟನೇ ವರ್ಲ್ಡ್ ವಂಡರ್(1981) ಎಂಬ ಚಲನಚಿತ್ರದ ಭಾಗವಾಗಿದೆ . ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅತ್ಯಾಚಾರಕ್ಕೆ ಯತ್ನಿಸಿ ತನ್ನ ತುಟಿಯನ್ನೆ ಕಳೆದುಕೊಂಡ ಆರೋಪಿ ಮುಸ್ಲಿಮನಲ್ಲ, ಬದಲಿಗೆ ಹಿಂದೂ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights