ಫ್ಯಾಕ್ಟ್ಚೆಕ್ : A.R. ರೆಹಮಾನ್ ತನ್ನ ಪತ್ನಿ ಸೈರಾಗೆ ಹಿಂದಿಯಲ್ಲಿ ಬೇಡ ತಮಿಳಿನಲ್ಲಿ ಮಾತನಾಡು ಎಂದು ಹೇಳಿದ್ದು ಯಾಕೆ ಗೊತ್ತೆ?
ಇತ್ತೀಚೆಗೆ ಎ.ಆರ್.ರೆಹಮಾನ್ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ಪತ್ನಿ ಸೈರಾ ಬಾನು ಕೂಡ ಇದ್ದರು. ಎ.ಆರ್.ರೆಹಮಾನ್ ಅವರಿಗೆ “ಅತ್ಯುತ್ತಮ ಹಿನ್ನೆಲೆ ಗಾಯಕ 2022” ಎಂಬ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯನ್ನು ಪತ್ನಿ ಸೈರಾ ಬಾನು ಅವರಿಗೆ ಅರ್ಪಿಸಿದ ಅವರು, ಅವರು ತಮ್ಮ ದೊಡ್ಡ ಅಭಿಮಾನಿ ಆಗಿರುವುದರಿಂದ ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು.
‘Speak in Tamil, not Hindi’: AR Rahman tells wife not to speak in Hindi at an award functionhttps://t.co/kpP4H6ary8
— OpIndia.com (@OpIndia_com) April 27, 2023
ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಅವರಿಬ್ಬರ ವಿಡಿಯೋ ವೈರಲ್ ಆಗಿದೆ. ಆ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ ಮಾತನಾಡು ಎಂದು ಪತ್ನಿಗೆ ಎ.ಆರ್. ರೆಹಮಾನ್ ಅವರು ಸೂಚನೆ ನೀಡಿರುವುದು ಹೈಲೈಟ್ ಆಗಿದೆ. OpIndia ಈ ಘಟನೆಯ ಬಗ್ಗೆ ತಮ್ಮ ವೆಬ್ಸೈಟ್ನಲ್ಲಿ ಲೇಖನವನ್ನು ಬರೆದಿದೆ. ಎ.ಆರ್. ರೆಹಮಾನ್ ತನ್ನ ಪತ್ನಿ ಸೈರಾಗೆ ಹಿಂದಿಯಲ್ಲಿ ಮಾತನಾಡದಂತೆ ತಾಕೀತು ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.

ಅದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮ. ಹಾಗಾಗಿ ಅಲ್ಲಿನ ಭಾಷೆಗೆ ಗೌರವ ನೀಡಬೇಕು ಎಂಬುದು ಎ.ಆರ್. ರೆಹಮಾನ್ ಅವರ ಉದ್ದೇಶ ಆಗಿರಬಹುದು. ಆದರೆ ಅವರ ಪತ್ನಿಗೆ ಅಷ್ಟು ಚೆನ್ನಾಗಿ ತಮಿಳು ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ತಮಿಳಿನಲ್ಲೇ ಮಾತನಾಡುವಂತೆ ಎ.ಆರ್. ರೆಹಮಾನ್ ಸೂಚನೆ ನೀಡಿದ್ದು ಸರಿಯೇ ಎಂದು ಪ್ರತಿಪಾದಿಸಿ ಹಲವು ಮಾಧ್ಯಮಗಳು ವರದಿ ಮಾಡಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಹಲವು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಎ.ಆರ್. ರೆಹಮಾನ್ ತನ್ನ ಪತ್ನಿ ಸೈರಾ ಅವರಿಗೆ ಹಿಂದಿ ಮಾತನಾಡದಂತೆ ಒತ್ತಡ ಹೇರಿದ್ದಾರೆಯೇ ಎಂದು ಪರಿಶೀಲಿಸಿದಾಗ, ಕಾರ್ಯಕ್ರಮದ ವೇದಿಕೆ ಮೇಲೆ ಸೈರಾ ಬಾನು ಅವರಿಗೆ ಆ್ಯಂಕರ್ಗಳು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತಿದ್ದಂತೆ, ಎ.ಆರ್. ರೆಹಮಾನ್ ಅವರ ಪತ್ನಿಗೆ “ಹಿಂದಿಯಲ್ಲಿ ಮಾತನಾಡಬೇಡಿ. ದಯವಿಟ್ಟು ತಮಿಳಿನಲ್ಲಿ ಮಾತನಾಡಿ” ಎಂದು ತನ್ನ ಹೆಂಡತಿಯನ್ನು ರೇಗಿಸುವ ರೀತಿಯಲ್ಲಿ ಹೇಳುತ್ತಾರೆ. ಸೈರಾಗೆ ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡಲು ಬಾರದ ಈ ರೀತಿ ಚುಡಾಯಿಸುತ್ತಿದ್ದಾರೆ ಎಂದು ಸೈರಾ ಹೇಳುತ್ತಾರೆ.
ತಮಿಳಿಗರು ಹಿಂದಿ ದ್ವೇಷಿ ಎಂಬ ಆರೋಪ ಬರುವಂತೆ ಕೆಲವು ವರದಿಗಳ್ನು ಬಿತ್ತರಿಸಲಾಗಿದೆ. ಆದರೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸಲಾಗುತ್ತದೆ. ಹಿಂದಿ ಹೇರಿಕೆಯ ವಿವಿಧ ರೂಪಗಳು ಇಂದಿಗೂ ಅಸ್ತಿತ್ವದಲ್ಲಿವೆ, ಇದನ್ನು ಪ್ರಶ್ನಿಸುವ ತಮಿಳಿಗರು ಹಿಂದಿ ವಿರೋಧಿ ಅಥವಾ ಹಿಂದಿಯನ್ನು ದ್ವೇಷಿಸುತ್ತಾರೆ ಎಂದು ಆಪಾದಿಸಲಾಗುತ್ತಿದೆ.
ಇದೊಂದು ವಿವಾದಾತ್ಮಕ ವಿಷಯವಾಗಿದ್ದು, ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು (ಆಗಿನ ಮದ್ರಾಸ್ ಪ್ರೆಸಿಡೆನ್ಸಿ) 1937-38 ರಿಂದಲೂ ಹೋರಾಡುತ್ತ ಬಂದಿದೆ. ಹಿಂದಿ ಹೇರಿಕೆಯನ್ನು ವಿರೋಧಿಸಿದಾಗ ತಪ್ಪಾಗಿ ಅರ್ಥೈಸಲ್ಪಟ್ಟಿದೆ ಮತ್ತು ಇತರರಿಂದ ಅರ್ಥೈಸಲ್ಪಟ್ಟಿದೆ.
ಆದರೆ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್ ತನ್ನ ಪತ್ನಿ ಸೈರಾಗೆ ಹಿಂದಿ ಮಾತನಾಡದಂತೆ ಒತ್ತಡ ಹೇರಿದ್ದಾರೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಮೋದಿ ಉದ್ಘಾಟಿಸಿದ ಮೊದಲ ದಿನವೇ ಮಳೆಗೆ ಸೋರಿದ ವಂದೇ ಭಾರತ್ ರೈಲು ಎಂದು ಹಳೆಯ ಚಿತ್ರ ಹಂಚಿಕೆ

