ಫ್ಯಾಕ್ಟ್‌ಚೆಕ್ : ಬಂದೂಕು ಇದ್ದರೆ ಗುಂಡು ಹೊಡೆಯಿರಿ ಎಂದು ಅಣ್ಣಾಮಲೈ ಹೇಳಿದ್ದು ಯಾರಿಗೆ ಗೊತ್ತೇ?

ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ‘ಎನ್ ಮನ್ ಎನ್ ಮಕ್ಕಳ್’ ಎಂಬ ಪಾದಯಾತ್ರೆಯನ್ನು ಜುಲೈ 28 ರಿಂದ ಪ್ರಾರಂಭಿಸಿದ್ದಾರೆ. ಜನವರಿ 11 ರಂದು ಮುಕ್ತಾಯಗೊಳ್ಳಲಿರುವ ಈ ಯಾತ್ರೆ ಸುಮಾರು 5 ತಿಂಗಳಗಳ ಕಾಲ ನಡೆಯಲಿದೆ. ಈ ಮಧ್ಯೆ, ಅವರ ಭಾಷಣದ ವಿಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದೆ. ಬಂದೂಕು ಹಿಂಸೆಯನ್ನು ಉತ್ತೇಜಿಸುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನು ಹಂಚಿಕೊಳ್ಳಲಾಗಿದೆ.

‘@WeDravidians’ ಎಂಬ ಹ್ಯಾಂಡಲ್‌ನಿಂದ ಮಾಡಲಾದ ಟ್ವೀಟ್‌ನಲ್ಲಿ  “ನಿನ್ನ ಬಳಿ ಬಂದೂಕು ಇದ್ದು ಆ ಬಂದೂಕಿನಲ್ಲಿ ಗುಂಡುಗಳಿದ್ದರೆ.. ಮೋದಿ ಗುಂಡು ಹಾರಿಸಲು ಆಜ್ಞಾಪಿಸಿದರೆ.. ಗುಂಡು ಹಾರಿಸಿ ನಮ್ಮ ಬಳಿಗೆ ಬನ್ನಿ. ಬಿಜೆಪಿ ನಿಮ್ಮನ್ನು ನೋಡಿಕೊಳ್ಳುತ್ತದೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಬಿಜೆಪಿ ಮುಖಂಡ ಅಣಾಮಲೈ ಬಂದೂಕಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ತಮಿಳುನಾಡಿನ ಬಜೆಪಿ ಮುಖಂಡ ಅಣ್ಣಾಮಲೈ ಹೇಳಿದ್ದಾರೆ ಎನ್ನಲಾದ ವಿಡಿಯೋವನ್ನು @WeDravidians’ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಕ್ಲಿಪ್ ಮಾಡಲಾಗಿದೆ ಎಂದು ಕೆಲವು ಬಳಕೆದಾರರು ಉಲ್ಲೇಖಿಸಿದ್ದಾರೆ ಮತ್ತು ಬಿಜೆಪಿ ನಾಯಕ ಅಣ್ಣಾಮಲೈ ಮಾತುಗಳನ್ನು ಉಲ್ಲೇಖಿಸಿದ ಸಂದರ್ಭವನ್ನು ಬಿಟ್ಟು ಅರ್ಧ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಕೆಲವು ಬಳಕೆದಾರರು ಅಣ್ಣಾಮಲೈ ಅವರ ವಿಡಿಯೊ ಭಾಷಣದ ದೀರ್ಘ ಆವೃತ್ತಿಯನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

https://twitter.com/sriramchennai07/status/1689006960765517825

ಕಳೆದ ಫೆಬ್ರವರಿಯಲ್ಲಿ  ಡಿಎಂಕೆ ಕೌನ್ಸಿಲರ್‌ನಿಂದ ಹಲ್ಲೆಗೊಳಗಾಗಿದ್ದ 29 ವರ್ಷದ ಯೋಧ ಮೃತಪಟ್ಟ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಯನ್ನು ಖಂಡಿಸಿ ತಮಿಳುನಾಡಿನ ಬಿಜೆಪಿ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಮಾತನಾಡಿ, ಸೇನಾ ಸಿಬ್ಬಂದಿಗೆ ಅವರ ಸ್ವಂತ ಊರಿನಲ್ಲಿ ಸುರಕ್ಷತೆ ಇಲ್ಲ. ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮೃತ ಯೋಧನ ಹೆಸರು ಪ್ರಭು. ಇವರು ಜಮ್ಮು-ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿದ್ದರು. ರಜೆಗಾಗಿ ಊರಿಗೆ ಆಗಮಿಸಿದ್ದರು. ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ, ಮೃತ ಯೋಧ ಪ್ರಭು ಕುಟುಂಬದವರು ಬಟ್ಟೆ ತೊಳೆಯುತ್ತಿದ್ದರು. ಅನಾವಶ್ಯಕವಾಗಿ ನೀರು ಹಾಳ ಮಾಡಬೇಡಿ ಎಂದು ಕೌನ್ಸಿಲರ್ ಹೇಳಿದ್ದಾರೆ. ಆಗ ಯೋಧನ ಪತ್ನಿ ಕೌನ್ಸಿಲರ್ ಮಧ್ಯೆ ಜಗಳವಾಗಿದೆ. ಯೋಧ ಪ್ರಭು ಕೂಡ ವಾಗ್ವಾದಲ್ಲಿ ತೊಡಗಿಸಿಕೊಂಡು, ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ  ಕುಪಿತನಾದ ಡಿಎಂಕೆ ಕೌನ್ಸಿಲರ್ ಪ್ರಭ್ಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ.

ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು 21, ಫೆಬ್ರವರಿ 2023 ರಂದು Nba24x7 ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪ್ರಭುವಿನ ಪತ್ನಿಗೆ 10 ಲಕ್ಷ ರೂ.ಗಳ ಚೆಕ್ ನೀಡಲಾಗಿದ್ದು, ಅದರ ಜೊತೆಗೆ ಅವರ ಇಬ್ಬರು ಮಕ್ಕಳ ಶಿಕ್ಷಣವನ್ನು ಬಿಜೆಪಿ ನೋಡಿಕೊಳ್ಳಲಿದೆ ಎಂದು ಅಣ್ಣಾಮಲೈ ಈ ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಟಿಎನ್ ಸರ್ಕಾರ ಮಾಡದಿದ್ದರೂ ಪಕ್ಷ ಅಥವಾ ಅವರ ಪಕ್ಷದವರು ಮಾಡುತ್ತಾರೆ ಎಂದು ಅವರು ತಿಳಿಸಿದರು.

ಇದೆಲ್ಲದರ ಬಗ್ಗೆ ಮಾತನಾಡಿದ ನಂತರ, ಅವರು “ನಾವೇಕೆ ಅದನ್ನು ಮಾಡುತ್ತಿದ್ದೇವೆ? ತಮಿಳುನಾಡಿನ ಡಿಎಂಕೆ ಸರ್ಕಾರ ನಿಮ್ಮೊಂದಿಗಿಲ್ಲದಿದ್ದರೂ ನಾವು ನಿಮ್ಮೊಂದಿಗಿದ್ದೇವೆ ಎಂಬ ಗಟ್ಟಿ ಸಂದೇಶವನ್ನು ಗಡಿಭಾಗದಲ್ಲಿರುವ ಎಲ್ಲ ಯೋಧರಿಗೆ ಸಾರುತ್ತಿದ್ದೇವೆ. ನಿಮ್ಮ ಬಳಿ ಬಂದೂಕು ಇದ್ದರೆ ಮತ್ತು ಅದರಲ್ಲಿ ಬುಲೆಟ್‌ಗಳಿದ್ದರೆ, ಮತ್ತು ಮೋದಿ ಆದೇಶ ನೀಡಿದರೆ ನೀವು ಶೂಟ್ ಮಾಡಿ ನಮ್ಮ ಬಳಿ ಬನ್ನಿ ಉಳಿದದ್ದನ್ನು ತಮಿಳುನಾಡಿನಲ್ಲಿ ಬಿಜೆಪಿ ನೋಡಿಕೊಳ್ಳುತ್ತದೆ, ಎಂದು  ಭಾರತೀಯ ಸೇನೆಯಲ್ಲಿನ ಸೈನಿಕರ ಬಗ್ಗೆ ಮತ್ತು ಪ್ರಭು ಅವರ ಕುಟುಂಬಕ್ಕೆ ಬಿಜೆಪಿಯ ಬೆಂಬಲದ ವ್ಯಕ್ತಪಡಿಸುತ್ತ ಈ ಮಾತುಗಳನ್ನು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿಯ ಮಾಜಿ ಸೈನಿಕರ ವಿಭಾಗವು ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ, ಮಾಡಿದ ಭಾಷಣದ ತುಣುಕನ್ನು ಬಿಜೆಪಿ ನಾಯಕರು ಬಂದೂಕು ಹಿಂಸಾಚಾರಕ್ಕೆ ಕರೆ ನೀಡುತ್ತಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋ ಕ್ಲಿಪ್‌ಅನ್ನು ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ ಅಣ್ಣಾಮಲೈ ಗಡಿಯಲ್ಲಿ ನಿಯೋಜಿಸಲಾದ ಸೈನಿಕರನ್ನು ಉಲ್ಲೇಖಿಸಿದ್ದಾರೆ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.  ಆದರೆ ಇದನ್ನು ತಿರುಚಿ “ನಿನ್ನ ಬಳಿ ಬಂದೂಕು ಇದ್ದು ಆ ಬಂದೂಕಿನಲ್ಲಿ ಗುಂಡುಗಳಿದ್ದರೆ, ಮೋದಿ ಗುಂಡು ಹಾರಿಸಲು ಆಜ್ಞಾಪಿಸಿದರೆ, ಗುಂಡು ಹಾರಿಸಿ ನಮ್ಮ ಬಳಿಗೆ ಬನ್ನಿ. ಬಿಜೆಪಿ ನಿಮ್ಮನ್ನು ನೋಡಿಕೊಳ್ಳುತ್ತದೆ” ಎಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್ ಮತ್ತು ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದು ಸಚಿವೆ ಸ್ಮೃತಿ ಇರಾನಿಗಲ್ಲ! ಮತ್ತ್ಯಾರಿಗೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights