ಫ್ಯಾಕ್ಟ್‌ಚೆಕ್ : ಮಸೀದಿಯಲ್ಲಿ ಕನ್ನಡ ನಾಮಫಲಕ ಅಳವಡಿಸಿಲ್ಲ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ BJP ಬೆಂಬಲಿಗರು

ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಕನ್ನಡ ನಾಮಫಲಕದ್ದೇ ಸುದ್ದಿ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಹಲವು ಜಾಗಗಳಲ್ಲಿ ಕನ್ನಡ ನಾಮಫಲಕ ಅಳವಡಿಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಆಂಗ್ಲ ಸೇರಿದಂತೆ ಬೇರೆ ಭಾಷೆಯಲ್ಲಿ ಇರುವ ನಾಮಫಲಕಗಳನ್ನು ಧ್ವಂಸ ಮಾಡಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಈ ವಿಷಯ ಕುರಿತಾಗಿ ಕರ್ನಾಟಕ ಸರ್ಕಾರವು ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರುವುದು ಕಡ್ಡಾಯ ಎಂದಿದೆ.

ಇದೇ ನಾಮ ಫಲಕ ಕುರಿತಾದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಜಾಮಿಯಾ ಮಸೀದಿಯ ಫೋಟೊವನ್ನು ಹಂಚಿಕೊಳ್ಳುತ್ತಾ ಮಸೀದಿಯ ನಾಮಫಲಕವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬರೆಯಲಾಗಿದ್ದು ಕನ್ನಡ ಮಾಯವಾಗಿದೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ ಎfನುವ ಹೋರಾಟಗಾರರು ಇದರ ವಿರುದ್ದ ಪ್ರತಿಭಟಿಸುತ್ತಾರಾ? ಎಂಬ ಹೇಳಿಕೆಯೊಂದಿಗೆ ಮಿ. ಸಿನ್ಹಾ ಎಂಬುವವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅಮಿತಾಭ್‌ ಚೌಧರಿ, ಅಂಶುಮನ್ ಸಿಂಘ್ ಹೆಸರಿನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಇಂತಹದ್ದೇ ಪೋಸ್ಟ್‌ ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾದ ಫೋಟೊಗಳಿಗೂ ಮೂಲ ಜಾಮಿಯಾ ಮಸಿದಿಗೂ ಸಂಬಂಧವಿಲ್ಲ.

ಕೆ.ಆರ್. ಮಾರ್ಕೆಟ್‌ನಲ್ಲಿರುವ ಜಾಮಿಯಾ ಮಸೀದಿ
ಕೆ.ಆರ್. ಮಾರ್ಕೆಟ್‌ನಲ್ಲಿರುವ ಜಾಮಿಯಾ ಮಸೀದಿ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬಳಕೆ ಮಾಡಿಕೊಂಡಿರುವ ಚಿತ್ರ ಶಿವಾಜಿ ನಗರದ ಜುಮ್ಮ ಮಸೀದಿಯದ್ದು. ಜುಮ್ಮ ಮಸೀದಿಯ ಫೋಟೊಗೆ ಫೋಟೊಶಾಪ್ ಮೂಲಕ ಎಡಿಟ್ ಮಾಡಿ ಜಾಮಿಯಾ ಮಸೀದಿ ಎಂದು ಹೆಸರು ಬದಲಾಯಿಸಿ ಹಂಚಿಕೊಳ್ಳಲಾಗಿದೆ.

ವಾಸ್ತವವೇನೆಂದರೆ ಜಾಮಿಯಾ ಮಸೀದಿ ಬೆಂಗಳೂರಿನ ಹಳೆಯ ಮಸೀದಿಯಾಗಿದ್ದು, 1790ರಲ್ಲಿ ನಿರ್ಮಿಸಲಾಗಿದೆ. ಕೆ ಆರ್ ಮಾರುಕಟ್ಟೆಯಲ್ಲಿರುವ ಈ ಮಸೀದಿ, 1940ರ ದಶಕದಲ್ಲಿ ರಿಯಾಜ್‌ ಆಸಿಫುದ್ದೀನ್ ಎಂಬುವವರು ಜೀರ್ಣೋದ್ಧಾರ ಮಾಡಿದರು ಎನ್ನಲಾಗಿದೆ.

ಶಿವಾಜಿ ನಗರದ್ಲಿರುವ ಜುಮ್ಮಾ ಮಸೀದಿ(ಕನ್ನಡ ಬಳಕೆ ಮಾಡಲಾಗಿದೆ)
ಶಿವಾಜಿ ನಗರದಲ್ಲಿರುವ ಜುಮ್ಮ ಮಸೀದಿ(ಕನ್ನಡ ಬಳಕೆ ಮಾಡಲಾಗಿದೆ)

ಇನ್ನು ವೈರಲ್ ಆಗಿರುವ ಫೋಟೊ ಬೆಂಗಳೂರಿನ ಶಿವಾಜಿನಗರದಲ್ಲಿರುವ, (ಕಮರ್ಷಿಯಲ್ ಸ್ಟ್ರೀಟ್‌ ಬಳಿರುವ ) ಜುಮ್ಮ ಮಸೀದಿಯ ಫೋಟೊ ಎಂಬುದು ಸ್ಪಷ್ಟವಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ ಜುಮ್ಮ ಮಸೀದಿಯಲ್ಲೂ ಕನ್ನಡ ಬಳಕೆ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಡ ಬಳಕೆ ಮಾಡಿರುವ ಮಸೀದಿಗಳ ಚಿತ್ರವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ವೈರಲ್ ಪೋಸ್ಟ್‌ ದಾರಿತಪ್ಪಿಸುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಾಯಿಬಾಬಾ ಮುಸ್ಲಿಂ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights