FACT CHECK | ಮುಸ್ಲಿಮರು ಹಿಂದೂ ಹುಡುಗಿಯರ ಬ್ರೈನ್‌ವಾಶ್ ಮಾಡಿ ಬುರ್ಖಾ ಧರಿಸುವಂತೆ ಮಾಡಿದ್ದು ನಿಜವೇ?
ಹಿಂದೂಗಳೇ ಎಚ್ಚೆತ್ತುಕೊಳ್ಳಿ.! ಇದು ಕರ್ನಾಟಕದ ವಿಡಿಯೋ !! ವಿಡಿಯೋದಲ್ಲಿರುವ ಬುರ್ಖಾ ತೊಟ್ಟಿರುವ ಹುಡುಗಿ ಹಿಂದೂ ಹುಡುಗಿಯನ್ನು ಬ್ರೈನ್‌ವಾಶ್ ಮಾಡಿ ಆ ಹಿಂದೂ ಹುಡುಗಿಗೆ ಬುರ್ಖಾ ಧರಿಸುವಂತೆ ಮಾಡಿ ಕಾರಿಡಾರ್‌ನಲ್ಲಿ ನಿಂತ ಶಾಂತಿಪ್ರಿಯ ಹುಡುಗನೊಂದಿಗೆ ಹೋಗುವಂತೆ ಹೇಳುತ್ತಿದ್ದಾಳೆ. ಇದು ಲವ್ ಜಿಹಾದ್ ಪ್ರಕರಣ ಎಂಬ ಪ್ರತಿಪಾದನೆಯೊಂದಿಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಹಿಂದೂಗಳೇ ಎಚ್ಚೆತ್ತುಕೊಳ್ಳಿ.!
ಇದು ಕರ್ನಾಟಕದ ವಿಡಿಯೋ !!
ವಿಡಿಯೋದಲ್ಲಿರುವ ಬುರ್ಖಾ ತೊಟ್ಟಿರುವ ಹುಡುಗಿ ಹಿಂದೂ ಹುಡುಗಿಯನ್ನು ಬ್ರೈನ್‌ವಾಶ್ ಮಾಡಿ ಆ ಹಿಂದೂ ಹುಡುಗಿಗೆ ಬುರ್ಖಾ ಧರಿಸುವಂತೆ ಮಾಡಿ ಕಾರಿಡಾರ್‌ನಲ್ಲಿ ನಿಂತ ಶಾಂತಿಪ್ರಿಯ ಹುಡುಗನೊಂದಿಗೆ ಹೋಗುವಂತೆ ಹೇಳುತ್ತಿದ್ದಾಳೆ.
ಇದು ಲವ್ ಜಿಹಾದ್ ಪ್ರಕರಣpic.twitter.com/fpUNd7R6b3— Sudhakar Rao Modi Ka parivar (@ImSudhakarRao) March 3, 2024
ಇದೇ ಪ್ರತಿಪಾನೆಯೊಂದಿಗೆ ಮತ್ತೊಬ್ಬ ಎಕ್ಸ್ ಖಾತೆ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
https://twitter.com/kurubas_p11282/status/1764230852505141355
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿರುವಂತೆ ಮುಸ್ಲಿಮರು, ಹಿಂದೂ ಹೆಣ್ಣು ಮಕ್ಕಳ ಬ್ರೈನ್ ವಾಶ್ ಮಾಡಿ ಲವ್ ಜಿಹಾದ್‌ಗೆ ಪ್ರೇರಿಸಿದ್ದಾರೆ ಎಂಬ ಹೇಳಿಕೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ, 2021ರಲ್ಲಿ ಸುದ್ದಿ ವಾಹಿನಿಗಳು, ಪತ್ರಿಕೆಗಳು ಮಾಡಿದ ವರದಿಗಳ ಲಭ್ಯವಾಗಿವೆ.

ವರದಿಗಳ ಪ್ರಕಾರ, “ಈ ಘಟನೆಯು ನವೆಂಬರ್ 18, 2021 ರ ಗುರುವಾರ ಸಂಜೆ ಶನಿವಾರಶಾಂತೆಯ ಕೆಆರ್‌ಸಿ ವೃತ್ತದಲ್ಲಿ ನಡೆದಿದೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವಿವರ :
ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ 40ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿತ್ತು. ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಸಂಘಪರಿವಾರಕ್ಕೆ ಸೇರಿದ ಕೆಲ ಹುಡುಗರು ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಬುರ್ಖಾ ವಿಚಾರವಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದೇ ಸಂದರ್ಬದಲ್ಲಿ ಬಾಲಕಿಯ ಬುರ್ಖಾ ಹರಿದು, ಎಳೆದಾಡಿದ್ದರಿಂದ ಬಾಲಕಿಯ ಬೆನ್ನಿನಲ್ಲಿ ಗಾಯಗಳಾಗಿವೆ. ಬಳಿಕ ಬಾಲಕಿಯರನ್ನು ಕೊಡ್ಲಿಪೇಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ಬಾಲಕಿಯರ ಕುಟುಂಬಸ್ಥರು ಪೊಲೀಸ್ ಎಫ್‌ಐಆರ್ ದಾಖಲಿಸಿದ್ದರು. ಶನಿವಾರಸಂತೆ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಿದ್ದರು ಎಂದು ವರದಿಯಾಗಿದೆ.
ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ, ಶನಿವಾರಸಂತೆಯ ಪ್ರಜ್ವಲ್ ಮತ್ತು ಕೌಶಿಕ್ ಎಂಬವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಹೆಚ್ಚಿನವರನ್ನು ಬಂಧಿಸಲಾಗುವುದು” ಎಂದು ಶನಿವಾರಸಂತೆ ಎಸ್‌ಐ ಪರಶಿವ ಮೂರ್ತಿ ತಿಳಿಸಿದ್ದರು ಎಂದು ವರದಿಯಾಗಿದೆ. ಹಾಗಾಗಿ ಈ ದೃಶ್ಯಾವಳಿಗಳು ಹಳೆಯದಾಗಿದ್ದು ಲವ್ ಜಿಹಾದ್‌ಗೆ ಸಂಬಂದಿಸಿದೆ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಮಡಿಕೇರಿಯ ಶನಿವಾರಸಂತೆಯಲ್ಲಿ ಬುರ್ಖಾ ವಿಚಾರವಾಗಿ ನೈತಿಕ ಪೊಲೀಸ್‌ಗಿರಿ ಮಾಡಿ ಬಾಲಕಿಯರ ವಿರುದ್ದ ಅಸಭ್ಯವಾಗಿ ವರ್ತಿಸಿದ್ದ ಇಬ್ಬರು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಹಳೆಯ ಘಟನೆಯನ್ನು ತಿರುಚಿ ಮುಸ್ಲಿಮರು ಲವ್ ಜಿಹಾದ್ ನಡೆಸಿ ಹಿಂದೂ ಹುಡುಗಿಯರನ್ನು ವಂಚಿಸುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉಚಿತ ಜಿಯೋ ರೀಚಾರ್ಜ್ ಎಂಬ ಸಂದೇಶವನ್ನು ನಂಬಬೇಡಿ

