FACT CHECK | ಹಿಮಾಚಲ ಪ್ರದೇಶದಲ್ಲಿ 2017ರಲ್ಲಿ ನಿರ್ಮಿಸಿದ ಚಿಚಾಮ್ ಸೇತುವೆಯನ್ನು ಮೋದಿ ಸರ್ಕಾರ ಇತ್ತೀಚೆಗೆ ನಿರ್ಮಿಸಿದೆ ಎಂದು ತಪ್ಪಾಗಿ ಹಂಚಿಕೆ
ಲೋಕಸಬಾ ಚುನಾವಣೆ ಘೋಷಣೆಯಾಗುತ್ತಿದಂತೆ ಎಲ್ಲಾ ಪಕ್ಷಗಳ ಬೆಂಬಲಿಗರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಪಕ್ಷಗಳು ಮತ್ತು ನಾಯಕರು ಮಾಡಿರುವ ಸಾಧನೆಗಳನ್ನು ಪೋಸ್ಟ್ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬೆಂಬಲಿಗರು ಒಂದು ಕೈ ಮೇಲೆ ಎಂಬಂತೆ ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಾರೆ. ಅಂತಹದ್ದೇ ಪೋಸ್ಟ್ವೊಂದು ಈಗ ವೈರಲ್ ಆಗಿದೆ.
“ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಚಿಚಾಮ್ ಸೇತುವೆ ಏಷ್ಯಾದ ಅತಿ ಎತ್ತರದ ಸೇತುವೆ” ಎಂಬ ಬರಹದೊಂದಿಗೆ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಫೇಸ್ಬುಕ್ ಮತ್ತು ವಾಟ್ಸಾಪ್ಹಳಲ್ಲಿ ಇದೇ ಪೋಸ್ಟ್ ಮತ್ತು ಹೇಳಿಕೆಗಳ ಮೂಲಕ ಹಿಮಾಚಲ ಪ್ರದೇಶದಲ್ಲಿ ಚಿಚಾಮ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.


ಹಾಗಿದ್ದರೆ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮೇ 15, 20219ರ ಟೈಮ್ಸ್ ಟ್ರಾವೆಲ್ ಮಾಡಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ ಈ ಚಿಚಾಮ್ ಸೇತುವೆಯನ್ನು 2017 ರಲ್ಲೇ ಉದ್ಘಾಟನೆ ಮಾಡಲಾಗಿತ್ತು ಎಂಬುದನ್ನು ಉಲ್ಲೇಖಿಸುತ್ತದೆ.

ಚೀಚಾಮ್ ಸೇತುವೆಯನ್ನು 2017ರಲ್ಲಿ ಉದ್ಘಾಟಿಸಲಾಯಿತು ಎಂದು ದಿ ಕ್ವಿಂಟ್ 25 ನವೆಂಬರ್ 2022ರಂದು ವರದಿ ಮಾಡಿದೆ. ಈ ಸೇತುವೆ ನಿರ್ಮಾಣದಿಂದಾಗಿ ಸ್ಥಳೀಯ ಜನರಿಗೆ ಮುಖ್ಯವಾಗಿ ಚೀಚಾಮ್ ಗ್ರಾಮ ಮತ್ತು ಕಾಝಾ ಭಾಗದ ಜನರ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿ 5, 2024ರಂದು ರತನ್ ಧಿಲ್ಲೋನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಚಿಚಾಮ್ ಸೇತುವೆ 2017 ರಲ್ಲಿ ಉದ್ಘಾಟನೆ ಗೊಂಡಿದೆ ಎಂದು ಹೇಳಿರುವುದನ್ನು ನೋಡಬಹುದು.
India’s Spiti Valley is home to wonders like Chicham Bridge, said to be the World's highest bridge from sea level at 4,037m (13,244ft).
Chicham Bridge was constructed over a course of 15 years, and was inaugurated in 2017.
Look down this one and you will find yourself gaping… pic.twitter.com/blu8JscrLS
— Rattan Dhillon (@ShivrattanDhil1) February 5, 2024
ಒಟ್ಟಾರೆಯಾಗಿ ಹೇಳುವುದಾದರೆ, 2017ರಲ್ಲಿ ಮೋದಿ ಸರ್ಕಾರವೇ ಉದ್ಘಾಟಿಸಿದ ಹಳೆಯ ಸೇತುವೆಯನ್ನು 2024ರ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಸುಳ್ಳು ಪತ್ತಿಪಾದನೆಯೊಂದಿಗೆ ಇತ್ತೀಚೆಗೆ ನಿರ್ಮಿಸಲಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ.
ಒಂದು ಆಡಳಿತ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಳೆದ 5 ವರ್ಷದ ಆಡಳಿತಾವಧಿಯಲ್ಲಿ ಏನೆಲ್ಲಾ ಸೌಲಭ್ಯಗಳನ್ನು ಜನರಿಗೆ ನೀಡಿದ್ದೇವೆ ಎನ್ನುವ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬೇಕೇ ವಿನಃ ಹೀಗೆ ಸುಳ್ಳು ಹೇಳಿಕೊಂಡು ಜನರನ್ನು ವಂಚಿಸಬಾರದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದುಬೈನ ಬುರ್ಜ್ ಖಲೀಫಾ ಕಟ್ಟಡ ಬೆಂಕಿಗೆ ಆಹುತಿಯಾಗಿದೆ ಎಂದು AI ಫೋಟೊ ಹಂಚಿಕೆ

