FACT CHECK | BJP ನಾಯಕನಿಗೆ ಚಪ್ಪಲಿ ಹಾರ ಹಾಕಿದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕನಿಗೆ ಜನರು ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ  ವೃದ್ಧರೊಬ್ಬರು ಬಿಜೆಪಿ ನಾಯಕನೊಬ್ಬನಿಗೆ ಚಪ್ಪಲಿ ಹಾರ ಹಾಕುವುದನ್ನು ನೋಡಬಹುದು.

https://twitter.com/titu_dipankar/status/1780843206088991033

ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ಜರುಗಿದೆ. ಆದರೆ ಕಳೆದ ಕೆಲವು ವಾರಗಳಿಂದ ಅನೇಕ ಹಳೆಯ ವಿಡಿಯೋಗಳನ್ನು ಇತ್ತೀಚಿನದು ಎಂದು ಬಿಂಬಿಸಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಣಿಪುರದಲ್ಲಿ ಮತ ಕೇಳಲು ಹೋದ ಬಿಜೆಪಿ ನಾಯಕರನ್ನು ತಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನಲ್ಲಿ ನಡೆದ ಹಳೆಯ ಘಟನೆಯನ್ನು ಹಂಚಿಕೊಳ್ಳಲಾಗುತ್ತಿತ್ತು. ಹಾಗಿದ್ದರೆ ಈ ವೈರಲ್ ವಿಡಿಯೋ 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದೆಯೇ ಎಂದು ವಿಡಿಯೋದ ಸತ್ಯಾಸತ್ಯತೆನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ 2018 ರ ಜನವರಿ 7 ರಂದು ಮಧ್ಯಪ್ರದೇಶದ ಧಮನೋದ್ ಸಿವಿಕಲ್ ಚುನಾವಣೆಗೆ ಸಂಬಂಧಿಸಿದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಅವರು ಮನೆ ಮನೆ ಪ್ರಚಾರ ನಡೆಸುವ ವೇಳೆ ವೃದ್ದರೊಬ್ಬರು ಅವರಿಗೆ ಚಪ್ಪಲಿ ಹಾರ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ANI, APB.Live, ಜೀ ನ್ಯೂಸ್ ವರದಿ ಮಾಡಿವೆ.

 ANI ವರದಿಯ ಪ್ರಕಾರ ಧಮನೋದ್ ಸಿವಿಕ್ ಚುನಾವಣಾ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಅವರು, “ಅವರು ನಮ್ಮವರೇ. ಅವರಿಗೆ ಏನು ಅಸಮಾಧಾನ ಎಂದು ಕೇಳಿ ಪರಿಹರಿಸಿಕೊಳ್ಳುತ್ತೇವೆ? ಇದೇ ಕಾರಣಕ್ಕೆ ಅವರು ಆ ರೀತಿ ವರ್ತಿಸಿರಬಹುದು ಎಂದ ಧಮನೋದ್ ಸಿವಿಕ್ ನಾನು ಅವರ ಮಗನಿದ್ದಂತೆ , ನಾವು ಒಟ್ಟಿಗೆ ಕುಳಿತು ಮಾತನಾಡುತ್ತೇವೆ ” ಹೇಳಿದ್ದಾರೆ ಎಂದು ವರದಿಯಾಗಿದೆ.

ಚಪ್ಪಲಿ ಹಾರ ತೊಡಿಸಿದ ವ್ಯಕ್ತಿ “ನಮ್ಮ ಪ್ರದೇಶದಲ್ಲಿ ತೀವ್ರವಾದ ನೀರಿನ ಸಮಸ್ಯೆ ಇದ್ದು ಅದನ್ನು ಬಗೆ ಹರಿಸದಿದ್ದಕ್ಕೆ ಹಾಗೆ ಮಾಡಿದೆ. ನನ್ನ ಹೆಂಡತಿ ಈ ಕುರಿತು ದೂರು ನೀಡಲು ಅಂದಿನ ಅಧ್ಯಕ್ಷರ ಬಳಿಗೆ ಹೋದರು ಆದರೆ ಆಕೆಯ ವಿರುದ್ಧ ದೂರು ದಾಖಲಿಸಲಾಗಿದೆ. ರಾತ್ರಿಯೂ ಸಹ ನಮ್ಮನ್ನು ಅನೇಕ ಬಾರಿ ಠಾಣೆಗೆ ಕರೆಸಿಕೊಂಡು ಹಿಂಸೆ ನೀಡಿದ್ದಾರೆ” ಎಂದು ಚಪ್ಪಲಿ ಹಾರ ಹಾಕಿದ ವ್ಯಕ್ತಿ  ANI ಗೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರ ಸ್ಥಳೀಯ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಮತಯಾಚನೆ ಮಾಡುವಾಗ ಚಪ್ಪಲಿ ಹಾರ ಹಾಕಿದ ಹಳೆಯ ಘಟನೆಯನ್ನು 2024ರ ಲೋಕಸಭಾ ಚುನಾವಣೆಯ ಸಂದರ್ಭದ್ದು ಎಂದು ತಪ್ಪಾಗಿ ಹಂಚಿಕೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights