FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಅಂಗಡಿಗೆ ಬೆಂಕಿ ಇಟ್ರಾ ಮುಸ್ಲಿಮರು ? ಈ ಸ್ಟೋರಿ ಓದಿ
ಅಂಗಡಿಯೊಂದರಲ್ಲಿ ಭಾರೀ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ” ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಗಳು ಮುಂದುವರೆದಿದೆ. ಲಕ್ಷ್ಮಿಪುರದಲ್ಲಿ ರಾಜನ್ ಚಂದ್ರ ಎಂಬ ಹಿಂದೂ ಕುಟುಂಬದವರ ಅಂಗಡಿಯನ್ನು ಸುಟ್ಟು ಬೂದಿ ಮಾಡಲಾಗಿದೆ. ರಾಜನ್ ಚಂದ್ರ ಮತ್ತು ಅವರ ಕುಟುಂಬವು ಸಂಕಟದಲ್ಲಿದೆ ಮತ್ತು ಅವರ ಜೀವನೋಪಾಯಕ್ಕೆ ಆಧಾರವಾಗಿದ್ದ ಏಕೈಕ ಅಂಗಡಿಯೊಂದು ಸುಟ್ಟು ಬೂದಿಯಾಗುತ್ತದೆ” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
बांग्लादेश में हिंदुओं पर हमले…
लक्ष्मीपुर में हिंदू दुकानदार राजन चंद्रा की दुकान को जलाकर राख कर दिया गया है…
राजन चंद्रा और उनका परिवार तड़प रहा है, बिलख रहा है और उनकी रोटी का एकमात्र साधन उनकी दुकान धू-धूकर जल रही है…#bangladeshnews #dhaka #BangladeshCrisis… pic.twitter.com/qNwN1nTC0O
— Sudarshan News (@SudarshanNewsTV) August 7, 2024
ಲಕ್ಷ್ಮೀಪುರದಲ್ಲಿ ರಾಜನ್ ಚಂದ್ರ ಎಂಬ ಹಿಂದೂ ಅಂಗಡಿಯು ಸುಟ್ಟು ಭಸ್ಮವಾಗಿದೆ. ರಾಜನ್ ಚಂದ್ರ ಮತ್ತು ಅವರ ಕುಟುಂಬದವರ ಏಕೈಕ ಜೀವನೋಪಾಯದ ಮೂಲವಾದ ತಮ್ಮ ಅಂಗಡಿಯು ಸುಟ್ಟು ಬೂದಿಯಾಗುತ್ತಿದ್ದಂತೆ ಸಂಕಟ ಮತ್ತು ರೋದನದಲ್ಲಿದ್ದಾರೆ ಎಂದು ಹಿಂದಿ ಮೂಲದ ಸುದರ್ಶನ್ ನ್ಯೂಸ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 11 ಜುಲೈ 2024 ರಂದು ಅಪ್ಲೋಡ್ ಮಾಡಿದ ಈ ವೀಡಿಯೊದ ಕುರಿತು ಹಲವು ಮಾಧ್ಯಮಗಳು ಮಾಡಿರುವ ವರದಿಳು ಲಭ್ಯವಾಗಿದೆ.

ಸ್ಥಳೀಯ ವರದಿಗಳ ಪ್ರಕಾರ , ಫಜ್ರ್ ಪ್ರಾರ್ಥನೆಯ ನಂತರ ತಕ್ಷಣವೇ ಮಾರುಕಟ್ಟೆಯ ದಕ್ಷಿಣ ಭಾಗದಲ್ಲಿ ಬೆಂಕಿ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕ ದಳದವರು ಸಕಾಲಕ್ಕೆ ಬರಲಿಲ್ಲ- ಅಷ್ಟರಲ್ಲಿ ಬೆಂಕಿ ವ್ಯಾಪಿಸಿತು. ನಂತರ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ಹತೋಟಿಗೆ ತಂದಿದೆ. ಈ ಹಿಂದೆ 15 ಅಂಗಡಿಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದ್ದವು” ಎಂದು ವರದಿಯಾಗಿದೆ.

ಇದಲ್ಲದೆ, ಸೋನ್ಬದ್ಪ್ರಕಾಶ್ ಅವರ ವರದಿಯು ಲಭ್ಯವಾಗಿದ್ದು, “ಬಾಧಿತ ಉದ್ಯಮಿಗಳಾದ ಜುಲ್ಹಾಸ್, ಸಬುಜ್ ಮಿಯಾ ಮತ್ತು ಸುಮನ್ ಅವರು ರಾತ್ರಿಯಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಗಿಸಿ ಮನೆಗೆ ಹೋಗಿದ್ದರು. ಆದರೆ ಬೆಳಗಿನ ಜಾವ ಮಾರುಕಟ್ಟೆಯಲ್ಲಿ ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯಿತು. ಬಳಿಕ ಸ್ಥಳಕ್ಕಾಗಮಿಸುವಷ್ಟರಲ್ಲಿ ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ಹಲವು ಕೋಟಿ ರೂಪಾಯಿ ನಷ್ಟವಾಗಿದೆ. ಅನೇಕರು ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಈಗ ಎಲ್ಲ ಮುಗಿದಿದೆ. ಸರ್ಕಾರದ ಬೆಂಬಲವಿಲ್ಲದೆ ಅವರು ವ್ಯಾಪಾರ ಮಾಡಕು ಸಾಧ್ಯವಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಅಂಗಡಿ ಮುಗ್ಗಟ್ಟುಗಳು ಬೆಂಕಿಗೆ ಆಹುತಿಯಾಗುತ್ತಿರುವ ದೃಶ್ಯಕ್ಕೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ಸಂಬಂಧವಿಲ್ಲ. ಈ ಘಟನೆ 11 ಜುಲೈ 2024 ಕ್ಕೂ ಹಿಂದಿನದು. ಹಾಗಾಗಿ ವಿಡಿಯೋವನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಾಗರ ಪಂಚಮಿಯಂದು ಮುಸ್ಲಿಮರಿಗೆ ನಾಗರಬೆತ್ತದ ರುಚಿ ತೋರಿಸಿದ ಪೊಲೀಸರು ಎಂದು ಹಳೆಯ ವಿಡಿಯೋ ಹಂಚಿಕೆ

