FACT CHECK | ದಳಪತಿ ವಿಜಯ್ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೆ
ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಇತ್ತೀಚೆಗೆ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಮೊದಲ ಸಭೆಯನ್ನು ಆಯೋಜಿಸಿದ್ದರು. ವಿಜಯ್ ಅವರ ಭಾಷಣದ ವಿಡಿಯೋವೊಂದರಲ್ಲಿ ಜಗನ್ ಮತ್ತು ಕೆಸಿಆರ್ ಪಕ್ಷದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ (ಇಲ್ಲಿ ಮತ್ತು ಇಲ್ಲಿ). ಇದಲ್ಲದೆ, “ನಾನು ಗೆಲ್ಲಲು ಹೆಣದ ರಾಜಕೀಯ ಮಾಡುವುದಿಲ್ಲ, ನಾನು ಯಾವುದೇ ಖಡ್ಗ ಹಿಡಿದು ನಾಟಕವನ್ನು ಆಡುವುದಿಲ್ಲ” ಎಂದು ವಿಜಯ್ ಮನೆಯಲ್ಲಿ ಹೇಳಿದ್ದಾರೆ ಎಂದು ಹೇಳುವ ವಿಡಿಯೋ ಸಹ ವೈರಲ್ ಆಗುತ್ತಿದೆ.

ಇನ್ನೂ ಕೆಲವರು “ಜಗನ್ಮೋಹನ್ ರೆಡ್ಡಿ ವಿರುದ್ಧ ಹಲವು ಕೇಸ್ ಗಳು ಇವೆ. ನನ್ನ ಮೇಲೆ ಒಂದು ಕೇಸ್ ಕೂಡ ಇಲ್ಲ. ಸಿಎಂ ಆಗದ ನಾನು ಸಿಎಂ ಆಗಬಾರದೇ?? ನೀವೇ ಹೇಳಿ. ಜಗನ್ಮೋಹನ ರೆಡ್ಡಿ ತರ ಕಳ್ಳರನ್ನು ಅತ್ಯಾಚಾರಿಗಳನ್ನು ಪಕ್ಷದಲ್ಲಿ ಇಟ್ಟುಕೊಂಡು ಪ್ರೋತ್ಸಾಹಿಸುವುದಿಲ್ಲ.” ಎಂದು ವಿಜಯ್ ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೈರಲ್ ವಿಡಿಯೋದಲ್ಲಿ ವಿಜಯ್ ಅವರು ತಮಿಳಿನಲ್ಲಿ ಮಾತನಾಡುವುದನ್ನು ಕಾಣಬಹುದು. ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಜಗನ್ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ, ಅವರು ತಮ್ಮ ಅನುಯಾಯಿಗಳಿಗೆ ಧನ್ಯವಾದಗಳನ್ನು ತಿಳಿಸುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ವಿಜಯ್ ಅವರ ಭಾಷಣದ ವೀಡಿಯೊದಲ್ಲಿ, ಅವರು 6:48 ಸೆಕೆಂಡುಗಳಲ್ಲಿ ಆಡಿದ ಪದಗಳನ್ನು ಕತ್ತರಿಸುವ ಮೂಲಕ ವೈರಲ್ ವಿಡಿಯೋ ಮಾಡಲಾಗಿದೆ.
ವಿಜಯ್ ಅವರ ಭಾಷಣದ ಪದಗಳನ್ನು ಕನ್ನಡಕ್ಕೆ ಮಾಡಿದ ಅನುವಾದ ಹೀಗಿದೆ – “ನನಗೆ ತಿಳಿದ ಮಟ್ಟಿಗೆ, ನಾವೆಲ್ಲರೂ ಒಂದೇ ಮತ್ತು ನಾವೆಲ್ಲರೂ ಸಮಾನರು. ಆದ್ದರಿಂದ, ನನ್ನ ಹೃದಯದಲ್ಲಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು / ನಮಸ್ಕಾರಗಳು” ಎಂದು ಹೇಳಿದ್ದಾರೆ. ಇದರಿಂದ ವಿಜಯ್ ಅವರು ತಮ್ಮ ಅಭಿಮಾನಿಗಳಿಗೆ ನಮಸ್ಕರಿಸುವ ವಿಡಿಯೋವನ್ನು ಕೆಸಿಆರ್ ಮತ್ತು ಜಗನ್ ಅವರ ರಾಜಕೀಯ ನೀತಿಗಳನ್ನು ಟೀಕಿಸುತ್ತಿದ್ದಾರೆ ಮತ್ತು ತಮ್ಮ ರಾಜಕೀಯ ನೀತಿಗಳೊಂದಿಗೆ ಹೋಲಿಸುತ್ತಿದ್ದಾರೆ ಎಂದು ತಪ್ಪಾಗಿ ಅನುವಾದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇದಲ್ಲದೆ, ವಿಜಯ್ ತಮ್ಮ ಭಾಷಣದಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತು ಕೆಸಿಆರ್ ಉದ್ದೇಶಿಸಿ ಮಾತನಾಡಿದ್ದಾರೆ ಎಂದು ತೋರಿಸಲು ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಯೂಟ್ಯೂಬ್ನಲ್ಲಿ ತಮ್ಮ ಸಮಾವೇಷದ ಭಾಷಣದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅವರು ಇದನ್ನು ಎಲ್ಲಿಯೂ ಹೇಳಿಲ್ಲ.
ಅಲ್ಲದೆ, ವೈರಲ್ ಗ್ರಾಫಿಕ್ನಲ್ಲಿ ವಿಜಯ್ ಹೇಳಿದಂತೆ – “ನಾನು ಗೆಲ್ಲಲು ಹೆಣದ ರಾಜಕೀಯ ಮಾಡುವುದಿಲ್ಲ, ನಾನು ಯಾವುದೇ ಖಡ್ಗದ ನಾಟಕವನ್ನು ಆಡುವುದಿಲ್ಲ” ಎಂದು ವಿಜಯ್ ಇಡೀ ಭಾಷಣದಲ್ಲಿ ಎಲ್ಲಿಯೂ ಹೇಳಿಲ್ಲ.

ರಾಜಕೀಯಕ್ಕೆ ಪ್ರವೇಶಿಸಿದ ನಂತರ ನಡೆದ ಮೊದಲ ಮಹಾಸಮ್ಮೇಳನದಲ್ಲಿ ವಿಜಯ್ ನೆರೆಯ ರಾಜ್ಯಗಳ ನಾಯಕರ ಬಗ್ಗೆ ಈ ರೀತಿ ಮಾತನಾಡಿದ್ದರೆ, ಅದನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ, ವಿಜಯ್ ಕೆಸಿಆರ್ ಮತ್ತು ಜಗನ್ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎಂದು ಯಾವುದೇ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ. ಅಲ್ಲದೆ ಅವರು ಆಂಧ್ರ ಅಥವಾ ತೆಲಂಗಾಣದ ಬಗ್ಗೆ ಮಾತನಾಡುವ ಪ್ರಮೆಯವೇ ಉದ್ಬವಿಸುವುದಿಲ್ಲ. ಯಾಕೆಂದರೆ ನಟ ವಿಜಯ್ ತಮ್ಮ ರಾಜಕೀಯ ಪ್ರವೇಶವನ್ನು ಮಾಡುತ್ತಿರುವುದು ತಮಿಳುನಾಡಿನಲ್ಲಿ.
ಒಟ್ಟಾರೆಯಾಗಿ ಹೇಳುವುದಾದರೆ, ನಟ ವಿಜಯ್ ತಮ್ಮ ಮಹಾಸಮ್ಮೇಳನ ಸಭೆಯಲ್ಲಿ ಕೆಸಿಆರ್ ಮತ್ತು ಜಗನ್ ಅವರನ್ನು ಟೀಕಿಸಿ ಭಾಷಣ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಂತಕ ಬಿಷ್ಣೋಯ್ ಪರ ಹೇಳಿಕೆ ನೀಡಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ?

