FACT CHECK | ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್’ ಇದ್ದಂತೆ ಅಂದ್ರಾ ಡೊನಾಲ್ಡ್ ಟ್ರಂಪ್?
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್ ಎಂದು ಟೀಕಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಟ್ರಂಪ್ ಗಾಂಧಿಯವರನ್ನು ಟೀಕಿಸುತ್ತಾ… ‘ಭಾರತ ದೇಶಕ್ಕೆ ದ್ರೋಹ ಮಾಡುವ’ ಮತ್ತು ‘ಜಾರ್ಜ್ ಸೊರೊಸ್‌ನಂತಹ ಭಾರತದ ವಿರೋಧಿಗಳೊಂದಿಗೆ ಸಹವಾಸ ಮಾಡುವ ಜನರುʼ ನಿಜವಾಗಿಯೂ ಅಮೆರಿಕವನ್ನು ಪ್ರಾಮಾಣಿಕವಾಗಿ ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ರಾಹುಲ್ ಗಾಂಧಿ ಕುರಿತು ಟ್ರಂಪ್ ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ವೈರಲ್ ಚಿತ್ರದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಟ್ರಂಪ್ ಅವರ ಹೆಸರಿನ ಅನಧಿಕೃತ “@thedonaldtrumph” ಎಂಬ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ಗಮನಿಸಲಾಗಿದೆ. ವಾಸ್ತವವಾಗಿ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ X ಖಾತೆಯ ಹೆಸರು @realDonaldTrump ಆಗಿದೆ.


“@thedonaldtrumph” Xನ ಪ್ರೊಫೈಲ್‌ನ್ನು ಹುಡುಕಿದಾಗ, “ಯುನೈಟೆಡ್ ಸ್ಟೇಟ್ಸ್‌ನ 47 ನೇ ಅಧ್ಯಕ್ಷ” “ಅಭಿಮಾನಿ ಖಾತೆ” ಎಂದು ವಿವರಿಸಿರುವ ಖಾತೆಯೊಂದು ಲಭ್ಯವಾಗಿದೆ. ಆ ಖಾತೆಯನ್ನು ನಿರ್ವಹಿಸುವವರ ಹೆಸರು @AshwiniSahaya ಆಗಿದೆ.

2024ರ ನವೆಂಬರ್ 06ರಿಂದ ವಿಡಂಬನೆ ಖಾತೆಯಲ್ಲಿ ಟ್ರಂಪ್ ರಾಹುಲ್ ಗಾಂಧಿಯನ್ನು “ಸೊರೊಸ್ ಏಜೆಂಟ್” ಎಂದು ಕರೆದಿದ್ದಾರೆ ಎಂದು ಹೇಳಿಕೊಳ್ಳುವ X ಪೋಸ್ಟ್ ಲಭ್ಯವಾಗಿವೆ.
Thank you Indian soros agent @RahulGandhi, but let’s be clear- someone who betrays their own country, aligning with anti-India elements like @georgesoros to undermine his homeland, cannot truly support America or my vision. Best to focus on your own affairs, Rahul. https://t.co/1MrCiUwWQ5
— Donald J. Trump Parody (@thedonaldtrumph) November 6, 2024
ಅಶ್ವಿನಿ ಶ್ರೀವಾಸ್ತವ (@AshwiniSahaya) ಎಂಬುವವರು @thedonaldtrumph ವಿಡಂಬನೆ ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎಂದು 2024ರ ನವೆಂಬರ್ 06ರಂದು X ಪೋಸ್ಟ್‌ನಲ್ಲಿ ಉಲ್ಲೀಖಿಸಲಾಗಿದೆ. ಬಿಜೆಪಿ ಐಟಿ ಸೆಲ್ ಖಾತೆಯನ್ನು ನಡೆಸುತ್ತಿದೆ ಎಂಬ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಐಟಿ ಸೆಲ್‌ನ ಭಾಗವಲ್ಲ” ಎಂದು ಹೇಳಿದ್ದಾರೆ.
Hello, everyone! How are my replies from @thedonaldtrumph to Narendra Modi, Rahul Gandhi, @JustinTrudeau & Khalistanis?
Some people are claiming this account @thedonaldtrumph is run by the BJP IT Cell, but I’m definitely not part of the IT Cell.
Yet, I think I’ve done more…
— Ashwini Shrivastava (@AshwiniSahaya) November 6, 2024
ಆದರೆ, ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಟ್ರಂಪ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮತ್ತು ಅವರ ಉತ್ಸಾಹಭರಿತ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನು ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಡೊನಾಲ್ಡ್ ಟ್ರಂಪ್ ಅವರು ರಾಹುಲ್ ಗಾಂಧಿಯವರ ಅಭಿನಂದನಾ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ‘ಸೊರೊಸ್ ಏಜೆಂಟ್’ ಎಂದು ಟೀಕಿಸಿದ್ದಾರೆ ಎಂಬುದು ಸುಳ್ಳು. ಟ್ರಂಪ್ ಹೆಸರಿನ ಬೇರೆ ಎಕ್ಸ್ ಖಾತೆಯ ಮೂಲಕ ಟ್ರಂಪ್ ಅಭಿಮಾನಿ ಮಾಡಿದ ಟ್ವೀಟ್ ಪೋಸ್ಟರ್‌ನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬುಲ್ಡೋಜರ್ ಮೇಲೆ ನಿಂತು ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ಮಾಡಿದ್ರಾ?

