FACT CHECK | ಹಿಂದೂ ದೇವಸ್ಥಾನವನ್ನು ಮಸೀದಿಯನ್ನಾಗಿ ಪರಿವರ್ತಿಸಿಲಾಗಿದೆಯೇ?

ಹಿಂದೂ ದೇವಸ್ಥಾನದ ಸ್ಥಳಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಹಲವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ಸ್ಲೀಪ್ ಸ್ಟಿಲ್ ಹಿಂದೂಗಳು ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಇತ್ತೀಚೆಗೆ ಸರ್ಕಾರದ ಸಹಾಯದಿಂದ ಮಸೀದಿಯಾಗಿ ಪರಿವರ್ತಿಸಿದ್ದಾರೆ.”  ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮವಾದ ಎಕ್ಸ್​ನಲ್ಲಿ ಪೋಸ್ಟ್​ಅನ್ನು ಹಂಚಿಕೊಳ್ಳಲಾಗುತ್ತಿದೆ.

 

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ಕೀವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ,  ಮೇ 3, 2024 ರಂದು ಇದೇ ಹೇಳಿಕೆಯೊಂದಿಗೆ ಎಕ್ಸ್ ಖಾತೆಯಲ್ಲಿ ಒಬ್ಬರು ಮಾಡಿದ ಪೋಸ್ಟ್​ಗೆ ತಮಿಳುನಾಡು ಸರ್ಕಾರದ ಫ್ಯಾಕ್ಟ್ ಚೆಕ್ ತಂಡ ಈ ಸುದ್ದಿ ನಕಲಿ ಎಂದು ಉತ್ತರಿಸಿರುವುದು ಲಭ್ಯವಾಗಿದೆ.

ತಮಿಳುನಾಡು ಸರ್ಕಾರವು ನೀಡಿದ ವಿವರಣೆಯಲ್ಲಿ, “ವಿಡಿಯೋವು ವಾಸ್ತವವಾಗಿ ತಿರುನಲ್ವೇಲಿಯ ತೆಂಕಶಿಯಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಪೊಟ್ಟಲ್ಪುದೂರಿನ ‘ಮೊಹೈದೀನ್ ಅಂಡವರ್’ ದರ್ಗಾವನ್ನು ತೋರಿಸುತ್ತದೆ. ದರ್ಗಾವು ಇಲ್ಲಿನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ, ಇದು ದ್ರಾವಿಡ ವಾಸ್ತುಶಿಲ್ಪ ಪರಂಪರೆಯಿಂದ ಪ್ರೇರಿತವಾಗಿದೆ. ದರ್ಗಾವನ್ನು 17 ನೇ ಶತಮಾನದಲ್ಲಿ (ಕ್ರಿ.ಶ. 1674) ‘ಮೊಹಿದೀನ್ ಅಬ್ದುಲ್ ಖಾದಿರ್ ಜಿಲಾನಿ’ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು’’ ಎಂಬ ಮಾಹಿತಿ ಇದೆ.

ತಮಿಳುನಾಡು ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಕೂಡ ನಾವು ಈ ದರ್ಗಾದ ಬಗ್ಗೆ ವಿವರಗಳನ್ನು ಪಡೆದುಕೊಂಡಿದ್ದೇವೆ. (https://www.tamilnadutourism. com/attractions/dargas/ pottalpudur-dargah.php) ಪೊಟ್ಟಲ್ಪುದೂರ್ ದರ್ಗಾವು ಹಜರತ್ ಸೈಯದ್ ಮುಹಮ್ಮದ್ ಶಾಗೆ ಸಮರ್ಪಿತವಾದ ತಮಿಳುನಾಡಿನ ಪ್ರಸಿದ್ಧ ಇಸ್ಲಾಮಿಕ್ ದೇವಾಲಯವಾಗಿದೆ. ಹಜರತ್ ಸೈಯದ್ ಮುಹಮ್ಮದ್ ಷಾ ಒಬ್ಬ ಶ್ರೇಷ್ಠ ಸೂಫಿ ಸನ್ಯಾಸಿ ಎಂದು ಜನರು ನಂಬುತ್ತಾರೆ. ದರ್ಗಾವನ್ನು ಯಾವಾಗ ನಿರ್ಮಿಸಲಾಯಿತು ಎಂಬುದನ್ನೂ ವೆಬ್‌ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

ಸೂಫಿ ಸಂತ ಹಜರತ್ ಸೈಯದ್ ಮೊಹಮ್ಮದ್ ಷಾ ಇರಾನ್‌ನಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ಪೊಟ್ಟಲ್‌ಪುದೂರು ಗ್ರಾಮವನ್ನು ತಲುಪಿ ಜನರಿಗೆ ಇಸ್ಲಾಂ ಧರ್ಮವನ್ನು ಬೋಧಿಸಲು ನಿರ್ಧರಿಸಿದರು ಎಂದು ನಂಬಲಾಗಿದೆ. ಅವನ ಮರಣದ ನಂತರ, ಜನರು 1674 ರಲ್ಲಿ ಸಮಾಧಿಯನ್ನು ಸ್ಥಾಪಿಸಿದರು. ಮಸೀದಿಯಲ್ಲಿರುವ ಸಮಾಧಿಗೆ ಇಂದಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಕ್ಷಿಣದಲ್ಲಿ ಅನೇಕ ದರ್ಗಾಗಳನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಅದರಂತೆ ಈ ದರ್ಗಾ ಕೂಡ ನಿರ್ಮಾಣವಾಗಿದೆ ಎಂದು ವಾಸ್ತು ತಜ್ಞರು ಹೇಳಿದ್ದಾರೆ.

ನಾವು Pottalpudur Dargah – Tamilnadu ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಸರ್ಚ್ ಮಾಡಿದಾಗ, ಆಗ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಲಭ್ಯವಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು. ವಾಸ್ತವವಾಗಿ ಇದು ಮೂಲದಲ್ಲಿ ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೇ ಜಾಗದಲ್ಲಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ವಕ್ಫ್ ಮಸೂದೆ ವಿರುದ್ಧ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights