FACT CHECK | ಬಾಂಗ್ಲಾ ಹಿಂದೂಗಳನ್ನು ಉಳಿಸಿ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ನಿಜವಾದ ಚಿತ್ರವಲ್ಲ
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಸಮುದಾಯದ ಮೇಲೆ ಶೋಷಣೆ ಮತ್ತು ಹಿಂಸಾಚಾರದ ಘಟನೆಗಳ ವರದಿಗಳಾಗುತ್ತಿರುವ ಬೆನ್ನಲ್ಲೆ, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, “ಬಾಂಗ್ಲಾದೇಶದ ಹಿಂದೂಗಳನ್ನು ಉಳಿಸಿ” ಎಂದು ಬರೆದಿರುವ ಫಲಕವನ್ನು ಹಿಡಿದ ಇಬ್ಬರು ಮಕ್ಕಳು ಅಳುತ್ತಿರುವ ಫೋಟೊವನ್ನು ಹಂಚಿಕೊಳ್ಳಲಾಗಿದೆ.

ಈ ಹಿನ್ನಲೆಯಲ್ಲಿ AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್ನೊಂದಿಗೆ ಈ ಫೋಟೋವನ್ನು ಪರಿಶೀಲಿಸಿದಾಗ, ಇದರಲ್ಲಿ AI ನಿಂದ ಈ ಫೋಟೋವನ್ನು ರಚಿಸುವ ಸಂಭವನೀಯತೆ 99.9 ಪ್ರತಿಶತ ಎಂದು ಹೇಳಲಾಗಿದೆ. ಇನ್ನಷ್ಟು ಖಚಿತ ಮಾಹಿತಿಗಾಗಿ AI ಇಮೇಜ್ ಡಿಟೆಕ್ಷನ್ ಟೂಲ್ ಸೈಟ್ ಇಂಜಿನ್ನೊಂದಿಗೆ ನಾವು ಈ ಫೋಟೋವನ್ನು ಪರಿಶೀಲಿಸಿದ್ದೇವೆ. ಇಲ್ಲಿ ಕೂಡ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 99 ಪ್ರತಿಶತ ಎಂದು vishvas news ವರದಿಯಲ್ಲಿ ಹೇಳಿದೆ.

ಖಾಸಗಿ ವೆಬ್ಸೈಟ್ ಕೂಡ ಈ ಕುರಿತು ವರದಿ ಮಾಡಿದ್ದು, ಅವರು ಎಐ ತಜ್ಞ ಅಂಶ್ ಮೆಹ್ರಾ ಬಳಿ ಈ ಫೋಟೋದ ಬಗ್ಗೆ ಪಡೆದ ಮಾಹಿತಿಯನ್ನು ಹಂಚಿಕೊಂಡಿದೆ. ಅಂಶ್ ಮೆಹ್ರಾ ಕೂಡ ಈ ವೈರಲ್ ಫೋಟೋವನ್ನು ಎಐ ರಚಿಸಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಮಕ್ಕಳ ಈ ಫೋಟೋವನ್ನು AI ನಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಭಾರತದ ಕಳವಳವನ್ನು ಢಾಕಾಗೆ ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಅವರೊಂದಿಗಿನ ಸಭೆಯಲ್ಲಿ ಮಿಶ್ರಿ ಅವರು ಬಾಂಗ್ಲಾದಲ್ಲಿನ ಧಾರ್ಮಿಕ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವನ್ನು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಮಕ್ಕಳ ಈ ಫೋಟೋವನ್ನು AI ನಿಂದ ಕೃತಕವಾಗಿ ರಚಿಸಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಿಂದೂಗಳಿಗೆ ಬೆದರಿಕೆ ಹಾಕಿದ್ರಾ ರಾಹುಲ್ ಗಾಂಧಿ?

