FACT CHECK | ಬಾಂಗ್ಲಾದೇಶದ ಹಿಂದೂ ಬಾಲಕನ ಮೇಲೆ ರಣಹದ್ದು ದಾಳಿ ಮಾಡುತ್ತಿದೆ ಎಂದು AI ನಿಂದ ರಚಿಸಿದ ಫೋಟೊ ಹಂಚಿಕೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದು,  ಈ ನಡುವೆ ಪಟ್ಟ ಬಾಲಕನ ಮೇಲೆ ರಣಹದ್ದುಗಳು ದಾಳಿ ನಡೆಸುತ್ತಿರುವ ಚಿತ್ರವೊಂದು ವೈರಲ್ ಆಗುತ್ತಿದೆ. ಈ ಫೋಟೋವನ್ನು  ಬಾಂಗ್ಲಾದೇಶದ ಹಿಂದೂಗಳ ಮೇಲೆ ಹಿಂಸೆ ನಡೆಯುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ʼಜಾಗೋ ಭಾರತ್ ಜಾಗೋʼ ಎಂಬ ಬಳಕೆದಾರರು ವೈರಲ್ ಫೋಟೋವನ್ನು ಹಂಚಿಕೊಂಡಿದ್ದು,  “ಚಿಂತಿಸಬೇಡಿ. ಆರಾಮವಾಗಿ ತಿನ್ನಿರಿ. ನಾವು ಸತ್ತ ಸಮುದಾಯವಾಗಿದ್ದೇವೆ. ನಾವೆಲ್ಲಿಯೂ ಓಡಿ ಹೋಗೋದಿಲ್ಲ. ಇಲ್ಲಿ ಯಾರೂ ಸುಳಿಯುವುದಿಲ್ಲ, ಇಲ್ಲಿ ಯಾರೂ ಧ್ವನಿ ಎತ್ತಲು ಯಾರೂ ಬರುವುದಿಲ್ಲ #ಬಾಂಗ್ಲಾದೇಶಿ ಹಿಂದೂಗಳು” ಎಂದು ಉಲ್ಲೇಖಿಸಿದ್ದಾರೆ.

ಹಾಗಿದ್ದರೆ ನಿಜವಾಗಿಯೂ ಹಿಂದೂ ಬಾಲಕನ ಮೇಲೆ ರಣಹದ್ದೊಂದು ದಾಳಿ ನಡೆಸುತ್ತಿರುವ ಚಿತ್ರವವು ನಿಜವಾಗಿಯೂ ನೈಜ ಚಿತ್ರವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಇದರ ಸತ್ಯಾಂಶವನ್ನು ತಿಳಿಯಲು ವೈರಲ್ ಫೋಟೋದಲ್ಲಿ ಮಗುವಿನ ಕಾಲ್ಬೆರಳುಗಳನ್ನು ಗಮನಿಸಿದಾಗ ಅವುಗಳು ವಿಚಿತ್ರವಾಗಿರುವುದು ನೋಡಬಹುದು. ಹೆಬ್ಬೆರಳಿನೊಂದಿಗೆ ಬೇರೆ ಬೆರಳು ಅಂಟಿಕೊಂಡಂತೆ ಕಾಣುತ್ತಿದ್ದು ಮತ್ತು ರಣಹದ್ದುಗಳ ಕಣ್ಣುಗಳು ಕೂಡ ವಿಚಿತ್ರವಾಗಿರುವುದನ್ನು ಕಾಣುವಾಗ, ಈ ವಿಕೃತಿಗಳು ಸಾಮಾನ್ಯವಾಗಿ ಎಐನಿಂದ ರಚಿಸಿದಾಗ ಆಗುತ್ತವೆ. ಹಾಗಾಗಿ ಈ ವೈರಲ್ ಫೋಟೋವನ್ನು AI ನಿಂದ ರಚಿಸಲಾಗಿದೆ ಎಂದು ಅಂದಾಜಿಸಬಹುದು.

ಈ ಬಗ್ಗೆ ಪರಿಶೀಲನೆ ನಡೆಸಲು ನಾವು AI-ಚಾಲಿತ ಮಲ್ಟಿಮೀಡಿಯಾ ಸ್ಕ್ಯಾನಿಂಗ್ ಉಪಕರಣದ ಸಹಾಯದಿಂದ ಸರ್ಚ್ ಮಾಡಿ, ಜೊತೆಗೆ ಹೈವ್ ಮಾಡರೇಶನ್ ಸಹಾಯದಿಂದ ವೈರಲ್ ಫೋಟೊದ ಸರ್ಚ್ ನಡೆಸಿದಾಗ ಇದು 80 ಪ್ರತಿಶತ AI ರಚಿತ ಎಂಬುದು ಸಾಬೀತಾಗಿದೆ.

AI ನಿಂದ ರಚಿತವಾದ ಚಿತ್ರಗಳನ್ನು ಪತ್ತೆ ಮಾಡುವ ಮತ್ತೊಂದು ಸಾಧನವಾದ True Mediaದ ಮೂಲಕ ಸರ್ಚ್ ಮಾಡಿದಾಗ, ಇದು AIನಿಂದ ರಚಿಸಲಾಗಿದೆ ಎಂಬುದು ದೃಢವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ಇದನ್ನು AIನಿಂದ (ಕೃತಕ ಬುದ್ಧಿಮತ್ತೆ) ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

AI ಇಮೇಜ್‌ಗಳನ್ನು ಮಾಡುವ ಭಾರ್ಗವ್ ವಲೇರಾರವರು, “AI ನಿಂದ ಈ ಚಿತ್ರಗಳನ್ನು ರಚಿಸುವುದು ತುಂಬಾ ಸುಲಭ ಎಂದು ಹೇಳಿದ್ದಾರೆ. ಇವುಗಳನ್ನು ಆನ್‌ಲೈನ್ ಪರಿಕರಗಳನ್ನು ಬಳಸಿ ಬಹಳ ಸುಲಭವಾಗಿ ತಯಾರಿಸಬಹುದು. ಚಿತ್ರದಲ್ಲಿ ಬಾಲಕನ ಬೆರಳುಗಳನ್ನು ನೋಡಿದಾಗ, ಈ ಚಿತ್ರವನ್ನು AI ಸಹಾಯದಿಂದ ಮಾಡಲಾಗಿದೆ ಎಂದು ಸುಲಭವಾಗಿ ತಿಳಿದು ಬರುತ್ತದೆ” ಎಂದು ಅವರು ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪುಟ್ಟ ಬಾಲಕನ ಮೇಲೆ ರಣಹದ್ದುಗಳು ದಾಳಿ ಮಾಡುತ್ತಿರುವ ವೈರಲ್ ಚಿತ್ರ ನಿಜವಲ್ಲ. ಇದನ್ನು ಕೃತಕ ಬುದ್ಧಿಮತ್ತೆ (AI) ಉಪಕರಣದ ಸಹಾಯದಿಂದ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಬಾಂಗ್ಲಾದೇಶದ ಸೇನೆ ಎಚ್ಚರಿಕೆ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights