FACT CHECK | ಫುಡ್ ಡೆಲಿವರಿ ಯುವತಿಯ ಮೇಲೆ ಅತ್ಯಾಚಾರ ಎಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಹಂಚಿಕೆ
ಆನ್‌ಲೈನ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಆಹಾರದ ಆರ್ಡರ್ ನೀಡಲು ಹೋದಾಗ ಕೆಲ ಪುರುಷರು ಅತ್ಯಾಚಾರವೆಸಗುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
View this post on Instagram
ಪೋಸ್ಟ್ ಮಾಡಲಾದ ದೃಶ್ಯಗಳಲ್ಲಿ, ಆನ್‌ಲೈನ್‌ನಲ್ಲಿ ಆಹಾರ ಡೆಲಿವರಿ ಮಾಡುವ ಯುವತಿಯು ತನ್ನ ಆಹಾರ ಆರ್ಡರ್‌ಅನ್ನು ಕೊಡಲು ಬಂದಾಗ, ಬಿಯರ್ ಬಾಟಲಿಯನ್ನು ಹಿಡಿದಿರುವ ವ್ಯಕ್ತಿ ಬಾಗಿಲು ತೆರೆದು, ಆರ್ಡರ್ ತೆಗೆದುಕೊಂಡ ನಂತರ ಹಣ ಕೊಡಲು ನಿರಾಕರಿಸುತ್ತಾನೆ, ಯುವತಿ ಹಣ ಕೊಡುವಂತೆ ಬೇಡುತ್ತಾಳೆ, ಆಗ ಮತ್ತೊಬ್ಬ ವ್ಯಕ್ತಿ ಹೊರ ಬಂದು ಯುವತಿಯನ್ನು ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾನೆ. ಕೆಲ ಸಮಯದ ನಂತರ ಯುವತಿಯನ್ನು ಬಾಗಿಲು ತೆಗೆದು ಮನೆಯಿಂದ ಹೊರಗೆ ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ನೋಡಬಹುದು.
ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ, ಪೋಸ್ಟ್‌ನಲ್ಲಿ ಪ್ರತಿಪಾಸಿರುವಂತೆ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆಯೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯೆತೆಯನ್ನು ಪರಿಶೀಲಿಸಲು ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 02 ಜನವರಿ 2025 ರಂದು YouTube ಚಾನೆಲ್ ‘3RD EYE’ ಹಂಚಿಕೊಂಡ ಅದೇ ತುಣುಕಿನ ಪೂರ್ಣ ವಿಡಿಯೋ ಲಭ್ಯವಾಗಿದೆ.
ವಿಡಿಯೋದ ವಿವರಣೆಯಲ್ಲಿ, ಇದು ಸ್ಕ್ರಿಪ್ಟ್ ವೀಡಿಯೊ ಎಂದು ಸ್ಪಷ್ಟಪಡಿಸಲಾಗಿದೆ ಮತ್ತು ಈ ವೀಡಿಯೊವನ್ನು ಜನರಲ್ಲಿ ಜಾಗೃತಿ ಮೂಡಿಸಲು ಮಾಡಲಾಗಿದೆ. ಈ ವಿಡಿಯೋದ ಕೊನೆಯಲ್ಲಿ ಬರುವ ಡಿಸ್‌ಕ್ಲೈಮರ್‌ನಲ್ಲಿ ನೋಡಬಹುದು. ಇದರ ಆಧಾರದ ಮೇಲೆ, ಈ ವೀಡಿಯೊದಲ್ಲಿನ ಘಟನೆಯು ನಿಜವಾಗಿ ಸಂಭವಿಸಿಲ್ಲ ಎಂದು ನಾವು ತೀರ್ಮಾನಿಸಬಹುದು. ‘3RD EYE’ ಪ್ರಕಟಿಸಿದ ಇನ್ನಷ್ಟು ಸ್ಕ್ರಿಪ್ಟ್ ವೀಡಿಯೊಗಳನ್ನು ಇಲ್ಲಿ ಕಾಣಬಹುದು.
https://www.youtube.com/watch?v=PrNXenCNlcc
ವಿಡಿಯೋದಲ್ಲಿ ತೋರಿಸಿರುವುದು ನಿಜವಾದ ಘಟನೆಯಲ್ಲ. ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ. ಈ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ‘3RD EYE’ 02 ಜನವರಿ 2025 ರಂದು ಹಂಚಿಕೊಂಡಿದೆ. ಈ ವೀಡಿಯೊದ ವಿವರಣೆಯಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

“3rd eye ಚಾನಲ್ 2.9 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಚಾನೆಲ್‌ನಲ್ಲಿ ಇದೇ ರೀತಿಯ ಹಲವಾರು ವೀಡಿಯೊಗಳಿವೆ. ಇದಲ್ಲದೆ, ಪ್ರತಿಯೊಂದು ವೀಡಿಯೊವು ಕೇವಲ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಮತ್ತು ಅದನ್ನು ರೆಕಾರ್ಡ್ ಮಾಡಲಾಗಿದೆ ಎಂದು ಚಾನೆಲ್ ಸ್ಪಷ್ಟವಾಗಿ ಘೋಷಿಸುತ್ತದೆ. ಈ ಹಿಂದೆಯೂ ಇಂತಹ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಂತಹ ವಿಡಿಯೋಗಳನ್ನು ಏನ್‌ಸುದ್ದಿ.ಕಾಂ ಪರಿಶೀಲಿಸಿ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆನ್‌ಲೈನ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಯುವತಿಯೊಬ್ಬಳು ಫುಡ್ ಆರ್ಡರ್ ನೀಡಲು ಹೋದಾಗ ಕೆಲವರು ಅತ್ಯಾಚಾರ ಎಸಗಿದ್ದಾರೆ ಎಂದು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2015ರ ನೇಪಾಳದ ಭೂಕಂಪನದ ಹಳೆಯ ವಿಡಿಯೋವನ್ನು ಟಿಬೆಟ್‌ನದ್ದು ಎಂದು ತಪ್ಪಾಗಿ ಹಂಚಿಕೆ

