FACT CHECK | ಮಹಾಕುಂಭದಲ್ಲಿ ಸಾಧುವೊಬ್ಬರು ಬೆಂಕಿ ಸ್ನಾನ ಮಾಡಿದ್ದಾರೆ ಎಂದು ಸಾಕ್ಷ್ಯಚಿತ್ರದ ವಿಡಿಯೋ ಹಂಚಿಕೆ

ಮಹಾ ಕುಂಭಮೇಳ ಭಾರತದಲ್ಲಿ ನಡೆಯುವ ಪ್ರಸಿದ್ಧ ಧಾರ್ಮಿಕ ಉತ್ಸವ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ದೇಶ, ವಿದೇಶಗಳಿಂದಲೂ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಜನವರಿ 13,  2025 ರಂದು, ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ಪ್ರಾರಂಭವಾಗಿದೆ. ಕುಂಭಮೇಳದಲ್ಲಿ ಹೆಚ್ಚು ಕಂಡು ಬರುವವರು ನಾಗಸಾಧುಗಳು. ಮೈತುಂಬಾ ವಿಭೂತಿ ಬಳಿದುಕೊಂಡು, ಕುತೂಹಲ ಮೂಡಿಸುತ್ತಾರೆ. ಕೆಲವು ಸಾಧು ಸಂತರು ತಮ್ಮ ವಿಶಿಷ್ಟ ಗುರುತಿನಿಂದಾಗಿ ಅವರು ಜನರ ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಮಹಾಕುಂಭದಲ್ಲಿ ಸಂತರೊಬ್ಬರು ಅಗ್ನಿ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಬೆಂಕಿ ಹತ್ತಿಕೊಂಡ ಕಟ್ಟಿಗೆ ಮೇಲೆ ಮಲಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂತ ಬೆಂಕಿಯಲ್ಲಿ ಮಲಗಿರುವ ಮೂರು ನಿಮಿಷಗಳ ವಿಡಿಯೋವನ್ನು ಜನವರಿ 2025 ರ ಎಕ್ಸ್ ಪೋಸ್ಟ್(ಆರ್ಕೈವ್) ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ, ಆ ಸಂತ ಸುಡುವ ಕಟ್ಟಿಗೆಗಳ ಮೇಲೆ ಮಲಗುತ್ತಾರೆ ಮತ್ತು ಅಲ್ಲಿಂದ ಎದ್ದು ನಿಲ್ಲುತ್ತಾರೆ. ಈ ಪೋಸ್ಟ್ ನಲ್ಲಿ “ಮಹಾಕುಂಭದಲ್ಲಿ ಮಹಾಶಾಂತ್ ಅವರ ಅಗ್ನಿ ಸ್ನಾನ …. ಇದನ್ನು ಯಾರು ನೋಡ್ತಾರೋ ನೋಡ್ತಾ ಇರಿ…” ಎಂದಿದೆ.

ಮತ್ತೊಂದು ಪೋಸ್ಟ್ನಲ್ಲಿ (ಆರ್ಕೈವ್) ವೈರಲ್ ವಿಡಿಯೋ ಜೊತೆ ಇರುವ ಹೇಳಿಕೆಯಲ್ಲಿ“ಪ್ರಯಾಗ್ರಾಜ್ #MahaKumbh2025 (ಮಹಾಕುಂಭ) ಕ್ಕೆ ಬಂದ ಸಿದ್ಧ ಸಂತ ಮಹಾರಾಜ್ ಗಂಗಾ ಮಾತೆಯಲ್ಲಿ ಸ್ನಾನ ಮಾಡುವ ಮೊದಲು ಬೆಂಕಿಯಲ್ಲಿ ಸ್ನಾನ ಮಾಡಿದರು. ಈ ಅದ್ಭುತ ದೃಶ್ಯವನ್ನು ನೋಡಿದ ಬಿಬಿಸಿಯ ಪತ್ರಕರ್ತ ಭಾವಪರವಶರಾದರು. ನಿನ್ನೆ, ಬಿಬಿಸಿ ಇದನ್ನು ತನ್ನ ಚಾನೆಲ್ ನಲ್ಲಿ ಪ್ರಸಾರ ಮಾಡಿತು.” ಎಂದಿದೆ. ಇಂತಹ ಇತರ ಪೋಸ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮಹಾಕುಂಭದಲ್ಲಿ ಸಂತರೊಬ್ಬರು ಅಗ್ನಿ ಸ್ನಾನ ಮಾಡಿದ್ದಾರೆ ಅದನ್ನು BBC ತಂಡ ವರದಿ ಮಾಡಿದೆ ಎಂಬ ಪೋಸ್ಟ್‌ಅನ್ನು ಪರಿಶೀಲಿಸಲು, ಕೀವರ್ಡ ಗಳನ್ನು ಬಳಸಿ ಗೂಗಲ್‌ ನಲ್ಲಿ ಸರ್ಚ್ ಮಾಡಿದಾಗ, ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ.

ನಂತರ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 23, 2011 ರಂದು ಪ್ರಕಟಿಸಿದ ಅದೇ ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವುದು ಕಂಡುಬಂದಿದೆ.

ಈ YouTube ವೀಡಿಯೊವನ್ನು 23 ಮಾರ್ಚ್ 2011 ರಂದು ‘ದಿ ಫೈರ್ ಯೋಗಿ’ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಯೂಟ್ಯೂಬ್ ವೀಡಿಯೊದ ವಿವರಣೆಯಲ್ಲಿ, ‘ದಿ ಫೈರ್ ಯೋಗಿ’ ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಇದನ್ನು ಮಾಡಲು ಸಾಧ್ಯವಾಗುವ ಯೋಗಿಯ ಪ್ರಯಾಣದ ಕುರಿತಾದ ಸಾಕ್ಷ್ಯಚಿತ್ರವಾಗಿದೆ.

Adhbhut Akalpniye Avishwasaniye: Rambhau Swami: The Fire Yogi of ...

‘ದಿ ಫೈರ್ ಯೋಗಿ’ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ ಈ ಸಾಕ್ಷ್ಯಚಿತ್ರ ತಂಜಾವೂರಿನಲ್ಲಿ ಯೋಗಿ ರಾಮಬಾಹು ಸ್ವಾಮಿ ನಡೆಸಿದ ಅಪರೂಪದ ಅಗ್ನಿ ಆಚರಣೆಗೆ ಸಂಬಂಧಿಸಿದೆ. 63 ವರ್ಷದ ಯೋಗಿ ಕಳೆದ 45 ವರ್ಷಗಳಲ್ಲಿ 1,000 ದಿನಗಳಿಗಿಂತ ಹೆಚ್ಚು ಕಾಲ ಈ ಅಗ್ನಿ ಆಚರಣೆಯನ್ನು ಮಾಡಿದ್ದಾರೆ ಮತ್ತು ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಇದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿರುವುದನ್ನು ಸಹ ಕೇಳಬಹುದು.

2008 ಮತ್ತು 2009 ರಲ್ಲಿ ಹಂಚಿಕೊಳ್ಳಲಾದ ಇತರ ಅನೇಕ ಯೂಟ್ಯೂಬ್ ವೀಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಇದನ್ನು ‘ದಿ ಫೈರ್ ಯೋಗಿ’ ಎಂಬ ಸಾಕ್ಷ್ಯಚಿತ್ರ ಎಂದು ವಿವರಿಸಲಾಗಿದೆ. ವೀಡಿಯೋದ ದೀರ್ಘ ಆವೃತ್ತಿಯಲ್ಲಿ, ಇದು ದಕ್ಷಿಣ ಭಾರತದ ತಂಜಾವೂರಿನಿಂದ ಬಂದಿದೆ ಎಂದು ಹೇಳಲಾಗಿದೆ. ‘ದಿ ಫೈರ್ ಯೋಗಿ’ ಎಂಬ 47 ನಿಮಿಷಗಳ ಸಾಕ್ಷ್ಯಚಿತ್ರದಿಂದ ಈ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ ಎಂದು ವೀಡಿಯೋದ ವಿವರಣೆಯಲ್ಲಿ ತಿಳಿಸಲಾಗಿದೆ.

Fact Check: ಸಾಧುವೊಬ್ಬರು ಬೆಂಕಿಯಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದ ವೈರಲ್ ವಿಡಿಯೋ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದಲ್ಲ!

ತನಿಖೆಯ ನಂತರ, ಮೈಕ್ ವಾಸನ್ ನಿರ್ದೇಶನದ ‘ದಿ ಫೈರ್ ಯೋಗಿ – ಎ ಸ್ಟೋರಿ ಆಫ್ ಎ ಎಕ್ಸ್ಟ್ರಾರ್ಡಿನರಿ ಜರ್ನಿ’ ಎಂಬ ಶೀರ್ಷಿಕೆಯ ಈ ಸಾಕ್ಷ್ಯಚಿತ್ರದ ಡಿವಿಡಿ ಅಮೆಜಾನ್ ಮತ್ತು ಇ-ಬೇ ವೆಬ್ಸೈಟ್ನಲ್ಲಿಯೂ ಲಭ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಡಿವಿಡಿಯ ಹಿಂಭಾಗದಲ್ಲಿ ಬರೆದಿರುವ ಮಾಹಿತಿಯಲ್ಲಿ, ಅಗ್ನಿ ಯೋಗಿಯ ಹೆಸರನ್ನು ರಾಮಭಾವು ಸ್ವಾಮಿ ಎಂದು ಉಲ್ಲೇಖಿಸಲಾಗಿದೆ.

Fact Check: ಸಾಧುವೊಬ್ಬರು ಬೆಂಕಿಯಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದ ವೈರಲ್ ವಿಡಿಯೋ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದಲ್ಲ!

ತನಿಖೆಯಲ್ಲಿ, ನವೆಂಬರ್ 18, 2009 ರಂದು ಆಜ್ ತಕ್ ಪ್ರಕಟಿಸಿದ ವರದಿಯಲ್ಲಿ ತಂಜಾವೂರು ಅಗ್ನಿ ಯೋಗಿ ರಾಮಭಾವು ಸ್ವಾಮಿಯವರ ವೀಡಿಯೋವನ್ನೂ ನಾವು ನೋಡಿದ್ದೇವೆ. ಈ ವಿಡಿಯೋ ಗುಲ್ಬರ್ಗಾದಿಂದ ಬಂದಿದೆ ಎಂದು ಹೇಳಲಾಗಿದೆ. 2009ರ ನವೆಂಬರ್ 17ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ತಮಿಳುನಾಡಿನ ತಂಜಾವೂರಿನ ರಾಮಭಾವು ಸ್ವಾಮೀಜಿ ಅವರ ಬಗ್ಗೆ ಉಲ್ಲೇಖಿಸಲಾಗಿದೆ.

Fact Check: ಸಾಧುವೊಬ್ಬರು ಬೆಂಕಿಯಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದ ವೈರಲ್ ವಿಡಿಯೋ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದಲ್ಲ!

ಒಟ್ಟಾರೆಯಾಗಿ ಹೇಳುವುದಾದರೆ, ಸಾಧುವೊಬ್ಬರು ಬೆಂಕಿಯಲ್ಲಿ ಮಲಗಿ ಅಗ್ನಿ ಸ್ನಾನ ಮಾಡಿದ್ದಾರೆ, ಅದನ್ನು BBC  ತಂಡ ಚಿತ್ರೀಕರಿಸಿದೆ ಎಂದು ಹೇಳಲಾಗುತ್ತಿರುವ ವಿಡಿಯೋ ಸುಮಾರು 18 ವರ್ಷಗಳಷ್ಟು ಹಳೆಯದಾಗಿದ್ದು, ಕರ್ನಾಟಕದ ಗುಲ್ಬರ್ಗಾದ ದತ್ತಾತ್ರೇಯ ದೇವಸ್ಥಾನ ‘ಶ್ರೀ ರಾಮಭಾವು ಸ್ವಾಮಿ’ ಬೆಂಕಿಯ ಮೇಲೆ ಮಲಗಿ ತಪಸ್ಸು ಮಾಡಿರುವುದರ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಮಾತನಾಡುತ್ತಿರುವ ವಿಡಿಯೋ ದೆಹಲಿಯದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights