FACT CHECK | ಬಿಳಿ ಕುರ್ತಾ ಹಾಗೂ ಮುಸ್ಲಿಂ ಟೋಪಿ ಧರಿಸಿರುವ ರಾಹುಲ್ ಗಾಂಧಿಯ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಳಿ ಕುರ್ತಾ ಹಾಗೂ ಮುಸ್ಲಿಂ ಟೋಪಿ ಧರಿಸಿ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ವಿಡಿಯೋದಲ್ಲಿ ಅವರು ಬಿಳಿ ಕುರ್ತಾ ಮತ್ತು ಟೋಪಿ ಧರಿಸಿರುವುದನ್ನು ತೋರಿಸಲಾಗಿದೆ. X ಮತ್ತು Instagram ನಲ್ಲಿ ಹಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
असलियत pic.twitter.com/FJFryiXxEy
— Dr. Nancy Hardone (@DrNancyHardone) February 4, 2025
ರಾಹುಲ್ ಗಾಂಧಿ ಅವರ ವೈರಲ್ ವಿಡಿಯೋವನ್ನು @DrNancyHardone ಎಂಬ ಎಕ್ಸ್ (ಟ್ವೀಟರ್) ಬಳಕೆದಾರರು ಹಂಚಿಕೊಂಡಿದ್ದಾರೆ. “ಅಸಲಿಯತ್!” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
View this post on Instagram
ಇದೇ ರೀತಿ Paltu Paltann ಎಂಬ Instagram ಖಾತೆಯಲ್ಲೂ ಫೆಬ್ರವರಿ 4 ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಬಿಳಿ ಬಣ್ಣದ ಉಡುಪು ಧರಿಸಿರುವುದನ್ನು ಕಾಣಬಹುದು. ಹಾಗಿದ್ದರೆ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯಾವುದೇ ಸೂಕ್ತ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಬದಲಿಗೆ ವೈರಲ್ ವಿಡಿಯೋದಲ್ಲಿ ರಾಹುಲ್ ಗಾಂಧಿ ಮುಖ ಕೃತಕ ಎನ್ನಿಸುವಂತೆ ಕಾಣಿಸುವುದನ್ನು ನೋಡಬಹುದು.
![]()
ರಾಹುಲ್ ಗಾಂಧಿ ಅವರ ಮುಖವು ಹಲವು ಬಾರಿ ಬದಲಾಗುವುದನ್ನು ಗಮನಿಸಬಹುದು. ಕೆಲವು ಕ್ಷಣಗಳಲ್ಲಿ ಅವರ ಮುಖವು ನೈಜವಾಗಿ ಕಾಣಿಸದೆ ಅಸಹಜವಾಗಿ ಕಾಣಿಸುತ್ತದೆ. ಹಾಗಾಗಿ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಎ ಐ ಸಾಧನಗಳನ್ನು ಬಳಸಿ ಪರಿಶೀಲಿಸಿದಾಗ, ಎ ಐ Image detector ನಲ್ಲಿ ಈ ವಿಡಿಯೋ 70% ಎ ಐ ನಿಂದ ರಚಿಸಿದೆ ಎಂದು ಫಲಿತಾಂಶ ಬಂದಿದೆ. ಇದಲ್ಲದೆ, Decopy.ai ನಲ್ಲಿ ಪರಿಶೀಲಿಸಿದಾಗ ಈ ವಿಡಿಯೋ 91% ನಕಲಿ ಎಂದು ತಿಳಿದುಬಂದಿದೆ.
![]()
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಕೆದಾರರು “ಅಸಲಿಯತ್!” ಎಂದು ಬರೆದಿದ್ದಾರೆ. ಆದರೆ, ವಾಸ್ತವದಲ್ಲಿ ಈ ವಿಡಿಯೋ ಸಂಪೂರ್ಣವಾಗಿ ನಕಲಿ ಎಂಬುದು ಸ್ಪಷ್ಟವಾಗಿದೆ. AI ತಂತ್ರಜ್ಞಾನದಿಂದ ಇಂತಹ ನಕಲಿ ವಿಡಿಯೋಗಳನ್ನು ಸುಲಭವಾಗಿ ರಚಿಸಬಹುದು.
ರಾಹುಲ್ ಗಾಂಧಿ ಬಿಳಿ ಕುರ್ತಾ ಮುಸ್ಲಿಂ ಸಮುದಾಯದ ಫೋಟೋ ಹಾಕಿರುವ ವಿಡಿಯೋ ಎಐ ತಂತ್ರಜ್ಞಾನದಿಂದ ರಚಿಸಲ್ಪಟ್ಟಿದೆ ಎಂದು ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಅವರು ನಿಜವಾಗಿಯೂ ಈ ರೀತಿಯ ಉಡುಪು ಧರಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ AI ನಿಂದ ಸೃಷ್ಟಿಸಿದೆ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಟಿ ರಶ್ಮಿಕಾ ಮಂದಣ್ಣ ಆರೋಗ್ಯ ಪರಿಸ್ಥಿತಿ ಚಿಂತಾಜನಕ ಎಂಬ ಪೋಸ್ಟ್‌ನ ಅಸಲೀಯತ್ತೇನು ಗೊತ್ತೇ?

