FACT CHECK | ಮುಸ್ಲಿಂ ಮಹಿಳೆಯ ಮೇಲೆ ಹಿಂದೂ ಪುರಷರಿಂದ ಅತ್ಯಾಚಾರ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಬುರ್ಖಾ ಧರಿಸಿದ ಮಹಿಳೆಯನ್ನು ಮೂವರು ಪುರುಷರು ಅಪಹರಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂಕಿತ್ ತಿವಾರಿ, ಅಭಿನವ್ ಮತ್ತು ರಾಜು ಎಂಬ ಮೂವರು ಹಿಂದೂ ಪುರುಷರು ರಾಜಸ್ಥಾನದಲ್ಲಿ ಗುಲ್ಫಿಶಾ ಎಂಬ ಮುಸ್ಲಿಂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಕೆಲವರು ಹಂಚಿಕೊಂಡರೆ, ಇನ್ನೂ ಕೆಲವರು ಮೂವರು ಹಿಂದೂ ಅಪಹರಣಕಾರರು ಮಹಿಳೆಯನ್ನು ಅತ್ಯಾಚಾರ ನಡೆಸಿ ಕೊಂಡಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಫೆಬ್ರವರಿ 6, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಸ್ಲಿಮೇತರರೊಂದಿಗೆ ಸ್ನೇಹ ಬೆಳೆಸುವುದರ ಮತ್ತು ಅವರನ್ನು ನಂಬುವುದರ ಫಲಿತಾಂಶ ಈ ವೀಡಿಯೋ ಕೋಲ್ಕತ್ತಾದ ದೊಡ್ಡ ಕಾಲೇಜಿನ ಹಿಂದಿನ ಸಿಸಿಟಿವಿ ಕ್ಯಾಮರಾದಿಂದ ಬಂದಿದೆ. ಮುಸ್ಲಿಂ ಹುಡುಗಿ ಗುಲ್ ಫಾಶನ್ ತನ್ನ ಗೆಳೆಯ ಅಂಕಿತ್ ಜೊತೆ 2 ವರ್ಷಗಳಿಂದ ಹರಾಮ್ ಸಂಬಂಧದಲ್ಲಿ ವಾಸಿಸುತ್ತಿದ್ದಳು, ಹುಡುಗಿ ಗರ್ಭಿಣಿಯಾದಾಗ, ಹುಡುಗ ಹುಡುಗಿಯನ್ನು ಭೇಟಿಯಾಗಲು ಆಹ್ವಾನಿಸಿದನು, ನಂತರ ಅವಳ ಇಬ್ಬರು ಸ್ನೇಹಿತರಾದ ಅಭಿನು ಮತ್ತು ರಾಜು ಅವರು ಹುಡುಗಿಯನ್ನು ಕರೆತಂದರು ಶಾಲೆಯ ಹಿಂದೆ ಹುಡುಗಿ ಅವಳನ್ನು ಸ್ಕಾರ್ಪಿಯೋ ಕಾರಿನಲ್ಲಿ ಕರೆದೊಯ್ದಳು. ಹುಡುಗಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರ ನಡೆಸಲಾಯಿತು ಮತ್ತು ನಂತರ ಆಕೆಯ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
मुस्लिम लड़की गुलफिशा अपने ब्वॉयफ्रेंड अंकित के साथ 2 साल से रिलेशनशिप में रह रही थी 2 साल से अंकित गुलफिशा को इस्तेमाल कर रहा था जब लड़की प्रेग्नेंट हो गई तो शादी के लिए दबाव बनाया तो अंकित ने लड़की को मिलने बुलाया हासपिटल में बहाने से बुलाकर अंकित और उसके 2 दोस्त अभिनव और राजू… pic.twitter.com/JCeWUQNpj7
— Azad parinda (@Agkc16) February 3, 2025
ಧರ್ಮದಿಂದ ಮತ್ತು ಪ್ರಪಂಚದಿಂದಲೂ. ದೇವರೇ ನಿಮ್ಮ ಸಹೋದರಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಲಿ. ಇದು ಅಲೆದಾಡುವ ಮತ್ತು ದಾರಿತಪ್ಪಿದ ಮುಸ್ಲಿಂ ಹೆಣ್ಣುಮಕ್ಕಳಿಗೆ ಒಂದು ಪಾಠ ಮತ್ತು ಅವರ ಹೆತ್ತವರಿಗೆ ಮತ್ತು ಇಡೀ ಮುಸ್ಲಿಂ ಸಮುದಾಯಕ್ಕೆ ಒಂದು ಎಚ್ಚರಿಕೆ. ಅಲ್ಲಾ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರನ್ನು ಮುಸ್ಲಿಮೇತರ ಪುರುಷರು ಮತ್ತು ಮಹಿಳೆಯರು, ಹುಡುಗರು ಮತ್ತು ಹುಡುಗಿಯರ ಸ್ನೇಹ ಮತ್ತು ಮೋಹದಿಂದ ರಕ್ಷಿಸಲಿ. ಪ್ರಲೋಭನೆಯಿಂದ ಅವರನ್ನು ರಕ್ಷಿಸು ಮತ್ತು ಮುಸ್ಲಿಮರ ಗೌರವವು ಅವರು ತಮ್ಮ ಸಹೋದರಿಗಾಗಿ ಏನು ಮಾಡುತ್ತಾರೆ ಎಂಬುದನ್ನು ನೋಡಲು ಯೋಗ್ಯವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (ಆರ್ಕೈವ್)
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬಾಂಗ್ಲಾದೇಶದ ಲಾಫಿಂಗ್ ಚಾಟ್ 2 ಎಂಬ ಫೇಸ್‌ಬುಕ್ ಪುಟದಲ್ಲಿ ಇದೇ ವಿಡಿಯೋ ಅಪ್ಲೋಡ್ ಆಗಿರುವುದು ಕಂಡುಬಂತು. ಈ ವಿಡಿಯೋವನ್ನು 21 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ‘ಲವ್ ಪ್ರಮೋಸಲ್ ಒಪ್ಪದ ಕಾರಣ ಹುಡುಗಿಯನ್ನು ಎತ್ತಿಕೊಂಡು ಹೋದರು’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಈ ಫೇಸ್‌ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ ಈ ವಿಡಿಯೋಗೆ 4.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ, ಅಲ್ಲದೆ 22 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಹೀಗಾಗಿ ಈ ಪೇಜ್ ಅನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆಗ ಇದೇ ವೈರಲ್ ವೀಡಿಯೊದಲ್ಲಿರುವ ಸ್ಥಳದಲ್ಲಿ ಚಿತ್ರೀಕರಿಸಲಾದ ಮತ್ತೊಂದು ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದನ್ನು ಅವರ ಪುಟದಲ್ಲಿ 17 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದನ್ನು ನೀವು ಇಲ್ಲಿ ನೋಡಬಹುದು.
ನಾವು ಈ ಫೇಸ್‌ಬುಕ್ ಪೇಜ್ನ ಬಯೋವನ್ನು ಪರಿಶೀಲಿಸಿದಾಗ, ‘‘ನಮ್ಮ ವೀಡಿಯೊಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಇದು ಕೇವಲ ಮನರಂಜನೆಗಾಗಿ ಮಾತ್ರ. ಈ ಪುಟವನ್ನು ಅನುಸರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ರಂಜಿಸಲು ನಾವು ಶ್ರಮಿಸುತ್ತಿದ್ದೇವೆ’’ ಎಂದು ಬರೆದಿರುವುದು ಕಂಡುಬಂತು. ಹೀಗಾಗಿ ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂಬುದು ಸೂಚಿಸುತ್ತದೆ.
ನಂತರ ನಾವು ಈ ಫೇಸ್‌ಬುಕ್ ಪೇಜ್ನಲ್ಲಿರುವ ಇತರ ವೀಡಿಯೊಗಳನ್ನು ಸಹ ಪರಿಶೀಲಿಸಿದ್ದೇವೆ. ಆಗ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳೇ ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದೆವು. ಈ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಒಂದು ಸ್ಕ್ರಿಪ್ಟೆಡ್ ವಿಡಿಯೋವನ್ನು ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ನೈಜ ಘಟನೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಿಂದೂ ಹುಡುಗಿಯನ್ನು ಚುಡಾಯಿಸಿ ಪೊಲೀಸರ ಅತಿಥಿಯಾದ ವ್ಯಕ್ತಿ ಮುಸ್ಲಿಮನಲ್ಲ ಮತ್ತ್ಯಾರು?

