FACT CHECK | ವೈರಲ್ ಆಗುತ್ತಿರುವ ರೈಲು ಸುರಂಗ ಮಾರ್ಗದ ವಿಡಿಯೋದ ಅಸಲೀಯತ್ತೇನು ಗೊತ್ತೆ?
ಮೂರು ಸುರಂಗ ಮಾರ್ಗದಲ್ಲಿ ಏಕ ಕಾಲದಲ್ಲಿ ರೈಲುಗಳು ಸೇತುವೆಗಳ ಮೇಲೆ ಹಾದು ಹೋಗುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಚೀನಾ ದೇಶದ್ದು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
Shall we call it a three-dimensional railwaypic.twitter.com/V5byHaE6cp
— China Perspective (@China_Fact) February 12, 2025
ವೈರಲ್ ವಿಡಿಯೋದಲ್ಲಿ ಮೂರು ರೈಲುಗಳು ವಿಭಿನ್ನ ದಿಕ್ಕುಗಳಿಂದ ಬಂದು ಸುರಂಗದ ಮೂಲಕ ಹಾದು ಹೋಗುವುದನ್ನು ತೋರಿಸಲಾಗಿದೆ. ಚೀನಾ ಮತ್ತು ಜಪಾನ್ ದೇಶಗಳದ್ದೆಂದು ಹಲವರು ಭಾವಿಸಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್ ಹಾಗೂ ವ್ಯಾಟ್ಸಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Shall we call it a three-dimensional railway?
China pic.twitter.com/rZImryN9HX— thangam_Say No to Drugs & DMK (@Thanga_mahal) February 14, 2025
ಈ ವಿಡಿಯೋವನ್ನು @Thanga_mahal ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಮೊದಲು ಹಂಚಿಕೊಂಡಿದ್ದಾರೆ. ” ಇದನ್ನು ನಾವು ತ್ರಿ-ಆಯಾಮದ ರೈಲ್ವೆ ಎಂದು ಕರೆಯಬಹುದೇ?” ಎಂದು ಅವರು ಪ್ರಶ್ನಿಸಿದ್ದಾರೆ. @China_Fact ಎಂಬ ಇನ್ನೊಬ್ಬ ಬಳಕೆದಾರರು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡು ಇದೇ ರೀತಿಯ ಪ್ರಶ್ನೆ ಕೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಈ ವಿಡಿಯೋ ವ್ಯಾಪಕವಾಗಿ ಹರಿದಾಡಿದೆ.
View this post on Instagram
ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವಿಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ರೈಲುಗಳು ಸುರಂಗದ ಮೂಲಕ ಹಾದುಹೋಗುವಾಗ ಸೇತುವೆ ಅಲುಗಾಡುವುದು ಕಾಣಬಹುದು. ಇದು ವಿಡಿಯೋವನ್ನು ಕೃತಕವಾಗಿ ರಚಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
![]()
ಸುರಂಗದೊಳಗಿಂದ ರೈಲು ಸೇತುವೆಯ ಮೇಲೆ ಬರುವ ಮೊದಲು ನದಿಯ ನೀರು ಶಾಂತವಾಗಿರುತ್ತದೆ. ಆದರೆ, ರೈಲು ಹಾದು ಹೋಗುವಾಗ ನದಿಯಲ್ಲಿ ಏರಿಳತಗಳು ಆಗುದನ್ನು ಕಾಣಬಹುದು. ಇದೊಂದು ರೀತಿಯಲ್ಲಿ ಕೃತಕವಾಗಿರುವಂತೆ ಕಾಣುತ್ತದೆ. ವಾಸ್ತವದಲ್ಲಿ ಇಂತಹ ಯಾವುದೇ ಮೂರು ಆಯಾಮದ ರೈಲು ಸುರಂಗವು ಅಸ್ತಿತ್ವದಲ್ಲಿಲ್ಲ. AI ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿಕೊಂಡು ಈ ವಿಡಿಯೋವನ್ನು ರಚಿಸಿರುವುದು ಸ್ಪಷ್ಟವಾಗಿದೆ.
ವಿಡಿಯೋವನ್ನು ಹಂಚಿಕೊಂಡ ಬಳಕೆದಾರರು ಬಹುಶಃ ತಮಾಷೆಗಾಗಿ ಅಥವಾ ಗಮನ ಸೆಳೆಯುವ ಉದ್ದೇಶದಿಂದ ಹೀಗೆ ಮಾಡಿರಬಹುದು. ಆದರೆ ಈ ವಿಡಿಯೋವನ್ನು ವೀಕ್ಷಿಸುವ ಕೆಲವು ನೋಡುಗರು ಚೀನಾ ಅಥವಾ ಜಪಾನ್‌ನಲ್ಲಿ ಈ ರೀತಿ ಇದ್ದರೂ ಇರಬಹುದು ಎಂದು ಭಾವಿಸಿ ಈ ವಿಡಿಯೋವನ್ನು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಮೂರು ರೈಲ್ವೆ ಸುರಂಗದ ಮೂಲಕ ಏಕ ಕಾಲದಲ್ಲಿ ರೈಲುಗಳು ಬರುವ ವಿಡಿಯೋ ನಕಲಿಯಾಗಿದ್ದು, ಇದನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಎಡಿಟ್ ಮಾಡಲಾಗಿದೆ. ವಾಸ್ತವವಾಗಿ ವಿಡಿಯೋದಲ್ಲಿ ಕಂಡುಬರುವ ಇಂತಹ ರೈಲ್ವೇ ಸುರಂಗ ಮಾರ್ಗಗಳು ಅಸ್ತಿತ್ವದಲ್ಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬೆಂಕಿ? ವಿಡಿಯೋದ ಅಸಲೀಯತ್ತೇನು ಗೊತ್ತೇ?

